T20 World Cup 2021: ಹುಟ್ಟುಹಬ್ಬದ ದಿನ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ, ತಂಡದ ಬದಲಾವಣೆ ಏನು?

By Suvarna NewsFirst Published Nov 5, 2021, 7:05 PM IST
Highlights

ಭಾರತ ಹಾಗೂ ಸ್ಕಾಟ್‌ಲೆಂಡ್ ನಡುವಿನ ಮಹತ್ವದ ಟಿ20 ಪಂದ್ಯ
ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ
ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ದುಬೈ(ನ.05):  T20 World Cup 2021 ಟೂರ್ನಿ ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು ಟೀಂ ಇಂಡಿಯಾಗೆ(Team India) ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಇಂದು ಭಾರತ ಹಾಗೂ ಸ್ಕಾಟ್‌ಲೆಂಡ್(Scotland) ದುಬೈ ಕ್ರೀಡಾಂಗಣದಲ್ಲಿ ಮುಖಾಮುಖಿಯಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಶಾರ್ದೂಲ್ ಠಾಕೂರ್ ಬದಲು ವರುಣ್ ಚಕ್ರವರ್ತಿಗೆ ಅವಕಾಶ ನೀಡಲಾಗಿದೆ. ಸತತ ಟಾಸ್ ಸೋತಿದ್ದ ಕೊಹ್ಲಿ, ಹುಟ್ಟು ಹಬ್ಬದ ದಿನ ಟಾಸ್ ಗೆದ್ದ ಸಾಧನೆ ಮಾಡಿದ್ದಾರೆ.

Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ..!

ನಾಯಕ ವಿರಾಟ್ ಕೊಹ್ಲಿಗೆ ಹುಟ್ಟು ಹಬ್ಬದ ಸಂಭ್ರಮ. ಭರ್ಜರಿ ಗೆಲುವಿನ ಮೂಲಕ ಕೊಹ್ಲಿಗೆ ಬರ್ತ್‌ಡೇ ಗಿಫ್ಟ್ ನೀಡಲು ಟೀಂ ಇಂಡಿಯಾ ಸಜ್ಜಾಗಿದೆ. ದುಬೈ ಕ್ರೀಡಾಂಗಣದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ಇದುವರೆಗಿನ ಪಂದ್ಯಗಳು ಇದೇ ಫಾರ್ಮುಲಾ ಫಲಿತಾಂಶ ನೀಡಿದೆ. 

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಚಾಂಪಿಯನ್ ತಂಡ ಭಾರತ, ಆದರೆ ಈ ಬಾರಿ ಸಂಕಷ್ಟದಲ್ಲಿದೆ. ಸೂಪರ್ 12 ಹಂತದಲ್ಲಿ ಆರಂಭದಲ್ಲೇ ಮುಗ್ಗರಿಸಿದ ಟೀಂ ಇಂಡಿಯಾ ಸಣ್ಣ ಸೆಮಿಫೈನಲ್ ಆಸೆಯೊಂದಿಗೆ ಹೋರಾಟ ನಡೆಸುತ್ತಿದೆ. ಹೀಗಾಗಿ ಎಲ್ಲಾ ಪಂದ್ಯಗಳಲ್ಲಿ ಉತ್ತಮ ರನ್‌ರೇಟ್ ಗೆಲುವು ಟೀಂ ಇಂಡಿಯಾಗೆ ಅನಿವಾರ್ಯವಾಗಿದೆ.

ಅರ್ಹತಾ ಸುತ್ತಿನಲ್ಲಿ ಮಿಂಚಿನ ಪ್ರದರ್ಶನದ ನೀಡಿದ ಸ್ಕಾಟ್‌ಲೆಂಡ್, ಸೂಪರ್ 12 ಹಂತದಲ್ಲಿ ಉತ್ತಮ ಹೋರಾಟ ನೀಡಿದೆ. ಆದರೆ ಐಸಿಸಿ ರ್ಯಾಕಿಂಗ್ ತಂಡದ ಜೊತೆಗಿನ ಹೋರಾಟದಲ್ಲಿ ಗೆಲುವು ಕಷ್ಟ. ಆದರೆ ಸ್ಕಾಟ್‌ಲೆಂಡ್ ಹೋರಾಟ ಮೆಚ್ಚಿಕೊಳ್ಳಲೇಬೇಕು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ನ್ಯೂಜಿಲೆಂಡ್, ಸ್ಕಾಟ್‌ಲೆಂಡ್ ವಿರುದ್ಧ ಪ್ರಯಾಸದ ಗೆಲುವು ಕಂಡಿತ್ತು.

Team India ಏಕದಿನ ನಾಯಕತ್ವಕ್ಕೂ ವಿರಾಟ್‌ ಕೊಹ್ಲಿ ಗುಡ್‌ಬೈ?

ಪಾಕಿಸ್ತಾನ ವಿರುದ್ಧ 10 ವಿಕೆಟ್ ಸೋಲು ಹಾಗೂ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್  ಸೋಲು ಕಂಡಿರುವ ಟೀಂ ಇಂಡಿಯಾ ತೀವ್ರ ನಿರಾಸೆ ಅನುಭವಿಸಿತ್ತು. ಆರಂಭಿಕ 2 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಬೌಲಿಂಗ್ ಕೂಡ ಕೈಕೊಟ್ಟಿತ್ತು. ಇತ್ತ ಆಫ್ಘಾನಿಸ್ತಾನ ವಿರು್ದ್ಧ ಅಬ್ಬರಿಸಿದ ಟೀಂ ಇಂಡಿಯಾ 210 ರನ್ ಸಿಡಿಸಿತ್ತು. ಈ ಮೂಲಕ 66 ರನ್ ಗೆಲುವು ಸಾಧಿಸಿತ್ತು. ಇದು T20 World Cup 2021 ಟೂರ್ನಿಯಲ್ಲಿ ಟೀಂ ಇಂಡಿಯಾ ದಾಖಲಿಸಿದ ಮೊದಲ ಗೆಲುವಾಗಿದೆ. 

ಟೀಂ ಇಂಡಿಯಾ ಟಾಪ್ ಆರ್ಡರ್ ಹಾಗೂ ಮಧ್ಯಮಕ್ರಮಾಂಕ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಕಮ್‌ಬ್ಯಾಕ್ ಮಾಡಿದೆ. ಅದೇ ಪ್ರದರ್ಶವನ್ನು ಎಲ್ಲಾ ಪಂದ್ಯಗಳಲ್ಲೂ ಟೀಂ ಇಂಡಿಯಾ ನೀಡಬೇಕಿದೆ. ಈ ಮೂಲಕ ಸೆಮಿಫೈನಲ್ ಹಂತಕ್ಕೇರುವ ಅವಕಾಶವನ್ನು ಕೊಹ್ಲಿ ಸೈನ್ಯ ಬಳಸಿಕೊಳ್ಳಬೇಕಿದೆ.

ಅಂಕಪಟ್ಟಿ:
ಟಿ20 ವಿಶ್ವಕಪ್ ಟೂರ್ನಿಯಲ್ಲಿ 2ನೇ ಗುಂಪಿನಲ್ಲಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆಡಿದ 3 ಪಂದ್ಯದಲ್ಲಿ 1 ಗೆಲುವು ದಾಖಲಿಸಿದೆ. ಸ್ಕಾಟ್‌ಲೆಂಡ್ ಆಡಿದ 3 ಪಂದ್ಯದಲ್ಲಿ 3ರಲ್ಲೂ ಸೋಲು ಕಂಡಿರುವ ಸ್ಕಾಟ್‌ಲೆಂಡ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸ್ಕಾಟ್‌ಲೆಂಡ್ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. 

T20 World Cup 2021: ಶ್ರೀಲಂಕಾ ವಿರುದ್ಧ ಸೋಲು, ವೆಸ್ಟ್ ಇಂಡೀಸ್ ಕನಸು ಛಿದ್ರ!

2ನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ 4 ಪಂದ್ಯದಲ್ಲಿ 4ರಲ್ಲೂ ಗೆಲುವು ದಾಖಲಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇತ್ತ ಆಫ್ಘಾನಿಸ್ತಾನ 4 ಪಂದ್ಯದಲ್ಲಿ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 3ರಲ್ಲಿ 2 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. 

ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ. ಹೀಗಾಗಿ ಇನ್ನುಳಿದ ಒಂದು ಸ್ಥಾನಕ್ಕೆ ಆಫ್ಘಾನಿಸ್ತಾನ, ನ್ಯೂಜಿಲೆಂಡ್ ಹಾಗೂ ಭಾರತ ಹೋರಾಟ ನಡೆಸಲಿದೆ. 

click me!