ಮುಷ್ತಾಕ್‌ ಅಲಿ: ಜಾರ್ಖಂಡ್‌ ವಿರುದ್ಧ ಕರ್ನಾಟಕ ಜಯಭೇರಿ

By Web Desk  |  First Published Nov 23, 2019, 10:14 AM IST

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಜಯಸಾಧಿಸಿದೆ. ಜಾರ್ಖಂಡ್ ಎದುರು ಮನೀಶ್ ಪಡೆ 13 ರನ್‌ಗಳ ಗೆಲುವು ದಾಖಲಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಸೂರತ್‌[ನ.23]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೂಪರ ಲೀಗ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶುಕ್ರವಾರ ಇಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಜಾರ್ಖಂಡ್‌ ವಿರುದ್ಧ ಕರ್ನಾಟಕ 13 ರನ್‌ಗಳ ಗೆಲುವು ಪಡೆಯಿತು. 

Karnataka defeat Jharkhand by 13 runs in the second game of the super league.

— Karnataka Ranji Team/ ಕರ್ನಾಟಕ ರಣಜಿ ತಂಡ (@RanjiKarnataka)

ಮು​ಷ್ತಾಕ್‌ ಅಲಿ ಟ್ರೋಫಿ: ತಮಿಳುನಾಡನ್ನು ಮಣಿಸಿದ ಕರ್ನಾಟಕ

Latest Videos

undefined

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನೀಡಿದ 190 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಜಾರ್ಖಂಡ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಉತ್ಕರ್ಶ್ ಸಿಂಗ್‌ (11) ಸುಚಿತ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಆನಂದ್‌ ಸಿಂಗ್‌ (41), ವಿರಾಟ್‌ ಸಿಂಗ್‌ (76) ಹೊರತುಪಡಿಸಿದರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಆಟವಾಡಲಿಲ್ಲ. 20 ಓವರಲ್ಲಿ 5 ವಿಕೆಟ್‌ಗೆ 176 ರನ್‌ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ (63), ಕೆ.ಎಲ್‌. ರಾಹುಲ್‌ (36) ಮೊದಲ ವಿಕೆಟ್‌ಗೆ 114 ರನ್‌ಗಳ ಜೊತೆಯಾಟದಿಂದಾಗಿ ಕರ್ನಾಟಕ 20 ಓವರಲ್ಲಿ 6 ವಿಕೆಟ್‌ಗೆ 189 ರನ್‌ಗಳಿಸಿತು.

ದೇವದತ್‌ ಪಡಿಕ್ಕಲ್‌ ದಾಖಲೆ: ದೇಶಿ ಟೂರ್ನಿಯಲ್ಲಿ ಮಿಂಚುತ್ತಿರುವ ಎಡಗೈ ಬ್ಯಾಟ್ಸ್’ಮನ್ ದೇವದತ್ ಪಡಿಕ್ಕಲ್, 2019-20ನೇ ಆವೃತ್ತಿಯಲ್ಲಿ ಭಾರತದ ನೆಲದಲ್ಲಿ ಒಂದು ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್’ಮನ್ ಎನಿಸಿದ್ದಾರೆ. ದೇವದತ್ 21 ಪಂದ್ಯಗಳಿಂದ 1052 ರನ್ ಬಾರಿಸಿದ್ದು, ಈ ಆವೃತ್ತಿಯಲ್ಲಿ ಇನ್ನೂ ಪ್ರಥಮ ದರ್ಜೆ ಪಂದ್ಯವನ್ನಾಡಿಲ್ಲ. 13 ಲಿಸ್ಟ್ ’ಎ’ ಇನಿಂಗ್ಸ್’ಗಳಿಂದ 650 ರನ್ ಬಾರಿಸಿದ್ದರೆ, 8 ಟಿ20 ಪಂದ್ಯಗಳಿಂದ 402 ರನ್ ಬಾರಿಸಿದ್ದಾರೆ.

ಸ್ಕೋರ್‌: ಕರ್ನಾಟಕ 189/6
ಜಾರ್ಖಂಡ್‌ 176/5
 

click me!