
ದೆಹಲಿ(ಮೇ.08): ಟೀಂ ಇಂಡಿಯಾದ ನಾಯಕತ್ವದ ಕುರಿತು ಹಲವು ಚರ್ಚೆಗಳಾಗಿವೆ. ಅದರಲ್ಲೂ ಯಾರು ಅತ್ಯುತ್ತಮ ನಾಯಕ ಅನ್ನೋ ಕುರಿತು ಹಲವು ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕರು ಒಂದೆರೆಡು ನಾಯಕರ ಅಡಿಯಲ್ಲಿ ಆಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮಾಜಿ ವೇಗಿ ಆಶಿಶ್ ನೆಹ್ರಾ ಸುಮಾರು 9ಕ್ಕೂ ಹೆಚ್ಚು ನಾಯಕರ ಅಡಿಯಲ್ಲಿ ಆಡಿದ್ದಾರೆ. ಇದೀಗ ನೆಹ್ರಾ ಈ ಎಲ್ಲಾ ನಾಯಕರ ಪೈಕಿ ಸೌರವ್ ಗಂಗೂಲಿಯೇ ಬೆಸ್ಟ್ ಎಂದಿದ್ದಾರೆ.
ಕೊರೋನಾ ಜಾಗೃತಿಗಾಗಿ ಬಿಸಿಸಿಐನಿಂದ ಟೀಂ ಮಾಸ್ಕ್ ಫೋರ್ಸ್!.
ಎಲ್ಲಾ ನಾಯಕರಲ್ಲೂ ವಿಶೇಷ ಪ್ರತಿಭೆ ಹಾಗೂ ಗುಣಗಳಿವೆ. ಆದರೆ ಸೌರವ್ ಗಂಗೂಲಿ ಇವರೆಲ್ಲರಿಗಿಂತ ಉತ್ತಮ ಎಂದಿದ್ದಾರೆ. ಆಟಗಾರರಿಗೆ ಬೆಂಬಲ, ಸಹಕಾರ ನೀಡುವುದರಲ್ಲಿ ಗಂಗೂಲಿ ಮೊದಲಿಗೆ. ಅದೆಷ್ಟೇ ಪ್ರತಿಭೆ, ಫಾರ್ಮ್ ಇದ್ದರೂ ಕೆಲವು ಪಂದ್ಯದಲ್ಲಿ ದುಬಾರಿಯಾಗುತ್ತಾರೆ. ಈ ಸಂದರ್ಭದಲ್ಲಿ ನಾಯಕರ ಅವರ ಬೆನ್ನಿಗೆ ನಿಲ್ಲಬೇಕು. ಇದರಲ್ಲಿ ಸೌರವ್ ಗಂಗೂಲಿಯನ್ನು ಮೀರಿಸುವ ನಾಯಕರಿಲ್ಲ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.
IPL 2020 ಆಯೋಜನೆ ಕುರಿತು ಸೌರವ್ ಗಂಗೂಲಿ ಖಡಕ್ ಮಾತು!..
ಕಳಪೆ ಫಾರ್ಮ್‌ನಿಂದ ಕಂಗೆಟ್ಟ ಆಟಗಾರರಿಗೆ ಗಂಗೂಲಿ ಬೆಂಬಲ ನೀಡುತ್ತಿದ್ದರು. ಇದರಿಂದ ಆಟಗಾರ ಕಳೆಪೆ ಫಾರ್ಮ್‌ನಿಂದ ಹೊರಬಂದು ಮತ್ತೆ ಅಬ್ಬರಿಸಲು ಸಾಧ್ಯವಾಗುತ್ತೆ. ಧೋನಿ ನಾಯಕತ್ವ ತುಂಬಾ ಲೆಕ್ಕಾಚಾರ. ಪಂದ್ಯ ಸ್ಥಿತಿ, ವೇಗವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಧೋನಿಗಿದೆ. ಹೀಗಾಗಿ ತಕ್ಷಣವೇ ಪ್ಲಾನ್ ಬದಲಾಯಿಸುತ್ತಾರೆ. ತಂಡವನ್ನು ನಿರ್ವಹಿಸುವ ರೀತಿ ಧೋನಿಗೆ ಚೆನ್ನಾಗಿ ಗೊತ್ತಿದೆ ಎಂದು ನೆಹ್ರಾ ಹೇಳಿದ್ದಾರೆ.
ಎಲ್ಲಾ ನಾಯಕರಿಗೆ ಹೋಲಿಸಿದರೆ ಸೌರವ್ ಗಂಗೂಲಿ ಉತ್ತಮ ನಾಯಕ. ಎಲ್ಲಾ ರೀತಿಯಿಂದಲೂ ಗಂಗೂಲಿ ಬೆಸ್ಟ್ ಎನಿಸಿಕೊಂಡಿದ್ದಾರೆ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.