8 ವರ್ಷ ಕೋಮಾದಲ್ಲಿ ಕಳೆದು ಇಹಲೋಕ ತ್ಯಜಿಸಿದ ಕ್ರಿಕೆಟರ್

Published : Dec 31, 2025, 04:30 PM IST
Former Sri Lanka U19 Cricketer Akshu Fernando Dies

ಸಾರಾಂಶ

8 ವರ್ಷಗಳಿಂದ ಕೋಮಾದಲ್ಲಿದ್ದ ಶ್ರೀಲಂಕಾದ ಅಂಡರ್‌-19 ಟೀಂನ ಕ್ರಿಕೆಟರ್ ಅಕ್ಷು ಫೆರ್ನಾಂಡೋ ಅವರು ಮಂಗಳವಾರ ಡಿಸೆಂಬರ್ 30ರಂದು ಕೊನೆಯುಸಿರೆಳೆದಿದ್ದಾರೆ. ಭಯಾನಕ ರೈಲು ದುರಂತದ ನಂತರ ಅಕ್ಷು ಫೆರ್ನಾಂಡೋ ಅವರು ಕೋಮಾಗೆ ಜಾರಿದ್ದರು.

8 ವರ್ಷಗಳಿಂದ ಕೋಮಾದಲ್ಲಿದ್ದ ಶ್ರೀಲಂಕಾದ ಅಂಡರ್‌-19 ಟೀಂನ ಕ್ರಿಕೆಟರ್ ಅಕ್ಷು ಫೆರ್ನಾಂಡೋ ಅವರು ಮಂಗಳವಾರ ಡಿಸೆಂಬರ್ 30ರಂದು ಕೊನೆಯುಸಿರೆಳೆದಿದ್ದಾರೆ. ಭಯಾನಕ ರೈಲು ದುರಂತದ ನಂತರ ಅಕ್ಷು ಫೆರ್ನಾಂಡೋ ಅವರು ಕೋಮಾಗೆ ಜಾರಿದ್ದರು. 2018ರ ಡಿಸೆಂಬರ್ 28ರಿಂದು ಸಂಭವಿಸಿದ ಭೀಕರ ಅಪಘಾತದಿಂದಾಗಿ ಕೋಮಾಗೆ ಹೋಗಿದ್ದ ಅವರು ಮತ್ತೆ ಮೇಲೇಳಲೇ ಇಲ್ಲ. ಮೌಂಟ್ ಲ್ಯಾವಿನಿಯಾ ಬೀಚ್ ಬಳಿ ರೈಲ್ವೆ ಟ್ರ್ಯಾಕ್‌ ದಾಟುವ ವೇಳೆ ಅವರಿಗೆ ರೈಲು ಡಿಕ್ಕಿ ಹೊಡೆದು ಈ ಅನಾಹುತ ಸಂಭವಿಸಿತ್ತು. ತಂಡ ರನ್ನಿಂಗ್ ಸೆಸನ್ ಮುಗಿಸಿ ಬರುವ ವೇಳೆ ಈ ದುರಂತ ಸಂಭವಿಸಿದ್ದು, ಅಂದಿನಿಂದ ಅವರು ಕೋಮಾದಲ್ಲೇ ಇದ್ದರು. ಅವರ ತಲೆಗೆ ಗಂಭೀರ ಗಾಯವಾಗುವುದರ ಜೊತೆಗೆ ದೇಹದಲ್ಲೂ ಹಲವು ಫ್ಯಾಕ್ಚರ್‌ಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಕುಟುಂಬದವರು ಅವರನ್ನು ನಿರಂತರ ವೈದ್ಯಕೀಯ ಆರೈಕೆಯಲ್ಲಿ ಇರಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟರ ಕಾಮೆಂಟರ್ ರೋಷನ್ ಅಬೇಸಿಂಘೆ ಅವರನ್ನು ಉಲ್ಲೇಖಿಸಿ ಶ್ರೀಲಂಕಾದ ಪ್ರಮುಖ ಪತ್ರಿಕೆಯೊಂದು ಯುವ ಕ್ರಿಕೆಟಿಗ ಅಕ್ಷು ಫೆರ್ನಾಂಡೋ ನಿಧನದ ಸುದ್ದಿಯನ್ನು ವರದಿ ಮಾಡಿದೆ. ಅಕ್ಷು ಫರ್ನಾಂಡೊ ನಿಧನರಾದರು ಎಂಬ ದುಃಖದ ಸುದ್ದಿಯನ್ನು ಈಗಷ್ಟೇ ಕೇಳಿದೆ. ಅವರು ನಿಜವಾಗಿಯೂ ಅದ್ಭುತ ಯುವಕರಾಗಿದ್ದರು. ಆದರೆ ಹಲವು ಭರವಸೆಯನ್ನು ಹೊಂದಿದ್ದ ಅವರ ಕ್ರಿಕೆಟ್ ಜೀವನವೂ ಕ್ರೂರ ಅಪಘಾತದಿಂದ ಮೊಟಕುಗೊಂಡಿತು. ಅವರ ಶಾಲೆ ಒಬ್ಬರ ಉತ್ತಮ ಗುಣಮಟ್ಟದ ಆಟಗಾರ ಹಾಗೂ ಆತನ ಕೊನೆಯ ಕ್ಲಬ್ ರಾಗಮಾಗೆ ಉತ್ತಮ ಆಟಗಾರ. ನಮಗೆಲ್ಲರಿಗೂ ಇಂದು ದುಃಖದ ದಿನ. ಅವರು ಸದಾ ನಗುಮುಖದ ಸ್ನೇಹಪರ ಮತ್ತು ಸಂಪೂರ್ಣ ಸಂಭಾವಿತ ವ್ಯಕ್ತಿಯಾಗಿದ್ದರು. ನಾವು ಅಕ್ಷು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ ಮತ್ತು ನಮ್ಮ ಜೀವನದುದ್ದಕ್ಕೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ. ಪ್ರಿಯ ರಾಜಕುಮಾರನಿಗೆ ಶಾಂತಿ ಸಿಗಲಿ ಎಂದು ಅಬೇಸಿಂಘೆ ಅವರು ಹೇಳಿದ್ದಾಗಿ ಶ್ರೀಲಂಕಾದ ಮಾಧ್ಯಮವೊಂದು ವರದಿ ಮಾಡಿದೆ.

ಅಪಘಾತದ ಸಮಯದಲ್ಲಿ, ಫರ್ನಾಂಡೊ ಅವರನ್ನು ಶ್ರೀಲಂಕಾದ ಅತ್ಯಂತ ಪ್ರತಿಭಾನ್ವಿತ ಯುವ ಕ್ರಿಕೆಟ್ ಪ್ರತಿಭೆಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರು 2010 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಗಮನಾರ್ಹ ಸಾಧನೆ ಮಾಡಿದ್ದರು. ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಅವರು 52 ರನ್ ಗಳಿಸಿ,, ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡ ಶ್ರೀಲಂಕಾದ ಅಗ್ರ ಸ್ಕೋರರ್ ಎನಿಸಿದ್ದರು.

ಇದನ್ನೂ ಓದಿ: ಅಮ್ಮ ಹೊಲಿದ ಸ್ವೆಟರ್‌: ಹಾಸಿಗೆ ಹಿಡಿದಿದ್ದರೂ ಮಗನಿಗಾಗಿ ಸ್ವೆಟರ್ ಹೊಲಿದ 91 ವರ್ಷದ ತಾಯಿ

ಕೊಲಂಬೊದ ಸೇಂಟ್ ಪೀಟರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಫರ್ನಾಂಡೊ ಅವರ ಶಾಲಾ ಕ್ರಿಕೆಟ್ ವೃತ್ತಿಜೀವನವೂ ಕೂಡ ಅಸಾಧಾರಣವಾಗಿತ್ತು. ಅವರು ಅಂಡರ್-13, ಅಂಡರ್-15 ಮತ್ತು ಅಂಡರ್-17 ತಂಡಗಳನ್ನೂ ಮುನ್ನಡೆಸಿದ್ದರು. ಜೊತೆಗೆ ಅಂಡರ್-19 ತಂಡದ ಉಪನಾಯಕರು ಆಗಿದ್ದರು. ಕೋಲ್ಟ್ಸ್ ಸ್ಪೋರ್ಟ್ಸ್ ಕ್ಲಬ್, ಪಾಣದುರ ಸ್ಪೋರ್ಟ್ಸ್ ಕ್ಲಬ್, ಚಿಲಾವ್ ಮೇರಿಯನ್ಸ್ ಮತ್ತು ರಾಗಮಾ ಸ್ಪೋರ್ಟ್ಸ್ ಕ್ಲಬ್ ಸೇರಿದಂತೆ ಹಲವಾರು ಪ್ರತಿಷ್ಠಿತ ಸ್ಥಳೀಯ ಕ್ಲಬ್‌ಗಳಲ್ಲಿ ಕೆಲಸ ಮಾಡಿದ್ದರು.

ಇದನ್ನೂ ಓದಿ: ಬದುಕಿನಲ್ಲಿ ಮಾಡಬಾರದನ್ನು ಮಾಡಿದ ಯುವತಿ: ಅಪರಿಚಿತೆಯ ಬಳಿ ಬದುಕಿನ ಡಾರ್ಕೆಸ್ಟ್ ಸೀಕ್ರೇಟ್ ಕೇಳಿದವನಿಗೆ ಶಾಕ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡ ಪ್ರಕಟ; ಕಮ್‌ಬ್ಯಾಕ್ ಮಾಡಿದ ಮಾರಕ ವೇಗಿ!
16 ಸಿಕ್ಸರ್ 14 ಬೌಂಡರಿ..! ವಿಜಯ್ ಹಜಾರೆ ಟೂರ್ನಿಯಲ್ಲಿ ಸರ್ಫರಾಜ್-ಮುಶೀರ್ ಬೆಂಕಿ ಬ್ಯಾಟಿಂಗ್! ರೋಹಿತ್ ಶರ್ಮಾ ದಾಖಲೆ ನುಚ್ಚುನೂರು!