
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶಾಂತ ಸ್ವಭಾವಕ್ಕೆ ಹೆಸರುವಾಸಿ. ಅತಿರೇಕದ ಕೋಪ, ಮುಂಗೋಪ, ಬೇಡದ್ದ ವಿವಾವಾದಗಳಿಗೆ ಸಿಲುಕಿಕೊಳ್ಳುವುದೇ ಇಲ್ಲ. ಹೀಗಿದ್ದೂ ಅವರು ಒಮ್ಮೆ ಕೋಪಿಸಿಕೊಂಡು ಸಹ ಆಟಗಾರರ ಮೇಲೆ ಹರಿಹಾಯ್ದಿದ್ದರಂತೆ. ಆ ಕೋಪ ಎಷ್ಟಿತ್ತು ಅಂದರೆ.. ನೀವು ಕ್ರಿಕೆಟ್ ಆಡುವುದನ್ನೇ ಬಿಟ್ಟು ಬಿಡಿ ಎಂದು ದಬಾಯಿಸಿದ್ದರು ಎಂಬ ವಿಚಾರವನ್ನು ಅವರ ಆತ್ಮಕತೆಯಲ್ಲಿ ಬಹಿರಂಗಪಡಿಸಿದ್ದಾರೆ.
1997ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಬಾರ್ಬಡೋಸ್ ಟೆಸ್ಟ್ ಪಂದ್ಯ ನಡೆದಿತ್ತು. ಈ ವೇಳೆ ಅವರು ಕೋಪಗೊಂಡರು. ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ನಿರ್ಲಕ್ಷ್ಯ ವಹಿಸಿದ್ದರು. ಟೀಮ್ ಇಂಡಿಯಾಗೆ ಕೇವಲ 120 ರನ್ಗಳನ್ನು ಚೇಸ್ ಮಾಡಲು ಆಗಿರಲಿಲ್ಲ. ಸೋಲಿನ ನಂತರ ಸಚಿನ್ ಕೋಪಗೊಂಡು ಆಟಗಾರರ ಖಂಡಿಸಿದರು. ಇನ್ನು ಅವರೇ ತಂಡದ ನಾಯಕರಾಗಿದ್ದರು.
1997ರಲ್ಲಿ ಭಾರತ ತಂಡವು 5 ಪಂದ್ಯಗಳ ಟೆಸ್ಟ್ ಸರಣಿ ಮತ್ತು ನಾಲ್ಕು ಪಂದ್ಯಗಳ ಏಕದಿನ ಸರಣಿ ಆಡಲು ವೆಸ್ಟ್ ಇಂಡೀಸ್ ಪ್ರವಾಸ ಬೆಳೆಸಿತ್ತು. ಮೊದಲ ಎರಡು ಟೆಸ್ಟ್ ಪಂದ್ಯಗಳು ಡ್ರಾಗೊಂಡವು ಮತ್ತು ಭಾರತವು ಮೂರನೇ ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿತ್ತು. ಭಾರತೀಯ ಬ್ಯಾಟ್ಸ್ಮನ್ಗಳ ನಿರ್ಲಕ್ಷ್ಯದಿಂದಾಗಿ ಪಂದ್ಯ ಸೋತಿತು. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 298 ರನ್ ಗಳಿಸಿತು ಮತ್ತು ಇದಕ್ಕೆ ಪ್ರತಿಯಾಗಿ, ಟೀಮ್ ಇಂಡಿಯಾ 319 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ, ಕೆರಿಬಿಯನ್ ತಂಡವು 140 ರನ್ಗಳಿಗೆ ಆಲೌಟ್ ಆಯಿತು. ಆಗ ಭಾರತಕ್ಕೆ ಪಂದ್ಯ ಗೆಲ್ಲಲು 119 ರನ್ಗಳ ಅವಶ್ಯಕತೆ ಇತ್ತು. ಭಾರತವು 81 ರನ್ಗಳಿಗೆ ಆಲೌಟ್ ಆಗಿ 38 ರನ್ಗಳಿಂದ ಸೋತಿತು.
ಪಂದ್ಯದ ಸೋಲಿನ ನಂತರ ಭಾರತದ ನಾಯಕ ತೆಂಡೂಲ್ಕರ್ ಕೋಪಗೊಂಡಿದ್ದರು. ಅವರು ಡ್ರೆಸ್ಸಿಂಗ್ ಕೋಣೆಗೆ ಹೋಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅವರು ತಮ್ಮ ಆತ್ಮಚರಿತ್ರೆಯಲ್ಲಿ ಎಲ್ಲಾ ಆಟಗಾರರ ಮೇಲೆ ತುಂಬಾ ಕೋಪಗೊಂಡಿರುವುದಾಗಿ ಹೇಳಿದ್ದಾರೆ. ದೇಶಕ್ಕಾಗಿ ಆಡುವ ಬಗ್ಗೆ ಗಂಭೀರವಾಗಿರದವರು ತಮ್ಮ ಆಟವನ್ನು ತ್ಯಜಿಸಬೇಕು ಎಂದು ವಾರ್ನಿಂಗ್ ಮಾಡಿದ್ರಂತೆ. ಅಷ್ಟೇ ಅಲ್ಲ ಡ್ರೆಸ್ಸಿಂಗ್ ಕೋಣೆಯಲ್ಲಿ ನೀರಿನ ಬಾಟಲಿಗಳನ್ನು ಎಸೆದಿದ್ದರು ಎಂಬ ವರದಿಗಳೂ ಇವೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಸೋತಿತು. ಮೊದಲ ಎರಡು ಮತ್ತು ಕೊನೆಯ ಎರಡು ಪಂದ್ಯಗಳನ್ನು ಭಾರತ ಡ್ರಾ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ತಂಡವು ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆಲ್ಲಲು ಅವಕಾಶ ಮಾಡಿಕೊಟ್ಟಿತು. ಆ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿದ್ದರೆ ಅವರು ಸರಣಿಯನ್ನು ಗೆಲ್ಲಬಹುದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.