ಕ್ಲೀನ್ ಬೋಲ್ಡ್ ಆಗಿ ಟ್ರೋಲ್ ಆದ ಸ್ಟುವರ್ಟ್ ಬ್ರಾಡ್!

Published : Jan 04, 2020, 11:03 AM IST
ಕ್ಲೀನ್ ಬೋಲ್ಡ್ ಆಗಿ ಟ್ರೋಲ್ ಆದ ಸ್ಟುವರ್ಟ್ ಬ್ರಾಡ್!

ಸಾರಾಂಶ

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಗಮನಸೆಳೆದಿದ್ದರು. 47 ರನ್ ಸಿಡಿಸಿ ಅರ್ಧಶತಕದತ್ತ ಮುನ್ನಗ್ಗುತ್ತಿದ್ದ ಬ್ರಾಡ್ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗಿದ್ದಾರೆ. ಬ್ರಾಡ್ ಕ್ಲೀನ್ ಬೋಲ್ಡ್ ಈಗ ಟ್ರೋಲ್ ಆಗಿದೆ.

ಕೇಪ್ ಟೌನ್(ಜ.04): ಸೌತ್ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭದಲ್ಲೇ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹಾಸ್ಯಾಸ್ಪದ ರೀತಿಯಲ್ಲಿ ಔಟಾಗಿದ್ದಾರೆ. ರಬಾಡ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದ ಬ್ರಾಡ್‌ರನ್ನು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಮೈಕೆಲ್‌ ಜಾಕ್ಸನ್‌ನಂತೆ ಬಳುಕಿದ ಮ್ಯಾಥ್ಯೂ ವೇಡ್‌

ರಬಾಡ ಎಸೆತವನ್ನು ಡಿಫೆಂಡ್ ಮಾಡಿಕೊಳ್ಳಲು ಯತ್ನಿಸಿದ ಬ್ರಾಡ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ರಾಡ್ ಡಿಫೆಂಡ್ ಮಾಡಿಕೊಳ್ಳಲು ಬ್ಯಾಟ್ ಕೆಳಗಿಡುತ್ತಿದ್ದಂತೆ ಬ್ಯಾಟ್, ಬ್ರಾಡ್ ಪ್ಯಾಡ್‌ಗೆ ತಾಗಿದೆ. ಹೀಗಾಗಿ ಬಾಲ್ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ಬಾಲ್ ನೇರವಾಗಿ ಸ್ಟಂಪ್ ಎಗರಿಸಿತ್ತು

ಇದನ್ನೂ ಓದಿ: 300+ ಚೇಸಿಂಗ್; ಟೀಂ ಇಂಡಿಯಾ ನಂ.1!

2014ರಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಎಸೆತ ಮುಖಕ್ಕೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದರು. ಇಷ್ಟೇ ಅಲ್ಲ ಕೆಲ ತಿಂಗಳು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ಅಭಿಮಾನಿಗಳು ಬ್ರಾಡ್ ಕಾಮಿಡಿ ಬ್ಯಾಟಿಂಗ್ ಮುಂದುವರಿದಿದೆ ಎಂದು ಉಮೇಶ್ ಯಾದವ್ ಎಸೆತವನ್ನೂ ನೆನಪಿಸಿಕೊಂಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs NZ: ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕಾಂಗಿಯಾದ ಭಾರತ ತಂಡ; ಆಯ್ಕೆಗಾರರ ಈ ಎಡವಟ್ಟು ಯಾರಿಗೂ ತಿಳಿಯಲೇ ಇಲ್ಲ!
Cricket: 24 ಕೋಟಿ ಪಡೆದಿದ್ದ ಸ್ಟಾರ್ ಆಟಗಾರ ಐಪಿಎಲ್‌ನಿಂದ ಔಟ್? ಆಗಿದ್ದೇನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!