
ಗ್ರಾಸ್ ಐಲೆಟ್(ಜೂ.22): ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಂಡೀಸ್ ಎದುರು ಹರಿಣಗಳ ಪಡೆ 2-0 ಅಂತರದಲ್ಲಿ ಟೆಸ್ಟ್ ಸರಣಿ ಕ್ಲೀನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ
ಸೋಮವಾರ(ಜೂ.21) ನಡೆದ ಪಂದ್ಯದ 4ನೇ ದಿನದಾಟದಲ್ಲಿ ಮಹಾರಾಜ್, ವಿಂಡೀಸ್ 2ನೇ ಇನ್ನಿಂಗ್ಸ್‌ನ 37ನೇ ಓವರಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದರು. ವಿಂಡೀಸ್‌ನ ಕೀರನ್ ಪೋವೆಲ್, ಜೇಸನ್ ಹೋಲ್ಡರ್ ಹಾಗೂ ಜೋಶ್ವಾ ಡಾ ಸಿಲ್ವಾರನ್ನು ಸತತ 3 ಎಸೆತಗಳಲ್ಲಿ ಔಟ್ ಮಾಡಿ, ಮಹಾರಾಜ್ ಹ್ಯಾಟ್ರಿಕ್ ಸಾಧಿಸಿದರು.
ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಕೇವಲ 2ನೇ ಬೌಲರ್ ಎನ್ನುವ ದಾಖಲೆ ಬರೆದರು. ಈ ಮೊದಲು 1960ರಲ್ಲಿ ಜೆಫ್ ಗ್ರಿಫ್ಫಿನ್, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
ಮಳೆ ಆಟಕ್ಕೆ ಭಾರತ-ನ್ಯೂಜಿಲೆಂಡ್ ಸುಸ್ತು, ನಾಲ್ಕನೇ ದಿನದಾಟ ಅಂತ್ಯ!
ದಕ್ಷಿಣ ಆಫ್ರಿಕಾ ತಂಡವು ನೀಡಿದ್ದ 324 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 165 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತವರಿನಲ್ಲೇ ಮುಖಭಂಗ ಅನುಭವಿಸಿತು. ಕೇಶವ್ ಮಹರಾಜ್ ಕೇವಲ 36 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.