ಪಿಂಕ್ ಬಾಲ್ ಟೆಸ್ಟ್; ಕೊಹ್ಲಿ, ಪೂಜಾರ ಅರ್ಧಶತಕ, ಇನಿಂಗ್ಸ್ ಮುನ್ನಡೆ ಪಡೆದ ಭಾರತ!

Published : Nov 22, 2019, 08:42 PM IST
ಪಿಂಕ್ ಬಾಲ್ ಟೆಸ್ಟ್; ಕೊಹ್ಲಿ, ಪೂಜಾರ ಅರ್ಧಶತಕ, ಇನಿಂಗ್ಸ್ ಮುನ್ನಡೆ ಪಡೆದ ಭಾರತ!

ಸಾರಾಂಶ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದ ದಿನ ಭಾರತ ಮೇಲುಗೈ ಸಾಧಿಸಿದೆ. ಬೌಲಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಇದೀಗ ಬ್ಯಾಟಿಂಗ್‌ನಲ್ಲಿ ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ.

ಕೋಲ್ಕತಾ(ನ.22): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ  ಪಿಂಕ್ ಬಾಲ್ ಟೆಸ್ಟ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ. ಕೋಲ್ಕತಾ ನಗರ ಪಿಂಕ್ ಮಯವಾಗಿದೆ. ಇತ್ತ  ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿದೆ.  ಬಾಂಗ್ಲಾ ತಂಡವನ್ನು 106 ರನ್‌ಗೆ ಆಲೌಟ್ ಮಾಡಿದ ಟೀಂ ಇಂಡಿಯಾ, ಇದೀಗ ಮೊದಲ ಇನಿಂಗ್ಸ್‌ನಲ್ಲಿ 68 ರನ್ ಮುನ್ನಡೆ ಪಡೆದಿದೆ.

ಇದನ್ನೂ ಓದಿ: ಬಾಂಗ್ಲಾ ಕ್ರಿಕೆಟಿಗನ ತುರ್ತು ಚಿಕಿತ್ಸೆಗೆ ಭಾರತೀಯ ಫಿಸಿಯೋ ಕರೆದ ಕೊಹ್ಲಿ!.

ಬಾಂಗ್ಲಾ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಹಿಗ್ಗದ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಆರಂಭದಲ್ಲೇ ಆಘಾತ ಕಂಡಿತು. ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಕೇವಲ 14 ರನ್ ಸಿಡಿಸಿ ಔಟಾದರು. ಇನ್ನು ರೋಹಿತ್ ಶರ್ಮಾ 21 ರನ್ ಸಿಡಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.

ಇದನ್ನೂ ಓದಿ: ದೇಶದ ಜತೆ ಸೌರವ್ ಗಂಗೂಲಿ ಹಂಚಿಕೊಂಡ ಸ್ವೀಟ್ ‘ಸಂದೇಶ’

43 ರನ್‌ಗಳಿಗೆ ಭಾರತ 2 ವಿಕೆಟ್ ಕಳೆದುಕೊಂಡಿತು. ದಿಢೀರ್ ವಿಕೆಟ್ ಪತನದಿಂದ ಟೀಂ ಇಂಡಿಯಾ ಕೊಂಚ ಹಿನ್ನಡೆ ಅನುಭವಿಸಿತು. ಚೇತೇಶ್ವರ್ ಪೂಜಾರಾ ಹಾಗೂ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡೋ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಆತಂಕ ದೂರ ಮಾಡಿದರು. 

ಇದನ್ನೂ ಓದಿ: ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ನಲ್ಲಿ Pinkನದ್ದೇ ಕಾರುಬಾರು..!

ಚೇತೇಶ್ವರ್ ಪೂಜಾರಾ ಹಾಗೂ ಕೊಹ್ಲಿ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಪೂಜಾರ 55 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ ಜೊತೆ ಕೊಹ್ಲಿ ಇನಿಂಗ್ಸ್ ಮುಂದುವರಿಸಿದರು. ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿತು. ಕೊಹ್ಲಿ 59 ಅಜೇಯ ಹಾಗೂ ರಹಾನೆ ಅಜೇಯ 23 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಬಾಂಗ್ಲಾ ಮೊದಲ ಇನಿಂಗ್ಸ್:
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿತು. ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಬಾಂಗ್ಲಾ ತಂಡ 106 ರನ್‌ಗೆ ಆಲೌಟ್ ಆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯಕ್ಕೂ ಮೊದಲು ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಗೌರವ ನಮನ ಸೂಚಿಸಿದ ಆರ್‌ಸಿಬಿ
IPL 2026: ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್; ಪಾಂಡ್ಯ ಪಡೆಯಲ್ಲಿ ಎರಡು ಬದಲಾವಣೆ?