ಕಾರಿನಲ್ಲಿ ಡ್ರಗ್ಸ್ ಇಟ್ಟುಕೊಂಡಿದ್ದ ಶ್ರೀಲಂಕಾ ವೇಗದ ಬೌಲರ್ ಶೆಹಾನ್ ಮದುಶನಕ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೊಲಂಬೊ(ಮೇ.26): 2 ಗ್ರಾಂ ಹೆರಾಯಿನ್ ಇಟ್ಟುಕೊಂಡು ಕಾರಿನಲ್ಲಿ ತೆರಳುತ್ತಿದ್ದ ಶ್ರೀಲಂಕಾದ ಅಂತಾರಾಷ್ಟ್ರೀಯ ಕ್ರಿಕೆಟಿಗ ಶೆಹಾನ್ ಮದುಶನಕನನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ.
ಲಾಕ್ಡೌನ್ ವೇಳೆ ಕಾರ್ನಲ್ಲಿ ಸಂಚರಿಸುತ್ತಿದ್ದ ಶೆಹಾನ್ನನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದಾಗ, ಹೆರಾಯಿನ್ ಇಟ್ಟುಕೊಂಡಿರುವ ವಿಷಯ ಬೆಳ ಕಿಗೆ ಬಂದಿದೆ. ಶೆಹಾನ್ ಮದುಶನಕ ಹಾಗೂ ಆತನ ಸ್ನೇಹಿತನನ್ನು ಮೇ 23ರಂದು ಪೊಲೀಸರು ಬಂಧಿಸಿದ್ದಾರೆ.
ಲಂಕಾದ ಪನ್ನಾಲ ಮ್ಯಾಜಿಸ್ಟ್ರೇಟ್ ಕೋರ್ಟ್ ಶೆಹಾನ್ ಮದುಶನಕ ಅವರನ್ನು 14 ದಿನಗಳ ಕಾಲ ಅಂದರೆ ಜೂನ್ 02ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಬಗ್ಗೆ ಮಾತನಾಡಿದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಿಇಒ ಆಶ್ಲೇ ಡಿ ಸಿಲ್ವಾ, ನಮಗೆ ಇದುವರೆಗೂ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಶೆಹಾನ್ ಮದುಶನಕ ನಮ್ಮ ಕೇಂದ್ರೀಯ ಗುತ್ತಿಗೆ ಆಟಗಾರರಾಗಿದ್ದಾರೆ. ಒಂದು ವೇಳೆ ಡ್ರಗ್ಸ್ ತೆಗೆದುಕೊಂಡು ಹೋಗಿರುವ ವಿಚಾರ ಖಚಿತವಾದರೆ ಗುತ್ತಿಗೆ ರದ್ದು ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸಲ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!
Sri Lanka fast bowler Shehan Madushanka detained by the police for alleged possession of heroin. He had grabbed the spotlight when he claimed a hat-trick on his ODI debut. https://t.co/4FDqgi3nRn
— Cricbuzz (@cricbuzz)2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದ ಬಲಗೈ ವೇಗಿ ಶೆಹಾನ್, ಚೊಚ್ಚಲ ಏಕದಿನ ಪಂದ್ಯದಲ್ಲೇ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಇನ್ನು ಬಾಂಗ್ಲಾದೇಶ ವಿರುದ್ಧವೇ ಟಿ20 ಕ್ರಿಕೆಟ್ಗೂ ಪಾದಾರ್ಪಣೆ ಮಾಡಿದ್ದರು.