ಕೊಹ್ಲಿ 74 ರನ್, ಅರ್ಷದೀಪ್ 4 ವಿಕೆಟ್ ಕಿತ್ತರೂ ಸಿಗಲಿಲ್ಲ ಮ್ಯಾನ್‌ ಆಫ್‌ ದಿ ಮ್ಯಾಚ್! 2 ವಿಕೆಟ್ ಪಡೆದ ಯುವ ಬೌಲರ್‍‌ಗೆ ಕೊಟ್ಟಿದ್ಯಾಕೆ?

Published : Nov 04, 2026, 06:07 PM IST
IND vs NZ Team India

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ಅರ್ಷದೀಪ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರೂ, ಕೇವಲ 2 ವಿಕೆಟ್ ಪಡೆದ ಅನ್ಶುಲ್ ಕಾಂಬೋಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇವತ್ತು ಮೊದಲ ಏಕದಿನ ಪಂದ್ಯದಲ್ಲಿ ಮುಖಾಮುಖಿ ಆಗಿತ್ತು. ಬೌಲಿಂಗ್ ವಿಭಾಗದಲ್ಲಿನ ಆತಂಕದ ಮಧ್ಯೆಯೇ ಕಣಕ್ಕೆ ಇಳಿದಿದ್ದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ, ಗೆಲುವು ಸಾಧಿಸಿದೆ. ಐದು ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇವತ್ತಿನ ಪಂದ್ಯ ಗೆಲುವಿಗೆ ಬೌಲರ್‍‌ಗಳ ಪಾತ್ರ ಅದ್ಭುತವಾಗಿತ್ತು. ನ್ಯೂಜಿಲೆಂಡ್ ತಂಡವನ್ನು 185 ರನ್‌ಗಳಿಗೆ ಟೀಂ ಇಂಡಿಯಾ ಬೌಲರ್‍‌ಗಳು ಕಟ್ಟಿ ಹಾಕಿದರು. ವಿಶೇಷ ಅಂದ್ರೆ ಅರ್ಷದೀಪ್ ಸಿಂಗ್ 4 ವಿಕೆಟ್ ಕಿತ್ತರೆ, ಗುರ್ನೂರ್ ಬ್ರಾರ್ ಮೂರು ವಿಕೆಟ್ ಪಡೆದರು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ 74 ರನ್‌ಗಳನ್ನ ಚಚ್ಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಈ ಮೂವರು ತಂಡದ ಗೆಲುವಿಗೆ ಪ್ರಮುಖ ಕಾರಣರಾದರೂ ಇವರಲ್ಲಿ ಯಾವಬ್ಬರಿಗೂ ಮ್ಯಾನ್‌ ಆಫ್‌ ದಿ ಮ್ಯಾಚ್ ಪ್ರಶಸ್ತಿ ಸಿಕ್ಕಿಲ್ಲ. ಬದಲಾಗಿ ಅನ್ಶುಲ್ ಕಾಂಬೋಜ್‌ ಪಂದ್ಯಶ್ರೇಷ್ಠ ಬೌಲರ್‍‌ ಗೌರವಕ್ಕೆ ಭಾಜನರಾದರು.

ಯಾಕೆ ಅನ್ಶುಲ್ ಕಾಬೋಜ್‌ಗೆ ಪಂದ್ಯಶ್ರೇಷ್ಠ

ಕೇವಲ 2 ವಿಕೆಟ್ ಪಡೆದ ಕಾಂಬೋಜ್‌ಗೆ ಯಾಕೆ ಪಂದ್ಯಶ್ರೇಷ್ಠ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ ಇವತ್ತಿನ ಪಂದ್ಯದಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ನ್ಯೂಜಿಲೆಂಡ್ ಬ್ಯಾಟರ್‍‌ಗಳ ಮೇಲೆ ಎಫೆಕ್ಟೀವ್ ಆಗಿ ದಾಳಿ ಮಾಡಿದರು. ಪ್ರತಿಯೊಬ್ಬ ಬ್ಯಾಟರ್‍‌ಗಳೂ ಕೂಡ ಒಂದೊಂದು ರನ್ ಗಳಿಸಲು ಪರದಾಡಿದರು. ಅಂದಹಾಗೆ ಕಾಂಬೋಜ್ ತಮ್ಮ ಕೋಟಾದ 10 ಓವರ್‍‌ಗಳಲ್ಲಿ ಬಿಟ್ಟುಕೊಟ್ಟ ರನ್ ಕೇವಲ 22 ಅಂದರೆ 2.20 ಎಕನಾಮಿಕ್‌ನಲ್ಲಿ ಸ್ಪೆಲ್ ಮಾಡಿದರು. ಅದರಲ್ಲಿ ಎರಡು ಮೇಡಿನ್ ಓವರ್ ಕೂಡ ಸೇರಿದೆ. ಅಷ್ಟೇ ಅಲ್ಲದೇ..ದಿಗ್ಗಜ ನಥಾನ್ ಸ್ಮಿತ್, ಕ್ಯಾಪ್ಟನ್ ಸ್ಯಾಂಟ್ನರ್‍‌ ವಿಕೆಟ್‌ಗಳ ಬೇಟೆ ಆಡಿದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವನ್ನು 200 ರನ್‌ ಒಳಗೆ ಕಟ್ಟಿ ಹಾಕುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಇದೇ ಕಾರಣಕ್ಕೆ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.

ಪಂದ್ಯದ ಬಗ್ಗೆ ಹೇಳೋದಾದರೆ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 40.2 ಓವರ್‍‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 185 ರನ್‌ಗಳಿಸಿತು. ಭಾರತದ ಇನ್ನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಿಎಲ್‌ಎಸ್ ನಿಯಮದ ಪ್ರಕಾರ 32 ಓವರ್‍‌ಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಮಳೆ ನಿಂತ ಮೇಲೆ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 22.4 ಓವರ್‍ನಲ್ಲಿ ಐದು ವಿಕೆಟ್ ಕಳೆದುಕೊಂಡು 143 ರನ್‌ಗಳಿಸಿತ್ತು. ಟೀಂ ಇಂಡಿಯಾ ಪರ ನಾಯಕ ಗಿಲ್ 37 ರನ್‌ಗಳ ಕಾಣಿಕೆ ನೀಡಿದ್ರೆ, ಕಿಂಗ್ ಕೊಹ್ಲಿ 51 ಬಾಲ್‌ನಲ್ಲಿ 74 ರನ್‌ಗಳನ್ನ ಬಾರಿಸಿದರು. ಶ್ರೇಯಸ್ ಅಯ್ಯರ್ 15 ರನ್‌ಗಳಿಗೆ ಸೀಮಿತರಾದರು. ಅಷ್ಟರಲ್ಲೇ ಟೀಂ ಇಂಡಿಯಾ ಗೆಲುವಿನ ಸನೀಹಕ್ಕೆ ಬಂದಿತ್ತು. ನಮನ್ ಧೀರ್ ಹಾಗೂ ಕೆಎಲ್ ರಾಹುಲ್ ತಂಡವನ್ನು ಗೆಲ್ಲಿಸಿ ಅಜಯರಾಗಿ ಪೆವಿಲಿಯನ್‌ಗೆ ವಾಪಸ್ ಆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

SENA ದೇಶಗಳೆದರು ವಿರಾಟ್ ಕೊಹ್ಲಿ ಸಿಂಹಘರ್ಜನೆ; ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ನುಚ್ಚುನೂರು..!
'ಗರ್ಲ್‌ಫ್ರೆಂಡ್‌ ಜತೆ ಒಟ್ಟಿಗೆ ಸಮಯ ಕಳೆಯುವಾಗ ಇಂತಹ ಡ್ಯಾನ್ಸ್‌ ಮಾಡ್ತೇವೆ': ವಿಭಿನ್ನ ಸೆಲೆಬ್ರೇಷನ್ ಗುಟ್ಟು ಬಿಚ್ಚಿಟ್ಟ ಅರ್ಶದೀಪ್ ಸಿಂಗ್