ಟಿ20 ವಿಶ್ವ​ಕಪ್‌: ಇಂದು ಐಸಿ​ಸಿ ಜತೆ ಆಸೀಸ್‌ ಸಂಸ್ಥೆ ಮಹತ್ವದ ಸಭೆ

By Suvarna NewsFirst Published May 8, 2020, 9:52 AM IST
Highlights

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಹಣೆಬರಹ ಇಂದು ನಿರ್ಧಾರವಾಗಲಿದೆ. ಇಂದು ಐಸಿಸಿ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಲಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಮೆಲ್ಬರ್ನ್‌(ಮೇ.08): ಐಸಿಸಿ ಟಿ20 ವಿಶ್ವ​ಕಪ್‌ ನಡೆ​ಸು​ವ ಕುರಿತು ಶುಕ್ರ​ವಾ​ರ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ ಜತೆ ಕ್ರಿಕೆಟ್‌ ಆಸ್ಪ್ರೇ​ಲಿಯಾ ಆನ್‌ಲೈನ್‌ನಲ್ಲಿ ಸಭೆ ನಡೆ​ಸ​ಲಿದೆ. ಕ್ರಿಕೆಟ್‌ ಆಸ್ಪ್ರೇ​ಲಿಯಾ ಅಧಿ​ಕಾ​ರಿ​ಗಳು, ಟೂರ್ನಿ ಮುಂದೂ​ಡುವ ಬಗ್ಗೆ ನಿರ್ಧರಿ​ಸ​ಲು ಮತ್ತಷ್ಟು ಕಾಲಾ​ವ​ಕಾಶ ಕೋರುವ ಸಾಧ್ಯತೆಯಿದೆ. 

ಆಸ್ಟ್ರೇಲಿಯಾದಲ್ಲಿ ಅಕ್ಟೋ​ಬರ್‌-ನವೆಂಬರ್‌ನಲ್ಲಿ ವಿಶ್ವಕಪ್‌ ನಡೆ​ಯ​ಬೇ​ಕಿದ್ದು, ಸೆಪ್ಟೆಂಬರ್‌ ವರೆಗೂ ವಿದೇಶಿ ಪ್ರವಾ​ಸಿ​ಗರ ಪ್ರವೇ​ಶಕ್ಕೆ ನಿರ್ಬಂಧ ಹೇರ​ಲಾ​ಗಿದೆ. ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರ​ದಿ​ದ್ದರೆ ಟೂರ್ನಿ​ಯನ್ನು ಮುಂದೂ​ಡ​ಬೇ​ಕಾದ ಇಲ್ಲವೇ ರದ್ದು​ಗೊ​ಳಿ​ಸ​ಬೇ​ಕಾದ ಅನಿ​ವಾ​ರ್ಯತೆ ಎದು​ರಾ​ಗ​ಲಿದೆ.

ಕೋವಿಡ್ 19 ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಇದಕ್ಕೆ ಕ್ರಿಕೆಟ್ ಕೂಡಾ ಹೊರತಾಗಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ಬಿಡಿ, ದೇಸಿ ಟೂರ್ನಿಯೂ ಯಾವುದೇ ಮೂಲೆಯಲ್ಲಿ ನಡೆಯುತ್ತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಟೂರ್ನಿಗಳು ಕೊರೋನಾ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಟಿ20 ವಿಶ್ವಕಪ್‌ಗೆ ಜನ ಬರುವುದು ಅನುಮಾನ: ಆಸೀಸ್ ಕ್ರೀಡಾ ಸಚಿವ

ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿ ನಡೆಯುವುದರ ಬಗ್ಗೆಯೂ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ. ಆಸ್ಟ್ರೇಲಿಯಾ ಕೊರೋನಾ ಭೀತಿಯಿಂದಾಗಿ ತನ್ನ ಗಡಿಗಳನ್ನು ಬಂದ್ ಮಾಡಿದೆ. ಮಾತ್ರವಲ್ಲದೇ ವಿದೇಶಿ ಪ್ರವಾಸಿಗರ ಮೇಲೆಯೂ ಆರು ತಿಂಗಳು ನಿಷೇಧ ಹೇರಿದೆ. ಅಂದರೆ ಅಕ್ಟೋಬರ್ ಓಳಗಾಗಿ ಯಾವುದೇ ವಿದೇಶಿ ವಿಮಾನ ಹಾರಾಟಕ್ಕೂ ಬ್ರೇಕ್ ಬಿದ್ದಂತಾಗಿದೆ. 

ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಐಸಿಸಿ ಹಾಗೂ ಆಸ್ಟ್ರೇಲಿಯಾ ಸರ್ಕಾರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಇಂದು ನಡೆಯುವ ಸಭೆಯಲ್ಲಿ ಐಸಿಸಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ. 
 

click me!