ಅನ್ಶುಲ್ ಕಾಂಬೋಜ್ ಮಾರಕ ಬೌಲಿಂಗ್ ದಾಳಿಯ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಸುನಿಲ್ ಗವಾಸ್ಕರ್

Published : Nov 05, 2026, 07:31 AM IST
Anshul Kamboj and Sunil Gavaskar

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 24 ವರ್ಷದ ಅನ್ಶುಲ್ ಕಾಂಬೋಜ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಇವರ ವೇಗ ಮತ್ತು ಫಿಟ್ನೆಸ್ ಬಗ್ಗೆ ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೌಲಿಂಗ್ ಶೈಲಿಯಲ್ಲಿ ಆಗಿರುವ ಸುಧಾರಣೆಯ ಬಗ್ಗೆ ಮಾತನ್ನಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 24 ವರ್ಷದ ಅನ್ಶುಲ್ ಕಾಂಬೋಜ್ ಅವರು ಸಂಚಲನ ಸೃಷ್ಟಿಸಿದರು. ಬೆಂಕಿಯ ಉಂಡೆಯಂಥ ಬಾಲ್‌ಗಳನ್ನ ಎಸೆದು ನ್ಯೂಜಿಲೆಂಡ್ ತಂಡದ ಬ್ಯಾಟರ್‍‌ಗಳಿಗೆ ನಡುಕ ಹುಟ್ಟಿಸಿದರು.

ತಮ್ಮ 10 ಓವರ್‍‌ನ ಕೋಟಾದಲ್ಲಿ ಅನ್ಶುಲ್ ಎರಡು ಮೇಡಿನ್ ಓವರ್ ಮಾಡಿ, ಕೇವಲ 22 ರನ್‌ಗಳನ್ನ ಮಾತ್ರ ನೀಡಿದರು. ಇನ್ನೊಂದು ವಿಶೇಷ ಅಂದ್ರೆ ಬರೋಬ್ಬರಿ 46 ಡಾಟ್ ಬಾಲ್ ಎಸೆದರು. ಆ ಮೂಲಕ 2.20 ಎಕನಾಮಿಕ್‌ನಲ್ಲಿ ಸ್ಪೆಲ್ ಮಾಡಿ ನ್ಯೂಜಿಲೆಂಡ್ ಬ್ಯಾಟರ್‍‌ಗಳಿಗೆ ಕಾಟ ಕೊಟ್ಟರು. ಜೊತೆಗೆ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ 2016 ನಂತರ 10 ಓವರ್‍‌ಗಳ ಪೂರ್ಣ ODI ಅವಧಿಯಲ್ಲಿ ಭಾರತೀಯ ಬೌಲರ್ ಒಬ್ಬ ಬಿಟ್ಟುಕೊಟ್ಟ ಅತ್ಯಂತ ಕಡಿಮೆ ರನ್ ಇದಾಗಿದೆ. ಕಾಂಬೋಜ್ ಅವರ ಬೌಲಿಂಗ್‌ಗೆ ಮಾರು ಹೋದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಹಿರಿಯ ವಿಶ್ಲೇಷಣೆಗಾರ ಸುನಿಲ್ ಗವಾಸ್ಕರ್ ಕೊಂಡಾಡಿದ್ದಾರೆ. ಇದೇ ವೇಳೆ ಅವರ ಬೌಲಿಂಗ್ ಶೈಲಿಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಗವಾಸ್ಕರ್ ಹೇಳಿದ್ದೇನು?

ಅನ್ಶುಲ್ ಕಾಂಬೋಜ್ ಅವರ ಬೌಲಿಂಗ್ ಶೈಲಿ ಕಂಡು ಬರೆಗಾದ ಸುನಿಲ್ ಗವಾಸ್ಕರ್, ಕಾಂಬೋಜ್ ಫಿಟ್ನೆಸ್ ಮತ್ತು ವೇಗದಲ್ಲಿ ನಾಟಕೀಯ ಬದಲಾವಣೆಗಳನ್ನು ನೋಡಿದೆ. ಅನ್ಶುಲ್ ಮೊದಲ ಓವರ್‍‌ನಿಂದಲೇ ಮೇಡನ್ ಓವರ್ ಶುರು ಮಾಡಿದರು. ಅವರ ಚೆಂಡು ಸ್ವಿಂಗ್ ಆಗುತ್ತಿತ್ತು ಮತ್ತು ವೇಗದಿಂದ ಬರುತ್ತಿತ್ತು ಎಂದಿದ್ದಾರೆ.

ಕಳೆದ ವರ್ಷ ನಾವು ಅವರನ್ನು ಇಂಗ್ಲೆಂಡ್‌ನಲ್ಲಿ ನೋಡಿದ್ದೇವೆ. ಅಲ್ಲಿ ಅವರ ವೇಗ ಗಂಟೆಗೆ ಸುಮಾರು 127 ರಿಂದ 130 ಕಿ.ಮೀ.ಗಳಷ್ಟಿತ್ತು. ಈಗ ಅವರ ಬೌಲಿಂಗ್ ಸ್ಪೀಡ್ 135 ಕಿಲೋ ಮೀಟರ್‍‌ಗಿಂತಲೂ ಹೆಚ್ಚಾಗಿದೆ. ಅವರು ಫಿಟ್ನೆಸ್‌ನಲ್ಲಿ ಭಾರೀ ಬದಲಾವಣೆ ಆಗಿದೆ.

ನೀವು ಲಯದಲ್ಲಿ ಇದ್ದಾಗ ನೋ ಬಾಲ್ ಎಸೆಯದಿರುವ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅನ್ಶುಲ್ ಅವರು ತಮ್ಮ ಸ್ಪೆಲ್‌ನಲ್ಲಿ ಒಂದೇ ಒಂದು ಮಿಡಲ್ ಅಥವಾ ಲೆಗ್‌ ಸ್ಟಂಪ್‌ನಲ್ಲಿ ಬಾಲ್ ಮಾಡಲಿಲ್ಲ. ಅವರು ಆಫ್ ಸ್ಟಂಪ್‌ನಲ್ಲಿ ಔಟ್‌ ಸೈಡ್‌ನಲ್ಲಿ ಮತ್ತೆ ಮತ್ತೆ ಬೌಲಿಂಗ್ ಮಾಡುತ್ತಿದ್ದರು ಎಂಬುದನ್ನ ತಿಳಿಸಿದರು.

ಪಂದ್ಯದ ಬಗ್ಗೆ ಹೇಳೋದಾದರೆ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 40.2 ಓವರ್‍‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 185 ರನ್‌ಗಳಿಸಿತು. ಭಾರತದ ಇನ್ನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಿಎಲ್‌ಎಸ್ ನಿಯಮದ ಪ್ರಕಾರ 32 ಓವರ್‍‌ಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಮಳೆ ನಿಂತ ಮೇಲೆ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 22.4 ಓವರ್‍ನಲ್ಲಿ ಐದು ವಿಕೆಟ್ ಕಳೆದುಕೊಂಡು 143 ರನ್‌ಗಳಿಸಿತ್ತು. ಟೀಂ ಇಂಡಿಯಾ ಪರ ನಾಯಕ ಗಿಲ್ 37 ರನ್‌ಗಳ ಕಾಣಿಕೆ ನೀಡಿದ್ರೆ, ಕಿಂಗ್ ಕೊಹ್ಲಿ 51 ಬಾಲ್‌ನಲ್ಲಿ 74 ರನ್‌ಗಳನ್ನ ಬಾರಿಸಿದರು. ಶ್ರೇಯಸ್ ಅಯ್ಯರ್ 15 ರನ್‌ಗಳಿಗೆ ಸೀಮಿತರಾದರು. ಅಷ್ಟರಲ್ಲೇ ಟೀಂ ಇಂಡಿಯಾ ಗೆಲುವಿನ ಸನೀಹಕ್ಕೆ ಬಂದಿತ್ತು. ನಮನ್ ಧೀರ್ ಹಾಗೂ ಕೆಎಲ್ ರಾಹುಲ್ ತಂಡವನ್ನು ಗೆಲ್ಲಿಸಿ ಅಜಯರಾಗಿ ಪೆವಿಲಿಯನ್‌ಗೆ ವಾಪಸ್ ಆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಹ್ಲಿ 74 ರನ್, ಅರ್ಷದೀಪ್ 4 ವಿಕೆಟ್ ಕಿತ್ತರೂ ಸಿಗಲಿಲ್ಲ ಮ್ಯಾನ್‌ ಆಫ್‌ ದಿ ಮ್ಯಾಚ್! 2 ವಿಕೆಟ್ ಪಡೆದ ಯುವ ಬೌಲರ್‍‌ಗೆ ಕೊಟ್ಟಿದ್ಯಾಕೆ?
SENA ದೇಶಗಳೆದರು ವಿರಾಟ್ ಕೊಹ್ಲಿ ಸಿಂಹಘರ್ಜನೆ; ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ನುಚ್ಚುನೂರು..!