ಅಕ್ಟೋಬರ್-ನವೆಂಬರ್ನಲ್ಲಿ ನಡೆಯೋ ಟಿ20 ವರ್ಲ್ಡ್ಕಪ್ಗೆ ಜಸ್ಟ್ 90 ದಿನಗಳು ಮಾತ್ರ ಬಾಕಿ. ಬಹುತೇಕ ತಂಡಗಳು ವಿಶ್ವಕಪ್ಗೆ ತಂಡಗಳನ್ನ ಫೈನಲ್ ಮಾಡಿಕೊಂಡಿವೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಪ್ರಯೋಗದಲ್ಲಿ ಬಿದ್ದು ಒದ್ದಾಡುತ್ತಿದೆ.ಯಾಕೆ ಹೀಗೆ ಮಾಡುತ್ತಿದೆ ಅನ್ನೋದೇ ಸದ್ಯಕ್ಕಿರುವ ಯಕ್ಷಪ್ರಶ್ನೆ.
ಮುಂಬೈ(ಜು.16): ಕಾಂಗರೂ ನಾಡಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯೋ ಟಿ20 ವರ್ಲ್ಡ್ಕಪ್ಗೆ ಜಸ್ಟ್ 90 ದಿನಗಳು ಮಾತ್ರ ಬಾಕಿ. ಬಹುತೇಕ ತಂಡಗಳು ವಿಶ್ವಕಪ್ಗೆ ತಮ್ಮ ತಮ್ಮ ತಂಡಗಳನ್ನ ಫೈನಲ್ ಮಾಡಿಕೊಂಡಿವೆ. ಆದರೆ ಬಿಸಿಸಿಐ ಮಾತ್ರ ಇನ್ನೂ ಪ್ರಯೋಗದಲ್ಲಿ ಬಿದ್ದು ಒದ್ದಾಡುತ್ತಿದೆ. ಮಹಾ ಟೂರ್ನಿಗೂ ಮುನ್ನ ಭಾರತ ಆಡೋದು 13 ಪಂದ್ಯ ಮಾತ್ರ. ಆದ್ರೂ ಸ್ಟಾರ್ ಪ್ಲೇಯರ್ಸ್ಗೆ ವಿಶ್ರಾಂತಿ ಮೇಲೆ ವಿಶ್ರಾಂತಿ ನೀಡುತ್ತಿದೆ. ಬಿಸಿಸಿಐ ಯಾಕೆ ಹೀಗೆ ಮಾಡುತ್ತಿದೆ ಅನ್ನೋದೇ ಸದ್ಯಕ್ಕಿರುವ ಯಕ್ಷಪ್ರಶ್ನೆ.
ವಿಂಡೀಸ್ ಸರಣಿಯಿಂದ ಕೊಹ್ಲಿ-ಬುಮ್ರಾ-ಚಹಲ್ಗೆ ವಿಶ್ರಾಂತಿ:
ಕಳೆದ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಯುಎಇ(UAE)ನಲ್ಲಿ ಟಿ20 ವಿಶ್ವಕಪ್ (T20 world cup) ನಡೆದಿತ್ತು. ಆ ವರ್ಲ್ಡ್ಕಪ್ ಬಳಿಕ ಈ ಮೂವರು ಎಷ್ಟು ಟಿ20 ಪಂದ್ಯ ಆಡಿದ್ದಾರೆ ಗೊತ್ತಾ? ಕೇಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ. ವಿರಾಟ್ ಕೊಹ್ಲಿ(Virat kohli) 4, ಜಸ್ಪ್ರೀತ್ ಬುಮ್ರಾ (Jasprit Bumrah) 3 & ಯುಜವೇಂದ್ರ ಚಹಲ್ (Yuzvendra Chahal) 12 ಪಂದ್ಯಗಳನ್ನಾಡಿದ್ದಾರೆ. ಚಹಲ್ ಕಳೆದ ವಿಶ್ವಕಪ್ ಆಡಿರಲಿಲ್ಲ. ಹಾಗಾಗಿ ಅವರು ಟಿ20 ಟೀಮ್ಗೆ ಕಮ್ಬ್ಯಾಕ್ ಮಾಡಿದ್ದರಿಂದ ಅಷ್ಟು ಪಂದ್ಯ ಆಡಿದ್ದಾರೆ ಅಷ್ಟೆ. ಈ ಮೂವರು ಟಿ20 ವಿಶ್ವಕಪ್ ಆಡೋದ್ರಿಂದ ಹೆಚ್ಚೆಚ್ಚು ಪಂದ್ಯಗಳನ್ನ ಆಡಬೇಕಿತ್ತು. ಆದ್ರೆ ಆಡ್ತಿಲ್ಲ.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತ ಸೆಲೆಕ್ಟರ್ ಭಾರತದಲ್ಲಿನ್ನೂ ಹುಟ್ಟಿಲ್ಲ..!
ವಿಶ್ವಕಪ್ ಬಳಿಕ ಸ್ಟಾರ್ ಪ್ಲೇಯರ್ಸ್ ಒಂದೇ ಪಂದ್ಯದಲ್ಲಿ ಆಡಿಲ್ಲ:
ಇನ್ನೊಂದು ಆಶ್ಚರ್ಯಕರ ವಿಷಯವೇನಂದರೆ ಎಲ್ಲಾ ಸ್ಟಾರ್ ಪ್ಲೇಯರ್ಸ್ (Star players) ಕಳೆದ ವಿರ್ಶವಕಪ್ ಬಳಿಕ ಇಲ್ಲಿಯವರೆಗೂ ಒಂದೇ ಒಂದು ಪಂದ್ಯದಲ್ಲೂ ಒಟ್ಟಿಗೆ ಆಡಿಲ್ಲ. ಕೊಹ್ಲಿ, ರೋಹಿತ್, ರಾಹುಲ್, ಸೂರ್ಯ, ಜಡ್ಡು, ಚಹಲ್, ಬುಮ್ರಾ, ಭುವಿ, ಹೀಗೆ ವಿಶ್ವಕಪ್ಗೆ ಆಯ್ಕೆಯಾಗೋ ಎಲ್ಲಾ 15 ಆಟಗಾರರು ಮಹಾ ಟೂರ್ನಿಗೂ ಮುನ್ನ ಒಟ್ಟಿಗೆ ಆಡೋ ಪಂದ್ಯಗಳೆಷ್ಟು ಗೊತ್ತಾ..? ಜಸ್ಟ್ 8. ಆ 8 ಮ್ಯಾಚ್ನಲ್ಲಿ ಆಟಗಾರರು ಹೊಂದಾಣಿಕೆ ಮಾಡಿಕೊಂಡು ಆಡಬೇಕು. ಆ 8 ಪಂದ್ಯಗಳಲ್ಲಿ 15 ಆಟಗಾರರ ವೀಕ್ನೆಸ್-ಸ್ಟ್ರೆಂಥ್ ಅನ್ನ ಗುರುತಿಸಿಕೊಳ್ಳಬೇಕು. ವಿಶ್ವಕಪ್ನಲ್ಲಿ ಆಡೋ ಪ್ಲೇಯಿಂಗ್-11 ಫೈನಲ್ ಮಾಡಿಕೊಳ್ಳಬೇಕು. ಆ 8 ಮ್ಯಾಚ್ನಲ್ಲಿ ಇವೆಲ್ಲಾ ಸಾಧ್ಯವಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: 4,500 ಕೋಟಿ ಆಸ್ತಿ ಮಾಲೀಕ ಲಲಿತ್ ಮೋದಿ ಗರ್ಲ್ ಫ್ರೆಂಡ್ ಸುಶ್ಮಿತಾ ನಿವ್ವಳ ಆಸ್ತಿ ಎಷ್ಟು?
ವಿಂಡೀಸ್ ಸರಣಿಗೆ ಅಶ್ವಿನ್ ಆಯ್ಕೆ ಮಾಡಿದ್ದೇಕೆ..?:
ಇನ್ನು ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ನಿಂದ ಡ್ರಾಪ್ ಮಾಡಿದ್ದ ಆರ್. ಅಶ್ವಿನ್ ಅವರನ್ನ ವಿಂಡೀಸ್ ಟೂರ್ಗೆ ಸೆಲೆಕ್ಟ್ ಮಾಡಿದ್ದೇಕೆ..? ಅವರು ಕಳೆದ ವರ್ಷ ವಿಶ್ವಕಪ್ ಬಳಿಕ ಕೇವಲ ಎರಡು ಪಂದ್ಯ ಆಡಿದ್ದಾರೆ ಅಷ್ಟೆ. ಉಳಿದ 13 ಪಂದ್ಯಗಳಲ್ಲಿ ಅವರು ಈ ಸಲದ ವಿಶ್ವಕಪ್ಗೆ ರೆಡಿಯಾಗ್ತಾರಾ..? ಇದಕ್ಕೂ ಬಿಸಿಸಿಐ ಬಳಿ ಉತ್ತರವಿಲ್ಲ. ಇನ್ನು ಕಳೆದ ವರ್ಷದ ವರ್ಲ್ಡ್ಕಪ್ ಬಳಿಕ ಬಹುತೇಕ ಆಟಗಾರರು ಆಡದಕ್ಕಿಂತ ವಿಶ್ರಾಂತಿ ಪಡೆದಿದ್ದೇ ಜಾಸ್ತಿ. ಹಾಗಾದ್ರೆ ವಿಶ್ವಕಪ್ಗೆ ಸಿದ್ದತೆ ಯಾವಾಗ ಮಾಡೋದು. ಈ ಎಲ್ಲವನ್ನೂ ನೋಡುತ್ತಿದ್ದರೆ ಯಾಕೋ ಈ ಸಲವೂ ವಿಶ್ವಕಪ್ ಗೆಲ್ಲೋ ಭಾರತೀಯರ ಕನಸು ಕನಸಾಗಿಯೇ ಉಳಿಯುತ್ತಾ ಅನಿಸ್ತಿದೆ.