
ಬೆಂಗಳೂರು (ಡಿ.28): ಟೀಂ ಇಂಡಿಯಾ (Team India) ಮಾಜಿ ನಾಯಕ ಎಂಎಸ್ ಧೋನಿ (MS Dhoni) ಕ್ರಿಕೆಟ್ ಲೋಕದಲ್ಲಿ ಇಂದಿಗೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ (International Cricket) ನಿವೃತ್ತರಾಗಿ ಕೆಲ ವರ್ಷಗಳು ಕಳೆದಿದ್ದರೂ ಕ್ರಿಕೆಟ್ ಲೋಕದಲ್ಲಿ ಧೋನಿ ಹೆಸರಿಗೆ ಇರುವ ಬೆಲೆ ಕಡಿಮೆಯಾಗಿಲ್ಲ. ಪ್ರಸ್ತುತ ಐಪಿಎಲ್ ನಲ್ಲಿ(IPL) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕರಾಗಿರುವ ಎಂಎಸ್ ಧೋನಿ, ಕೆಲ ತಿಂಗಳ ಹಿಂದೆ ಯುಎಇಯಲ್ಲಿ ಮುಕ್ತಾಯವಾದ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಲು ಯಶಸ್ವಿಯಾಗಿದ್ದರು.
2008ರ ಬಳಿಕ ಈವರೆಗೂ ಐಪಿಎಲ್ ನಲ್ಲಿ ಹರಾಜಿಗೆ ಒಳಪಡದ ಕೆಲವೇ ಕೆಲವು ಪ್ಲೇಯರ್ ಗಳಲ್ಲಿ ಎಂಎಸ್ ಧೋನಿ ಕೂಡ ಒಬ್ಬರು. 2008ರಲ್ಲಿ ಚೆನ್ನೈ ತಂಡಕ್ಕೆ ಐಕಾನ್ ಪ್ಲೇಯರ್ ಆಗಿ ಸೇರಿದ್ದರೆ, ಚೆನ್ನೈ ತಂಡ ಐಪಿಎಲ್ ನಿಂದ ಅಮಾನತುಗೊಂಡ ವರ್ಷದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಐಪಿಎಲ್ ತಂಡ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡದ ಸಹ ಮಾಲೀಕರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan ) ಕೂಡ ಧೋನಿಯನ್ನು ಐಪಿಎಲ್ ಹರಾಜಿನಲ್ಲಿ ಖರೀದಿ ಮಾಡಲೇಬೇಕು ಎಂದು ಹಿಂದೊಮ್ಮೆ ಪಣ ತೊಟ್ಟು ನಿಂತ್ರಿದ್ರಂತೆ. ಆದರೆ, ಅವರ ದುರಾದೃಷ್ಟಕ್ಕೆ ಧೋನಿ ಇನ್ನೂ ಐಪಿಎಲ್ ನಲ್ಲಿ ಹರಾಜಿಗೆ ಒಳಪಟ್ಟಿಲ್ಲ. 2008ರಲ್ಲಿ ಐಕಾನ್ ಪ್ಲೇಯರ್ ಗಳ ಹರಾಜಿನಲ್ಲಿ ಧೋನಿ 1.5 ಮಿಲಿಯನ್ ಡಾಲರ್ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದರು. ಅಂದು ಧೋನಿಗೆ ನೀಡಿದ್ದ ಮೊತ್ತ ಐಪಿಎಲ್ ದಾಖಲೆ ಎನಿಸಿತ್ತು. ಆದರೆ, ಅದಾದ ಬಳಿಕ ಚೆನ್ನೈ ತಂಡವನ್ನು ಅವರನ್ನು ತಂಡದಿಂದ ಬಿಡುಗಡೆ ಮಾಡಿರಲಿಲ್ಲ.
2016 ಹಾಗೂ 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರವಾಗಿ ಆಡಿದ್ದ ಧೋನಿ 2018ರಲ್ಲಿ ಚೆನ್ನೈ ತಂಡಕ್ಕೆ ಮರಳಿ ಸೇರಿದ್ದರು. ಈ ವೇಳೆ ಮಾತನಾಡಿದ್ದ ಶಾರುಖ್ ಖಾನ್, ಧೋನಿ ಹರಾಜಿನಲ್ಲಿ ಇದ್ದಿದ್ದರೆ ಪೈಜಾಮಾನಾದ್ರೂ ಮಾರಿ ಅವರನ್ನು ಖರೀದಿ ಮಾಡಲು ಉತ್ಸುಕನಾಗಿದ್ದೆ ಎಂದು ಹೇಳಿದ್ದರು.
Christmas 2021: ಫ್ಯಾಮಿಲಿ ಜೊತೆ ದುಬೈನಲ್ಲಿ ಧೋನಿ ಕ್ರಿಸ್ಮಸ್ ಸೆಲೆಬ್ರೆಷನ್!
"ಯರ್ ಮೇ ತೋ ಉಸ್ಕೋ ಅಪ್ನಾ ಪೈಜಾಮಾ ಬೇಚ್ ಕೆ ಭೀ ಖರೀದ್ ಲೂ, ವೋ ಆಯೆ ತೋ ಆಕ್ಷನ್ ಮೇ" (ನಾನು ಧೋನಿಯನ್ನು ನನ್ನ ಪ್ಯಾಂಟ್ ಮಾರಾಟ ಮಾಡಿ ಕೂಡ ಕೊಳ್ಳೋಕೆ ರೆಡಿ, ಆದ್ರು ಅವರು ಹರಾಜಿಗೆ ಬರ್ಬೇಕಲ್ಲ)" ಎಂದು ಎಸ್ ಆರ್ ಕೆ ಹೇಳಿದ್ದರು. ಜಾಗತಿಕವಾಗಿ ಎಲ್ಲರಿಂದಲೂ ಪ್ರೀತಿಗೆ ಪಾತ್ರರಾಗುವ ಕ್ರಿಕೆಟರ್ ಗಳಲ್ಲಿ ಒಬ್ಬರಾಗಿರುವ ಎಂಎಸ್ ಧೋನಿ, ಈವರೆಗೀ ಎಲ್ಲಾ ಮೂರೂ ಐಸಿಸಿ ಟ್ರೋಫಿ ಜಯಿಸಿದ ವಿಶ್ವದ ಏಕೈಕ ನಾಯಕ ಎನಿಸಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ನೇತೃತ್ವದಲ್ಲಿ ಜಯಿಸಿತ್ತು.
Pro Kabaddi League : ಪಟನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್ ಗೆಲುವಿನ ಸವಾರಿ!
ಇನ್ನೂ ಮೂರು ವರ್ಷ ಚೆನ್ನೈ ತಂಡಕ್ಕೆ ನಾಯಕ: ಈಗ ಇರುವ ಮಾಹಿತಿಯ ಪ್ರಕಾರ ಎಂಎಸ್ ಧೋನಿ ಇನ್ನೂ ಮೂರು ವರ್ಷಗಳ ಕಾಲ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ನಿವೃತ್ತಿಯ ಬಳಿಕ ಎಂಎಸ್ ಧೋನಿ ಅವರನ್ನು ತಂಡದ ಪ್ರಮುಖ ಸಿಬ್ಬಂದಿಯಾಗಿ ಅಥವಾ ಟೀಮ್ ಡೈರೆಕ್ಟರ್ ಆಗಿ ನೇಮಕ ಮಾಡುವ ಗುರಿಯಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಮೂಲಕವೇ ತಮ್ಮ ಟಿ20 ಕ್ರಿಕೆಟ್ ಜೀವನಕ್ಕೆ ತೆರೆ ಬೀಳಲಿದೆ ಎಂದು ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.