ಪ್ರತಿ ಬಾರಿ ಕ್ರೀಸ್‌ಗಿಳಿ​ದಾಗ ಮೊದಲ 10 ಎಸೆ​ತ​ಗಳನ್ನು ಎದು​ರಿ​ಸುವಾಗ ಒತ್ತಡವಿರು​ತ್ತೆ: ಧೋನಿ

Suvarna News   | Asianet News
Published : May 08, 2020, 11:02 AM IST
ಪ್ರತಿ ಬಾರಿ ಕ್ರೀಸ್‌ಗಿಳಿ​ದಾಗ ಮೊದಲ 10 ಎಸೆ​ತ​ಗಳನ್ನು ಎದು​ರಿ​ಸುವಾಗ ಒತ್ತಡವಿರು​ತ್ತೆ: ಧೋನಿ

ಸಾರಾಂಶ

ನಾನು ಕೂಡಾ ಎಲ್ಲರಂತೆ ಮೊದಲ 5-10 ಎಸೆತಗಳನ್ನು ಎದುರಿಸುವಾಗ ಒತ್ತಡವನ್ನು ಅನುಭವಿಸುತ್ತೇನೆ ಎಂದು ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಚೆನ್ನೈ(ಮೇ.08): ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತಿ ಪಡೆ​ದಿ​ರುವ ಎಂ.ಎಸ್‌.ಧೋನಿ, ಕ್ರಿಕೆ​ಟಿ​ಗ​ರು ಎದು​ರಿ​ಸು​ವ ಮಾನ​ಸಿ​ಕ ಸಮಸ್ಯೆಗಳ ಬಗ್ಗೆ ಮಾತ​ನಾ​ಡಿದ್ದು, ತಾವು ಸಹ ಒತ್ತ​ಡಕ್ಕೆ ಒಳ​ಗಾ​ಗು​ವುದಾಗಿ ಹೇಳಿ​ಕೊಂಡಿ​ದ್ದಾರೆ. 

‘ಪ್ರತಿ ಬಾರಿ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿ​ದಾಗ ಮೊದಲ 5-10 ಎಸೆ​ತ​ಗಳನ್ನು ಎದು​ರಿ​ಸು​ವ ವೇಳೆ ಒತ್ತಡದಲ್ಲಿ​ರು​ತ್ತೇನೆ. ಔಟಾ​ಗು​ತ್ತೇನೋ ಎನ್ನುವ ಆತಂಕವೂ ಇರ​ಲಿದೆ’ ಎಂದು ಧೋನಿ ಹೇಳಿ​ದ್ದಾರೆ. ಇದೇ ವೇಳೆ ಭಾರತ ತಂಡಕ್ಕೆ ಪೂರ್ಣಾ​ವ​ಧಿ ಮೆಂಟಲ್‌ ಕಂಡೀ​ಷ​ನಿಂಗ್‌ ಕೋಚ್‌ನ ಅಗ​ತ್ಯ​ವಿದೆ ಎಂದು ಸಹ ಧೋನಿ ಹೇಳಿ​ದ್ದಾರೆ.‘ಸದ್ಯ 15 ದಿನ​ಕ್ಕೊಮ್ಮೆ ಮೆಂಟಲ್‌ ಕಂಡೀ​ಷ​ನಿಂಗ್‌ ಕೋಚ್‌ ಆಟ​ಗಾ​ರ​ರನ್ನು ಭೇಟಿ ಮಾಡುತ್ತಾರೆ. ಆ​ದರೆ ಇದ​ರಿಂದ ತಂಡಕ್ಕೆ ಲಾಭ​ವಾ​ಗು​ವು​ದಿಲ್ಲ’ ಎಂದು ತಿಳಿ​ಸಿ​ದ್ದಾರೆ.

ಸಣ್ಣ ಸಮಸ್ಯೆಯಿದ್ದರೂ ಅದನ್ನು ಕೋಚ್‌ ಬಳಿ ಹೇಳಿಕೊಳ್ಳಲು ನಾವೆಲ್ಲ ಹಿಂಜರಿಯುತ್ತೇವೆ. ಅದು ಯಾವುದೇ ಕ್ರೀಡೆಯಾದರೂ ಸರಿ ಆಟಗಾರರ ಹಾಗೂ ಕೋಚ್ ನಡುವೆ ಉತ್ತಮ ಸಂಬಂಧವಿರಬೇಕು ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವ​ಕಪ್‌: ಇಂದು ಐಸಿ​ಸಿ ಜತೆ ಆಸೀಸ್‌ ಸಂಸ್ಥೆ ಮಹತ್ವದ ಸಭೆ

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಐಪಿಎಲ್‌ಗಾಗಿ ಚೆನ್ನೈಗೆ ಬಂದಿಳಿದು ಕೆಲಕಾಲ ನೆಟ್ ಪ್ರಾಕ್ಟೀಸ್ ಆರಂಭಿಸಿದರಾದರೂ ಕೊರೋನಾ ಭೀತಿಯಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ಕ್ರಿಕೆಟ್ ಭವಿಷ್ಯ ಮುಂದೇನು ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್