IPL ಹರಾಜಿನಲ್ಲಿ ನೆಲಕಚ್ಚಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದ್ರು ಮುಶ್ಫೀಕರ್ ರಹೀಮ್!

Suvarna News   | Asianet News
Published : May 26, 2020, 09:08 PM ISTUpdated : May 26, 2020, 09:17 PM IST
IPL ಹರಾಜಿನಲ್ಲಿ ನೆಲಕಚ್ಚಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದ್ರು ಮುಶ್ಫೀಕರ್ ರಹೀಮ್!

ಸಾರಾಂಶ

IPL ಟೂರ್ನಿಯಲ್ಲಿ ಆಡಬೇಕು ಅನ್ನೋದು ಬಹುತೇಕ ಕ್ರಿಕೆಟಿಗರ ಕನಸು. ಇದಕ್ಕೆ ಹಣ ಮಾತ್ರ ಕಾರಣವಲ್ಲ. ಐಪಿಎಲ್ ಅನುಭವ, ದಿಗ್ಗಜ ಕ್ರಿಕೆಟಿಗರ ಮಾರ್ಗದರ್ಶನ, ಒತ್ತಡದ ಸಂದರ್ಭ ನಿಭಾಯಿಸುವಿಕೆ, ಹೀಗೆ ಪ್ರತಿ ಹೆಜ್ಜೆಯಲ್ಲೂ ಐಪಿಎಲ್ ಸಾವಿರ ಪಾಠ ಕಲಿಸುತ್ತದೆ. ಆದರೆ ಎಲ್ಲರಿಗೂ ಐಪಿಎಲ್ ಆಡುವ ಅವಕಾಶ ಸಿಗುವುದಿಲ್ಲ. ಹೀಗೆ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡರೂ ಅನ್‌ಸೋಲ್ಡ್ ಆದ ಬಾಂಗ್ಲಾ ಕ್ರಿಕೆಟಿಗ ಇದೀಗ ಐಪಿಎಲ್ ಏನು ದೊಡ್ಡದಲ್ಲ ಬಿಡಿ ಎಂದಿದ್ದಾರೆ.

ಢಾಕ(ಮೇ.26):  ಕೊರೋನಾ ವೈರಸ್ ಕಾರಣ ಈ ಬಾರಿ ಐಪಿಎಲ್ ಟೂರ್ನಿಗೆ ಕಾರ್ಮೋಡ ಕವಿದಿದೆ. ಟೂರ್ನಿ ಆಯೋಜನೆ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಎಲ್ಲೂ ಕ್ರಿಕೆಟಿಗರೂ ಐಪಿಎಲ್ ಆಯೋಜನೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕಾರಣ ಪ್ರತಿ ಭಾರಿಯು ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರ ಭವಿಷ್ಯ ರೂಪಿಸುತ್ತದೆ. ಹೀಗೆ ತಾನೂ ಐಪಿಎಲ್ ಆಡಬೇಕು ಎಂದು ಬಾಂಗ್ಲಾದೇಶದ ಕ್ರಿಕೆಟಿಗ ಮುಶ್ಫೀಕರ್ ರಹೀಮ್ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಯಾವ ಫ್ರಾಂಚೈಸಿ ಖರೀದಿಸುವ ಆಸಕ್ತಿ ತೋರಲಿಲ್ಲ. ಹರಾಜಿನ ಬಳಿಕ ಪರೋಕ್ಷವಾಗಿ ಅಸಮಧಾನ ತೋಡಿಕೊಂಡಿದ್ದ ಮುಶ್ಫೀಕರ್ ಇದೀಗ ಮತ್ತೆ ಐಪಿಎಲ್ ಕುರಿತು ಮಾತನಾಡಿದ್ದಾರೆ.

ಈ ಸಲ್ ಕಪ್ ನಿಮ್ದೆ; RCB ಟ್ರೋಲ್ ಮಾಡಿದ CSK!

ಮುಶ್ಪೀಕರ್ ರಹೀಮ್ ಹೆಸರು ಅಂತಿಮವಾಗಿ ಹರಾಜಿಗೆ ಸೇರಿಸಲಾಗಿತ್ತು. ಇತ್ತ ಹರಾಜಿನಲ್ಲಿ ನಾಲ್ಕು ಬಾರಿ ಮುಶ್ಫೀಕರ್ ಹೆಸರು ಕೂಗಿದರೂ ಯಾವ ಫ್ರಾಂಚೈಸಿಯೂ ಖರೀದಿ ಮಾಡಲಿಲ್ಲ. ಇದೀಗ ಮುಶ್ಪೀಕರ್ ಐಪಿಎಲ್ ಆಡಲಿಲ್ಲ, ಐಪಿಎಲ್ ಟೂರ್ನಿಗೆ ಆಯ್ಕೆಯಾಗಿಲ್ಲ ಅನ್ನೋ ಕೊರಗಿಲ್ಲ. ಐಪಿಎಲ್ ಟೂರ್ನಿಗಿಂತ ಬಾಂಗ್ಲಾದೇಶ ಪ್ರತಿನಿಧಿಸುವುದು ದೊಡ್ಡದು ಎಂದಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ದಿಗ್ಗಜರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಕ್ರಿಕೆಟಿಗರಿಗೆ ಸಹಕಾರಿಯಾಗಲಿದೆ ನಿಜ. ಆದರೆ ಬಾಂಗ್ಲಾ ತಂಡದಲ್ಲಿ ದಿಗ್ಗಜ ಕ್ರಿಕೆಟಿಗರ ಜೊತೆ ಆಡಿದ್ದೇನೆ. ದೇಶಕ್ಕಾಗಿ ಆಡುವುದೇ ಹೆಮ್ಮೆಯ ವಿಚಾರ ಎಂದಿದ್ದಾರೆ.

ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು

ಮುಶ್ಫೀಕರ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾ ಅಭಿಮಾನಿಗಳು ಜೈಕಾರ ಹಾಕಿದ್ದರೆ, ಭಾರತ ಸೇರಿದಂತೆ ಇತರ ದೇಶದ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. ದೇಶಕ್ಕಾಗಿ ಆಡುವುದು ದೊಡ್ಡದೇ. ನಿಮ್ಮ ನಿಲುವು ಇದೇ ಆಗಿದ್ದರೆ, ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ