KPL ಫಿಕ್ಸಿಂಗ್: ಬೆಂಗಳೂರು ಬ್ಲಾಸ್ಟರ್ ಕೋಚ್, ಆಟಗಾರನಿಗೆ ಪೊಲೀಸ್ ನೋಟೀಸ್!

By Web Desk  |  First Published Nov 22, 2019, 10:06 PM IST

KPL ಫಿಕ್ಸಿಂಗ್ ವಿಸ್ತಾರ ಮತ್ತಷ್ಟು ಆಳವಾಗುತ್ತಿದೆ. ಫ್ರಾಂಚೈಸಿ ಮಾಲೀಕರು, ಕೆಲ ಆಟಗಾರರ ನಡುವಿದ್ದ ಫಿಕ್ಸಿಂಗ್ ಇದೀಗ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೂ ವ್ಯಾಪಿಸಿದೆ. ಇದೀಗ ಆಟಗಾರ ಹಾಗೂ ಕೋಚ್ ವಿರುದ್ದ ದೂರು ದಾಖಲಾಗಿದ್ದು,  ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ.


ಬೆಂಗಳೂರು(ನ.22): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿರುವ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಪ್ರತಿ ದಿನ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಈಗಾಗಲೇ ಬಳ್ಳಾರಿ ಟಸ್ಕರ್ಸ್ ಆಟಗಾರರ ವಿಚಾರಣೆ ನಡೆಸಿರುವ ಪೊಲೀಸರು ಇದೀಗ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರ ಹಾಗೂ ಕೋಚ್‌ ಮೇಲೆ ಪೊಲೀಸರ ಕಣ್ಣು  ಬಿದ್ದಿದೆ.

ಇದನ್ನೂ ಓದಿ: KPL-TNPL ಗೂ ಇದೆಯಾ ಮ್ಯಾಚ್ ಫಿಕ್ಸಿಂಗ್ ನಂಟು..?

Tap to resize

Latest Videos

undefined

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿದೆ. ಈ ಮಾಹಿತಿ ಆಧಾರದಲ್ಲಿ ಎಸಿಪಿ ಎಸ್ ಎಂ.ನಾಗರಾಜ್ ಭಾರತೀನಗರ ರಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಫಿಕ್ಸಿಂಗ್ ಸಂಬಂಧ ಸಿಸಿಬಿ ಮುಂದೆ ಹಾಜರಾಗುವಂತೆ ಬೆಂಗಳೂರು ಬ್ಲಾಸ್ಟರ್ಸ್ ಆಟಗಾರರಾದ ಎಂ.ವಿಶ್ವನಾಥನ್, ವಿನು ಪ್ರಸಾದ್  ಹಾಗೂ ಕೋಚ್‌ಗೆ ನೋಟೀಸ್ ನೀಡಲಾಗಿದೆ.

ಇದನ್ನೂ ಓದಿ: KPL ಫಿಕ್ಸಿಂಗ್: ಹೆಣ್ಣಿನ ಆಸೆಗೆ ಮಣ್ಣು ತಿಂದ್ರಾ ಕ್ರಿಕೆಟರ್ಸ್?

ಭಾರತೀನಗರದ ಲೆಮನ್ ಟ್ರೀ ಹೋಟೇಲ್ ನಲ್ಲಿ ನಡೆದಿತ್ತೆನ್ನಲಾದ ಫಿಕ್ಸಿಂಗ್ ವಿಚಾರದ ಕುರಿತು ಪೊಲೀಸರಿಗೆ ಮಹತ್ವದ ಸುಳಿವು ನೀಡಿದೆ. ಎಫ್ ಐ ಆರ್ ಸಂಬಂಧ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆಟಗಾರ ಹಾಗೂ ಕೋಚ್ ಗೆ  ಐ ಓ ಪ್ರಕಾಶ್ ನೋಟೀಸ್ ನೀಡಿದ್ದಾರೆ. 
 

click me!