ಟೀಂ ಇಂಡಿಯಾ ನಾಯಕತ್ವ ತೊರೆದ ನಂತರ ಕೊಹ್ಲಿ ವಿರಾಟ ರೂಪ ತೋರಿಸುತ್ತಿಲ್ಲ!

By Ravi Nayak  |  First Published Jul 16, 2022, 4:43 PM IST

ಕ್ರಿಕೆಟ್ ಜಗತ್ತಿನಲ್ಲಿ ಒಂದು ಕಾಲಕ್ಕೆ ಅಬ್ಬರಿಸಿದ್ದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೋಹ್ಲಿ ಟೀಂ ಇಂಡಿಯಾ ಕ್ಯಾಪ್ಟೆನ್ಸಿ ತೊರೆದ ನಂತರ ಕ್ರಿಕೆಟ್ ಲೈಫ್ ಕವಲುದಾರಿ ಹಿಡಿದಿದೆಯಾ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕೆ ಹೀಗಾಯ್ತು? ಇದುವರೆಗೆ ಆಡಿದ ಪಂದ್ಯಗಳೆಷ್ಟು?


ಲಂಡನ್ (ಜು.೧೬): ಟೀಂ ಇಂಡಿಯಾ ಕ್ಯಾಪ್ಟನ್ಸಿ ಬಿಟ್ಮೇಲೆ ವಿರಾಟ್ ಕೊಹ್ಲಿ ಕ್ರಿಕೆಟ್ ಲೈಫ್ ಕವಲು ದಾರಿ ಹಿಡಿದಿದೆ.. ಅವರು ಉತ್ತಮ ಫಾರ್ಮ್​ನಲಿಲ್ಲ. ಹಾಗಂದ ಮಾತ್ರಕ್ಕೆ ಕಳಪೆ ಫಾರ್ಮ್​ನಲ್ಲಿದ್ದಾರೆ ಅಂತ ಅಂದುಕೊಳ್ಳಬೇಡಿ. ದೊಡ್ಡ ದೊಡ್ಡ ಮೊತ್ತ ಬಾರಿಸುತ್ತಿಲ್ಲ ಅಷ್ಟೆ. ಆದರೆ 50 ರನ್​ಗೆ ಏನು ಮೋಸವಿಲ್ಲ. ಹಾಗಾಗಿನೇ ಕಿಂಗ್ ಕೊಹ್ಲಿಯನ್ನ ಡ್ರಾಪ್ ಮಾಡಲು ಬಿಸಿಸಿಐ ಹಿಂದೇಟು ಹಾಕುತ್ತಿರುವುದು. ಆದರೆ ರೆಸ್ಟ್ ನೆಪದಲ್ಲಿ ಅವರನ್ನ ಟೀಮ್​ನಿಂದ ಕೈಬಿಡುತ್ತಿದೆ ಅನ್ನೋ ಅನುಮಾನ ಈಗ ಶುರುವಾಗಿದೆ.

ಕೊಹ್ಲಿ ಆಡಿರೋದು ಜಸ್ಟ್ 15 ಮ್ಯಾಚ್: 
ಯೆಸ್, 2022ರಲ್ಲಿ ಟೀಂ ಇಂಡಿಯಾ(Team india) ಮೂರು ಫಾಮ್ಯಾಟ್​ನಿಂದ ಒಟ್ಟು 29 ಪಂದ್ಯಗಳನ್ನಾಡಿದ್ದು, ಅದರಲ್ಲಿ ಕಿಂಗ್ ಕೊಹ್ಲಿ(Virat kohli) ಆಡಿರೋದು ಕೇವಲ 15 ಮ್ಯಾಚ್ ಮಾತ್ರ. ಇನ್ನು ವೆಸ್ಟ್ ಇಂಡೀಸ್(West indies) ಟೂರ್​​ಗೂ ಸೆಲೆಕ್ಟ್ ಆಗದ ವಿರಾಟ್, ಅಲ್ಲಿ 8 ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. ಅಂದರೆ ನಾಳೆ ನಡೆಯೋ ಇಂಗ್ಲೆಂಡ್ ವಿರುದ್ಧದ ಪಂದ್ಯ ಸೇರಿದಂತೆ ವಿಂಡೀಸ್ ಟೂರ್​​ವರೆಗೆ ಭಾರತ ಈ ವರ್ಷ ಒಟ್ಟು 38 ಪಂದ್ಯಗಳನ್ನಾಡಲಿದ್ದು, ಅದರಲ್ಲಿ ಕೊಹ್ಲಿ ಆಡಿರೋದು 16 ಪಂದ್ಯ ಮಾತ್ರ. ಅಲ್ಲಿಗೆ ಬರೋಬ್ಬರಿ 22 ಮ್ಯಾಚ್​ಗಳನ್ನ ಅವರು ಮಿಸ್ ಮಾಡಿಕೊಂಡಿದ್ದಾರೆ.

Tap to resize

Latest Videos

ಇದನ್ನೂ ಓದಿ: T20 World cup 2022: 13 ಪಂದ್ಯಗಳಲ್ಲಿ ರೆಡಿಯಾಗಬೇಕು ಟೀಮ್ ಇಂಡಿಯಾ

ಈ ವರ್ಷ ಕಳೆದಿರುವುದು 7 ತಿಂಗಳಲ್ಲಿ ಕೊಹ್ಲಿಗೆ ಇಷ್ಟೊಂದು ಪಂದ್ಯಗಳಿಗೆ ರೆಸ್ಟ್​ ನೀಡಲಾಗಿದೆ. ಆಫ್ರಿಕಾ & ಇಂಗ್ಲೆಂಡ್ ವಿರುದ್ಧದ ಒಂದೊಂದು ಪಂದ್ಯದಲ್ಲಿ ಇಂಜುರಿಯಾಗಿ ಹೊರಗುಳಿದಿದ್ದರು. ಆದ್ರೆ ಉಳಿದ 20 ಪಂದ್ಯಗಳಿಗೆ ವಿಶ್ರಾಂತಿ ಕೊಡಲಾಗಿದೆ. ಕಳಪೆ ಫಾರ್ಮ್​ನಲ್ಲಿರುವ ಆಟಗಾರನಿಗೆ ಹೀಗೆ ಬ್ಯಾಕ್ ಟು ಬ್ಯಾಕ್ ರೆಸ್ಟ್ ನೀಡುತ್ತಿದ್ದರೆ ಅವರು ನೈಜ ಫಾರ್ಮ್​ಗೆ ಮರಳೋದು ಯಾವಾಗ. ಇದನ್ನ ನೋಡುತ್ತಿದ್ದರೆ, ರೆಸ್ಟ್ ರೂಪದಲ್ಲಿ ಟೀಮ್​ನಿಂದ ಡ್ರಾಪ್ ಮಾಡಲಾಗ್ತಿದ್ಯಾ ಅನ್ನೋ ಪ್ರಶ್ನೆ ಉದ್ಭವಿಸದೆ ಇರದು.

4114 ದಿನಗಳಲ್ಲಿ 70 ಶತಕ..  ಸಾವಿರ ದಿನವಾದ್ರೂ ಹೊಡೆದಿಲ್ಲ ಒಂದೂ ಶತಕ:
ಯೆಸ್, ಇದು ವಿರಾಟ್ ಕೊಹ್ಲಿಯ ಇನ್ನೊಂದು ಇಂಟ್ರೆಸ್ಟಿಂಗ್ ಸ್ಟೋರಿ. 4114 ದಿನಗಳಲ್ಲಿ ಬರೋಬ್ಬರಿ 70 ಶತಕಗಳನ್ನ ಸಿಡಿಸಿದ್ದ ಕಿಂಗ್ ಕೊಹ್ಲಿ, ಸಾವಿರ ದಿನವಾದ್ರೂ ಒಂದೂ ಶತಕ ದಾಖಲಿಸಿಲ್ಲ. ಆ 71ನೇ ಶತಕ ಹೊಡೆಯಲು ಸಾವಿರ ದಿನದಲ್ಲಿ ಸಾಧ್ಯವಾಗಿಲ್ಲ. 2019 ನವೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾ ಟೆಸ್ಟ್​ನಲ್ಲಿ ಕೊಹ್ಲಿ ಸೆಂಚುರಿ ಬಾರಿಸಿದ್ದೇ ಕೊನೆ. ಅಲ್ಲಿಂದ ಇಲ್ಲಿಯವರೆಗೆ ಶತಕ ದಾಖಲಿಸಿಲ್ಲ. 

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತ ಸೆಲೆಕ್ಟರ್ ಭಾರತದಲ್ಲಿನ್ನೂ ಹುಟ್ಟಿಲ್ಲ..!

ನಾಳೆ ಇಂಗ್ಲೆಂಡ್ ವಿರುದ್ಧ 3ನೇ ಒನ್​ಡೇ ಆಡೋ ಕೊಹ್ಲಿ, ನೆಕ್ಟ್ಸ್​ ಪ್ಯಾಡ್ ಕಟ್ಟಿ ಮೈದಾನಕ್ಕಿಳಿಯೋದು ಆಗಸ್ಟ್​ ಕೊನೆ ವಾರ ನಡೆಯೋ ಏಷ್ಯಾಕಪ್​​ನಲ್ಲೇ. 2019ರಿಂದ ಏಷ್ಯಾಕಪ್​ವರೆಗೆ ದಿನಗಳನ್ನ ಲೆಕ್ಕ ಹಾಕಿದರೆ ಸಾವಿರ ದಿನಗಳು ಆಗುತ್ತವೆ. ಆಕಸ್ಮಾತ್​ ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ್ರೆ ಸಾವಿರ ದಿನ ಒಳಗೆ ಶತಕ ಹೊಡೆಯಲಿದ್ದಾರೆ. ಸದ್ಯದ ಅವರ ಫಾರ್ಮ್​ ನೋಡಿದ್ರೆ ಅವರು ನಾಳೆಯೂ ಸೆಂಚುರಿ ಬಾರಿಸೋದು ಡೌಟೇ.

click me!