T20 World Cup 2021:ಕೊಹ್ಲಿ ಹುಟ್ಟುಹಬ್ಬಕ್ಕೆ ಭರ್ಜರಿ ಗೆಲುವಿನ ಗಿಫ್ಟ್, 3ನೇ ಸ್ಥಾನಕ್ಕೇರಿದ ಭಾರತ!

By Suvarna NewsFirst Published Nov 5, 2021, 10:15 PM IST
Highlights
  • ಸ್ಕಾಟ್‌ಲೆಂಡ್ ವಿರುದ್ದ ಭಾರತಕ್ಕೆ 8 ವಿಕೆಟ್ ಭರ್ಜರಿ ಗೆಲುವು
  • ರನ್‌ರೇಟ್‌ನಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್‌ಗಿಂತ ಉತ್ತಮ
  • 3ನೇ ಸ್ಥಾನಕ್ಕೇರಿದ ಟೀಂ ಇಂಡಿಯಾ

ದುಬೈ(ನ.05):  T20 World Cup 2021 ಟೀಂ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ನೆಟ್‌ರನ್‌ರೇಟ್ ಉತ್ತಮಪಡಿಸಿಕೊಂಡಿದೆ. ಸ್ಕಾಟ್‌ಲೆಂಡ್ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ(Team India) ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಇಷ್ಟೇ ಅಲ್ಲ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡಕ್ಕಿಂತ ಉತ್ತಮ ನೆಟ್‌ರನ್ ರೇಟ್ ಸಂಪಾದಿಸಿದೆ.

Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ..!

ಸತತ ಟಾಸ್ ಸೋಲುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದ(Virat Kohli Birthday) ದಿನ ಟಾಸ್ ಗೆದ್ದು ಸಂಭ್ರಮಿಸಿದರು. ಗೆಲುವಿನೊಂದಿಗೆ ರನ್‌ರೇಟ್ ಅನಿವಾರ್ಯದ ಕಾರಣ ಟಾಸ್ ಗೆದ್ದ ಕೊಹ್ಲಿ ಸ್ಕಾಟ್ಲೆಂಟ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ದಾಳಿಗೆ ಸ್ಕಾಟ್ಲೆಂಡ್ ತಂಡ ತತ್ತರಿಸಿತು. ಜಸ್ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಕೂಡ ಉತ್ತಮ ಸಾಥ್ ನೀಡಿದರು. ಇದರ ಪರಿಣಾಣ ಸ್ಕಾಟ್ಲೆಂಡ್ ಅಬ್ಬರಿಸಲು ಸಾಧ್ಯವಾಗಲೇ ಇಲ್ಲ. 

ಜಾರ್ಜ್ ಮುನ್ಸೆ ಸಿಡಿಸಿದ 24 ರನ್ ಸ್ಕಾಟ್ಲೆಂಡ್ ಪರ ದಾಖಲಾದ ಗರಿಷ್ಠ ವೈಯುಕ್ತಿ ಮೊತ್ತ. ಇನ್ನುಳಿದ ಬ್ಯಾಟ್ಸ್‌ಮನ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ನಾಯಕ ಕೈಲ್ ಕೊಯಟ್ಜರ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಶಮಿ 3, ಜಡೇಜಾ 3, ಬುಮ್ರಾ 2 ಹಾಗೂ ಅಶ್ವಿನ್ 1 ವಿಕೆಟ್ ಕಬಳಿಸಿದರು. ಈ ಮೂಲಕ ಸ್ಕಾಟ್‌ಲೆಂಡ್ 17.4 ಓವರ್‌ಗಳಲ್ಲಿ 85 ರನ್‌ಗೆ ಆಲೌಟ್ ಆಯಿತು.

T20 World Cup 2021: ಶ್ರೀಲಂಕಾ ವಿರುದ್ಧ ಸೋಲು, ವೆಸ್ಟ್ ಇಂಡೀಸ್ ಕನಸು ಛಿದ್ರ!

86 ರನ್ ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಅತೀ ಕಡಿಮೆ ಓವರ್ ಹಾಗೂ ಗರಿಷ್ಠ ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಿದರೆ ಮಾತ್ರ ಆಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿಸಲು ಸಾಧ್ಯ ಅನ್ನೋದನ್ನು ಟೀಂ ಇಂಡಿಯಾ ಅರಿತಿತ್ತು. ಇದಕ್ಕೆ ತಕ್ಕಂತೆ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಸ್ಪೋಟಕ ಆರಂಭ ನೀಡಿದರು. 

ಕೆಎಲ್ ರಾಹುಲ್ ಕೇವಲ 18 ಎಸೆತದಲ್ಲಿ 6 ಬೌಂಡರಿ ಹಾಗೂ3 ಸಿಕ್ಸರ್ ನೆರವಿನಿಂದ ಹಾಫ್ ಸೆಂಚುರಿ ಸಿಡಿಸಿದರು. 19 ಎಸೆತದ ಎದುರಿಸಿದ ರಾಹುಲ್ 50 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ರೋಹಿತ್ ಶರ್ಮಾ 16 ಎಸೆತದಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 30 ರನ್ ಕಾಣಿಕೆ ನೀಡಿದರು. ಭಾರತ 2ನೇ ವಿಕೆಟ್ ಪತನದ ವೇಳೆ 82 ರನ್ ಸಿಡಿಸಿತ್ತು. ನಾಯಕ ವಿರಾಟ್ ಕೊಹ್ಲಿ ಅಜೇಯ 2 ರನ್ ಹಾಗೂ ಸೂರ್ಯಕುಮಾರ್ ಯಾದವ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 6.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಭರ್ಜರಿ ಗೆಲುವಿನೊಂದಿಗೆ ಭಾರತ ನೆಟ್‌ರನ್ ರೇಟ್ +1.619. ಇದು ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನಕ್ಕಿಂತ ಉತ್ತಮ ರನ್‌ರೇಟ್ ಆಗಿದೆ. ಅಂಕಪಟ್ಟಿಯಲ್ಲಿ ಸದ್ಯ ಭಾರತ 3ನೇ ಸ್ಥಾನಕ್ಕೆ ಜಿಗಿದಿದೆ. ಮೊದಲ ಸ್ಥಾನದಲ್ಲಿ ಪಾಕಿಸ್ತಾನ, 2ನೇ ಸ್ಥಾನವನ್ನು ನ್ಯೂಜಿಲೆಂಡ್ ಪಡೆದುಕೊಂಡಿದೆ. ಇನ್ನು ಆಫ್ಘಾನಿಸ್ತಾನ 4ನೇ ಸ್ಥಾನಕ್ಕೆ ಕುಸಿದಿದೆ.

T20 World Cupನಲ್ಲಿ ಅತೀ ಹೆಚ್ಚು ಬಾಲ್ ಬಾಕಿ ಇರುವಂತೆ ಗೆಲುವು
90 ಎಸೆತ, ಶ್ರೀಲಂಕಾ v ನೆದರ್ಲೆಂಡ್ 2014
82, ಎಸೆತ, ಆಸ್ಟ್ರೇಲಿಯಾ v ಬಾಂಗ್ಲಾದೇಶ 2021
81 , ಎಸೆತ, ಭಾರತ v ಸ್ಕಾಟ್‌ಲೆಂಡ್ 2021  
77, ಎಸೆತ, ಶ್ರೀಲಂಕಾ  v ನೆದರ್ಲೆಂಡ್ 2021
74, ಎಸೆತ, ನ್ಯೂಜಿಲೆಂಡ್  v ಕೀನ್ಯಾ 2007
70, ಎಸೆತೆ, ಇಂಗ್ಲೆಂಜ್ v ವೆಸ್ಚ್ ಇಂಡೀಸ್, 2021

click me!