2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಈ ಫೈನಲ್ ಪಂದ್ಯವು ಕೆಲವು ಸ್ಟಾರ್ ಆಟಗಾರರ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಬಾರ್ಬಡಾಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಏಯ್ಡನ್ ಮಾರ್ಕ್‌ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಎರಡು ತಂಡಗಳು ಅಜೇಯವಾಗಿಯೇ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಇನ್ನು ಈ ಫೈನಲ್ ಪಂದ್ಯವು ಈ ಕೆಳಕಂಡ ಸ್ಟಾರ್ ಕ್ರಿಕೆಟಿಗರ ಪೈಪೋಟಿಗೂ ಸಾಕ್ಷಿಯಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ರೋಹಿತ್ ಶರ್ಮಾ vs ಮಾರ್ಕೊ ಯಾನ್ಸನ್
undefined
ಪವರ್-ಪ್ಲೇನಲ್ಲೇ ಸ್ಫೋಟಕ ಆಟವಾಡುತ್ತಿರುವ ರೋಹಿತ್ ಶರ್ಮಾಗೆ ಆರಂಭಿಕ ಸ್ಪೆಲ್‌ನಲ್ಲೇ ಮಾರಕವಾಗುತ್ತಿರುವ ಎಡಗೈ ವೇಗಿ ಮಾರ್ಕೊ ಯಾನ್ಸನ್‌ರಿಂದ ಪ್ರಬಲ ಪೈಪೋಟಿ ಎದುರಾಗಬಹುದು. ಆದರೆ ಟಿ20ಯಲ್ಲಿ ಯಾನ್ಸನ್ ವಿರುದ್ಧ ರೋಹಿತ್ 113 ರನ್ ಸಿಡಿಸಿದ್ದು, ಒಮ್ಮೆ ಮಾತ್ರ ಔಟಾಗಿದ್ದಾರೆ.
ವಿಶ್ವಕಪ್ ಟ್ರೋಫಿ ಗೆಲ್ಲಲು ಭಾರತ ರೆಡಿ; ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!
ವಿರಾಟ್ ಕೊಹ್ಲಿ vs ಕಗಿಸೋ ರಬಾಡ
ಟೂರ್ನಿಯುದ್ದಕ್ಕೂ ವಿಫಲವಾಗಿರುವ ಕೊಹ್ಲಿಗೆ ಫೈನಲ್‌ನಲ್ಲಾದರೂ ಅಬ್ಬರಿಸುವ ಕಾತರದಲ್ಲಿದ್ದಾರೆ. ಆದರೆ ಕಗಿಸೊ ರಬಾಡರ ದಾಳಿ ಎದುರಿಸುವುದು ಕೊಹ್ಲಿಗೆ ಸವಾಲಾಗಿ ಪರಿಣಮಿಸಬಹುದು. ಈ ವರೆಗೂ 13 ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ಗಳಲ್ಲಿ ರಬಾಡ ವಿರುದ್ಧ ಕೊಹ್ಲಿ 4 ಬಾರಿ ಔಟಾಗಿದ್ದು, ಕೇವಲ 51 ರನ್ ಗಳಿಸಿದ್ದಾರೆ.
ರಿಷಭ್ ಪಂತ್ vs ಕೇಶವ್ ಮಹಾರಾಜ್
ಪಂದ್ಯದಲ್ಲಿ ರಿಷಭ್-ಕೇಶವ್ ನಡುವೆ ರೋಚಕ ಪೈಪೋಟಿ ಏರ್ಪಡಬಹುದು. ರಿಷಭ್ 7 ಇನ್ನಿಂಗ್ಸ್‌ಗಳಲ್ಲಿ 171 ರನ್ ಕಲೆಹಾಕಿದ್ದಾರೆ. ಅವರು 3ನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಮೊದಲ 10 ಓವರ್‌ಗೂ ಮುನ್ನವೇ ಕೇಶವ್‌ರ ಸ್ಪಿನ್ ದಾಳಿ ಎದುರಿಸಬೇಕಾಗಬಹುದು. ಕೇಶವ್ ಟೂರ್ನಿಯಲ್ಲಿ 9 ವಿಕೆಟ್ ಕಿತ್ತಿದ್ದಾರೆ.
T20 World Cup 2024 Final: ಟಿ20 ವಿಶ್ವಕಪ್‌ಗೆ ಮಾಲೀಕ ಯಾರು..?
ಜಸ್‌ಪ್ರೀತ್ ಬುಮ್ರಾ vs ಕ್ವಿಂಟನ್ ಡಿ ಕಾಕ್
ಡಿ ಕಾಕ್ ಈ ವಿಶ್ವಕಪ್‌ನಲ್ಲಿ ದ.ಆಫ್ರಿಕಾದ ಗರಿಷ್ಠ ರನ್(204) ಸರದಾರ. 143ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಆದರೆ 7 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿರುವ ಬುಮ್ರಾ ವಿರುದ್ಧ ಡಿ ಕಾಕ್ ಯಾವ ರೀತಿ ಆಡಲಿದ್ದಾರೆ ಎಂಬ ಕುತೂಹಲವಿದೆ.
ಅಕ್ಷರ್/ಕುಲ್ದೀಪ್ vs ಹೈನ್ರಿಚ್ ಕ್ಲಾಸೆನ್
ಸ್ಪಿನ್ನರ್‌ಗಳ ಎದುರು ಕ್ಲಾಸೆನ್‌ರಷ್ಟು ಆಕ್ರಮಣಕಾರಿಯಾಗಿ ಆಡುವ ಬ್ಯಾಟರ್ ಮತ್ತೊಬ್ಬರಿಲ್ಲ. ಆದರೆ ಈ ಬಾರಿ 8 ಪಂದ್ಯದಲ್ಲಿ 112ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 138 ರನ್ ಗಳಿಸಿದ್ದಾರೆ. ಬ್ಯಾಟರ್‌ಗಳನ್ನು ಸ್ಪಿನ್ ಮೋಡಿ ಮೂಲಕ ಕಾಡುತ್ತಿರುವ ಅಕ್ಷರ್ ಹಾಗೂ ಕುಲ್ದೀಪ್‌ರಿಂದ ಫೈನಲ್‌ನಲ್ಲೂ ಅಗ್ನಿಪರೀಕ್ಷೆ ಎದುರಾಗಬಹುದು.