ಸಯ್ಯದ್ ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕೆ ಕರುಣ್‌ ನಾಯಕ

By Web Desk  |  First Published Nov 1, 2019, 2:18 PM IST

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು[ನ.01]: 2019ರ ವಿಜಯ್‌ ಹಜಾರೆ ಚಾಂಪಿಯನ್‌ ಕರ್ನಾಟಕ ತಂಡ, ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ ಸಜ್ಜಾಗಿದೆ. ಕರುಣ್ ನಾಯರ್’ಗೆ ರಾಜ್ಯ ತಂಡದ ನಾಯಕತ್ವಪಟ್ಟ ಕಟ್ಟಲಾಗಿದೆ.

ರಾಜ್ಯಕ್ಕೆ ಚೊಚ್ಚಲ ಮುಷ್ತಾಕ್ ಅಲಿ ಕಿರೀಟ

Tap to resize

Latest Videos

ನ 8ರಿಂದ ಡಿಸೆಂಬರ್‌ 1 ರವರೆಗೆ ಟೂರ್ನಿ ನಡೆಯಲಿದೆ. ನ. 8 ರಿಂದ 17 ರವರೆಗೆ ನಡೆಯಲಿರುವ ಮೊದಲ 3 ಪಂದ್ಯಗಳಿಗೆ 15 ಆಟಗಾರರ ಕರ್ನಾಟಕ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಹಾಲಿ ಚಾಂಪಿಯನ್‌ ಆಗಿರುವ ಕರ್ನಾಟಕ ತಂಡಕ್ಕೆ ಕರುಣ್‌ ನಾಯರ್‌ ನಾಯಕರಾಗಿದ್ದಾರೆ. ಬಾಂಗ್ಲಾ ವಿರುದ್ಧ ಟಿ20 ಸರ​ಣಿ​ಯಲ್ಲಿ ಆಡ​ಲಿ​ರುವ ಕಾರಣ, ಕೆ.ಎಲ್ ರಾಹುಲ್, ಮನೀಶ್‌ ಪಾಂಡೆ, ಟೆಸ್ಟ್‌ ಸರ​ಣಿ​ಯಲ್ಲಿ ಆಡ​ಲಿ​ರುವ ಮಯಾಂಕ್‌ ಅಗರ್‌ವಾಲ್‌ ಅಲ​ಭ್ಯ​ರಾ​ಗ​ಲಿ​ದ್ದಾರೆ.

ವಿಜಯ್ ಹಜಾರೆ ಟ್ರೋಫಿ; ತಮಿಳುನಾಡು ಮಣಿಸಿ ಕಪ್ ಗೆದ್ದ ಕರ್ನಾಟಕ!

ಕಳೆದ ಆವೃತ್ತಿಯಲ್ಲಿ ಕರ್ನಾಟಕ ತಂಡವು ಸತತ 12 ಗೆಲುವುಗಳನ್ನು ದಾಖಲಿಸುವುದರ ಮೂಲಕ ಅಜೇಯವಾಗಿಯೇ ಮುಷ್ತಾಕ್ ಅಲಿ ಟ್ರೋಫಿ ಜಯಿಸುವ ಮೂಲಕ ದೇಶಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದಿತ್ತು. ಇದೀಗ ಆ ದಾಖಲೆಯನ್ನು ಮುಂದುವರೆಸಿಕೊಂಡು ಹೋಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.  

ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಕರ್ನಾಟಕ ತಂಡವು ಉತ್ತರಖಂಡ, ಬರೋಡ ಹಾಗೂ ಆಂಧ್ರ ಪ್ರದೇಶ ತಂಡವನ್ನು ಎದುರಿಸಲಿದೆ. ವಿಕೆಟ್ ಕೀಪರ್ ಆಗಿ ಲವ್’ನೀತ್ ಸಿಸೋಡಿಯಾ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ: ಕರುಣ್‌ ನಾಯರ್‌ (ನಾಯಕ), ರೋಹನ್‌ ಕದಂ, ದೇವದತ್‌, ಪವನ್‌ ದೇಶಪಾಂಡೆ, ಅನಿರುದ್ಧ ಜೋಶಿ, ಪ್ರವೀಣ್‌ ದುಬೆ, ಲವನಿತ್‌ ಸಿಸೋಡಿಯಾ, ಕೆ. ಗೌತಮ್‌, ಸುಚಿತ್‌ ಜೆ., ಅಭಿಮನ್ಯು ಮಿಥುನ್‌, ವಿ. ಕೌಶಿಕ್‌, ಶ್ರೇಯಸ್‌ ಗೋಪಾಲ್‌, ಪ್ರತೀಕ್‌ ಜೈನ್‌, ನಿಹಾಲ್‌ ಉಲ್ಲಾಳ್‌, ಆರ್‌. ಸಮರ್ಥ್.

 

click me!