ಭಾನುವಾರ 2 ಗ್ರಾಂ ಹೆರಾಯಿನ್ನೊಂದಿಗೆ ಸಿಕ್ಕಿಬಿದ್ದಿದ್ದ ಶೆಹಾನ್‌ರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ಇದೀಗ ಲಂಕಾ ಕ್ರಿಕೆಟ್ ಬೋರ್ಡ್ ಶೆಹಾನ್ ಮದುಶನಕ ಅವರನ್ನು ಸಸ್ಪೆಂಡ್ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೊಲಂಬೊ(ಮೇ.27): ಕಾರಿನಲ್ಲಿ ಹೆರಾಯಿನ್ ಇಟ್ಟುಕೊಂಡು ಸಿಕ್ಕಿಬಿದ್ದಿದ್ದ ಶ್ರೀಲಂಕಾದ ವೇಗದ ಬೌಲರ್ ಶೆಹಾನ್ ಮದುಶನಕ ಅವರನ್ನು ಲಂಕಾ ಕ್ರಿಕೆಟ್ ಮಂಡಳಿ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ.
ಭಾನುವಾರ 2 ಗ್ರಾಂ ಹೆರಾಯಿನ್ನೊಂದಿಗೆ ಸಿಕ್ಕಿಬಿದ್ದಿದ್ದ ಶೆಹಾನ್‌ರನ್ನು ಪೊಲೀಸರು ಬಂಧಿಸಿದ್ದರು. ‘ತಕ್ಷಣದಿಂದಲೇ ಶೆಹಾನ್‌ರನ್ನು ಎಲ್ಲಾ ಮಾದರಿ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ. ತನಿಖೆ ಮುಕ್ತಾಯಗೊಳ್ಳುವ ವರೆಗೂ ಅವರು ಕ್ರಿಕೆಟ್ ಚಟುವಟಿಕೆಯಿಂದ ದೂರವಿರಲಿದ್ದಾರೆ’ ಎಂದು ಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಹೇಳಿದ್ದಾರೆ.
SLC decided to suspend Shehan Madushanka from all forms of cricket, with immediate effect.
The decision was taken following the player was arrested by the Police and later sent on remand custody for alleged possession of illegal drugs.
READ: https://t.co/jRUIMeMZ9u
ಲಂಕಾ ಬಲಗೈ ವೇಗಿ ಭಾನುವಾರವಷ್ಟೇ ಮತ್ತೊಬ್ಬ ವ್ಯಕ್ತಿಯೊಡನೆ ಕಾರಿನಲ್ಲಿ ಸಂಚರಿಸುವಾಗ ಪೊಲೀಸರು ತಪಾಸಣೆ ನಡೆಸಿದಾಗ ಹೆರಾಯಿನ್ ಕಾರಿನಲ್ಲಿ ಕಂಡು ಬಂದಿತ್ತು. ನಂತರ ಪೊಲೀಸರು ಸ್ಥಳೀಯ ಮ್ಯಾಜೆಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಆ ಬಳಿಕ ಶೆಹಾನ್ ಮದುಶನಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಡ್ರಗ್ಸ್ ಹೊಂದಿದ್ದ ಶ್ರೀಲಂಕಾ ಮಾರಕ ವೇಗಿ ಅರೆಸ್ಟ್..!
2018ರ ಜನವರಿಯಲ್ಲಿ ಶೆಹಾನ್ ಮದುಶನಕ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಾವಾಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧವೇ 2 ಟಿ20 ಪಂದ್ಯಗಳನ್ನು ಆಡಿದ್ದರು. ನಂತರ ಗಾಯಕ್ಕೆ ತುತ್ತಾಗಿದ್ದರಿಂದ ತಂಡದಿಂದ ಹೊರಗೆ ಉಳಿದಿದ್ದಾರೆ.