Switch Hit Shot: ಕ್ರಿಕೆಟ್​​​ನಿಂದ ಸ್ವಿಚ್​​​ ಹಿಟ್​ ಶಾಟ್​ ಬ್ಯಾನ್​ ಆಗುತ್ತಾ?

Published : Jul 16, 2022, 05:30 PM IST
Switch Hit Shot: ಕ್ರಿಕೆಟ್​​​ನಿಂದ ಸ್ವಿಚ್​​​ ಹಿಟ್​ ಶಾಟ್​ ಬ್ಯಾನ್​ ಆಗುತ್ತಾ?

ಸಾರಾಂಶ

ಕ್ರಿಕೆಟ್ ಜಗತ್ತಿನಲ್ಲಿ ಸ್ವಿಚ್ ಶಾಟ್ ಬ್ಯಾಟ್ಸಮನ್‌ಗಳು ಕೆಲವೇ ಕೆಲವರು. ಅದರಲ್ಲಿ ಕೆವಿನ್ ಪೀಟರ್‌ಸನ್, ಮ್ಯಾಕ್ಸ್‌ವೆಲ್ ಅವರು ಮೊದಲಿಗರೆಂದೇ ಹೇಳಬಹುದು. ಅವರು ಸ್ಚಿಚ್ ಶಾಟ್ ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಅಂತಹ ಸ್ವಿಚ್ ಹಿಟ್ ಶಾಟ್ ಕ್ರಿಕೆಟ್ ನಿಂದ ಬ್ಯಾನ್ ಆಗುತ್ತಿದೆ ಏಕೆ ಗೊತ್ತಾ? ಮುಂದೆ ಓದಿ 

ದುಬೈ(ಜು.16): ಸ್ವಿಚ್​​​ ಹಿಟ್ ಈ ಶಾಟ್​​​​​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಟಿ20 ಮಾದರಿ ಪರಿಚಯದ ಬಳಿಕ ಈ ಶಾಟ್​​​ ಹೆಚ್ಚು ಮುನ್ನಲೆಗೆ ಬಂತು. ಕ್ರಮೇಣ ಏಕದಿನ ಹಾಗೂ ಟೆಸ್ಟ್​​ನಲ್ಲೂ ಸ್ವಿಚ್​ ಹಿಟ್​​​ ಶಾಟ್​​ ಅನ್ನ ಬಾರಿಸಲು ಆಟಗಾರರು ಕರಗತ ಮಾಡಿಕೊಂಡ್ರು. ಒಂದು ಟೈಮ್​​​​ ಅಲ್ಲಿ ಅಪರೂಪ ಅನ್ನಿಸಿದ್ದ ಈ ಶಾಟ್​​​​​​​​​​​​, ಈಗ ಕಾಮನ್ ಆಗ್ಬಿಟ್ಟಿದೆ. ಹೊಸ ಆಟಗಾರರಿಂದ ಹಿಡಿದು  ಸ್ಟಾರ್​​ ಪ್ಲೇಯರ್ಸ್​ ಕೂಡ ಈ ಹೊಡೆತ ಬಾರಿಸಿ ಪ್ರೇಕ್ಷಕರನ್ನ ರಂಜಿಸ್ತಿದ್ದಾರೆ.

ಇಂಗ್ಲೆಂಡ್​​​ ತಂಡದ (England Team) ಕೆವಿನ್​ ಪೀಟರ್ಸನ್(Kevin Pietersen) ​​​ರಿಂದ ಹಿಡಿದು ಈಗಿನ ಗ್ಲೆನ್​ ಮ್ಯಾಕ್ಸ್​ವೆಲ್​ (Glenn Maxwell )ಸ್ವಿಚ್​​ ಹಿಟ್​ ಶಾಟ್ (Switch hit shot)​ ಆಡೋದ್ರಲ್ಲಿ ಪಂಟರ್​​. ಮ್ಯಾಕ್ಸಿಯಿಂದ ಬ್ಯಾಟ್​​ನಿಂದ ಮೂಡಿಬರೋ ಈ ಶಾಟ್​ ಅಂತೂ ನೋಡುಗರ ಕಣ್ಣಿಗೆ ಹಬ್ಬ. 

ಇದನ್ನೂ ಓದಿ: T20 World cup 2022: 13 ಪಂದ್ಯಗಳಲ್ಲಿ ರೆಡಿಯಾಗಬೇಕು ಟೀಮ್ ಇಂಡಿಯಾ

ಹೀಗೆ ದಶಕಗಳಿಂದ ಅಭಿಮಾನಿಗಳನ್ನ ರಂಜಿಸ್ತಿರೋ ಈ ಸ್ವಿಚ್​ ಹಿಟ್​ ಶಾಟ್​ ಅನ್ನ  ಬ್ಯಾನ್​ ಮಾಡಬೇಕು ಅನ್ನೋ ಆಗ್ರಹ ಬಲವಾಗಿ ಕೇಳಿ ಬರ್ತಿದೆ. ಹಾಲಿಯಿಂದ ಹಿಡಿದು ಮಾಜಿ ಕ್ರಿಕೆಟರ್ಸ್​ ಈ ವಿವಾದಾತ್ಮಕ ಹೊಡೆತವನ್ನ ಕ್ರಿಕೆಟ್​​​ನಿಂದ ತೆಗೆದು ಹಾಕಬೇಕೆಂದು ಪಟ್ಟು ಹಿಡಿದಿದ್ದಾರೆ. ಟೀಮ್​ ಇಂಡಿಯಾ ಆಲ್​ರೌಂಡರ್​​​ ಆರ್​​ ಅಶ್ವಿನ್​​​​​​ ಹಾಗೂ ಕಿವೀಸ್​​ ತಂಡದ ಸ್ಕಾಟ್​ ಸ್ಟೈರಿಸ್​​ ನಿಷೇಧಕ್ಕೆ ಒತ್ತಾಯಿಸಿದ್ದಾರೆ.

ವಿವಾದಾತ್ಮಕ ಹೊಡೆತ ಸ್ವಿಚ್​​ ಹಿಟ್​ : 
ಹೌದು, ಕ್ರಿಕೆಟ್​​​ನ ಹಲವು ವಿವಾದಾತ್ಮಕಗಳಲ್ಲಿ ಸ್ವಿಚ್​​​ ಹಿಟ್ ಕೂಡ. ಬ್ಯಾಟರ್​ಗಳು ಕೈ ಹಾಗೂ ಕಾಲನ್ನ ಬದಲಿಸಿ ಈ ಹೊಡೆತಕ್ಕೆ ಮುಂದಾಗುತ್ತಾರೆ. ಈ ವೇಳೆ ಬ್ಯಾಟರ್​ಗಳು ತಿರುಗಿದ ಕಾರಣಕ್ಕೆ ಎಲ್​​ಬಿಡಬ್ಯು ಎಂದು ಪರಿಗಣಿಸುದಿಲ್ಲ. ಇದು ಬೌಲರ್ಸ್​ ಪಾಲಿಗೆ ಮಾರಕ. ಅನ್​​​​ಕಂಡೀಷನಲ್​​​​ ಮತ್ತು ತುಂಬಾ ರಿಸ್ಕಿ ಕೂಡ. ಈ ಕಾರಣಕ್ಕೆ ಸ್ವಿಚ್​ ಹಿಟ್​​​ ಶಾಟ್ ಬ್ಯಾನ್ ಆಗಬೇಕು ಎನ್ನುವ ಕೂಗು ಕೇಳಿ ಬರ್ತಿದೆ.

ಇದನ್ನೂ ಓದಿ: ಗಡಿ ಮೀರಿದ ಕ್ರಿಕೆಟ್‌..! ವಿರಾಟ್ ಬೆಂಬಲಕ್ಕೆ ನಿಂತ ಅಜಂ ಟ್ವೀಟ್‌ಗೆ ನೆಟ್ಟಿಗರು ಫಿದಾ..!

ಒಟ್ಟಿನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​​​​​, ಕೆವಿನ್ ಪೀಟರ್ಸನ್​​ರ ​​ ಫೇವರಿಟ್​​​ ಸ್ವಿಚ್​​ ಹಿಟ್​​​​​​​ ಶಾಟ್​​​​ ಮೇಲೆ ಬ್ಯಾನ್​​ ತೂಗುಗತ್ತಿ ನೇತಾಡ್ತಿದೆ. ಬೌಲರ್ಸ್​ಗೆ ಮಾರಕವಾದ ಈ ಹೊಡೆತವನ್ನ ಐಸಿಸಿ ಬ್ಯಾನ್​ ಮಾಡುತ್ತಾ ? ಇಲ್ಲ ವಿರೋಧದ ಹೊರತಾಗಿ ವಿವಾದಾತ್ಮಕ ತೀರ್ಪಾಗಿ ಹಾಗೇ ಉಳಿದುಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?