ಬಿಸಿಸಿಐನಿಂದ ಹೊರಗುಳಿದ ಸೌರವ್ ಗಂಗೂಲಿಗೆ ಐಪಿಎಲ್‌ನಲ್ಲಿ ಪ್ರಮುಖ ಹುದ್ದೆ!

By Suvarna NewsFirst Published Jan 3, 2023, 7:20 PM IST
Highlights

ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಕಾನೂನು ತೊಡಕು ಎದುರಾದ ಸೌರವ್ ಗಂಗೂಲಿ ಕಳೆದ ಹಲವು ದಿನಗಳಿಂದ ಕ್ರಿಕೆಟ್ ಆಡಳಿತದಿಂದ ದೂರ ಉಳಿದಿದ್ದಾರೆ. ಇದೀಗ ಐಪಿಎಲ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ಜವಾಬ್ದಾರಿ ಸೌರವ್ ಹೆಗಲಿಗೆ ಬರುತ್ತಿದೆ.
 

ನವದೆಹಲಿ(ಜ.03): ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಏನು ಮಾಡುತ್ತಿದ್ದಾರೆ? ಐಸಿಸಿ ಪ್ರಮುಖ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ? ಕ್ರಿಕೆಟ್ ಆಡಳಿತದ ಉಳಿಯುತ್ತಾರಾ? ಹೀಗೆ ಹಲವು ಪ್ರಶ್ನೆಗಳು ಕುತೂಹಲಗಳು ಚರ್ಚೆಯಾಗುತ್ತಿದೆ. ಇದರ ನಡುವೆ ಸೌರವ್ ಗಂಗೂಲಿ ಹೆಗಲಿಗೆ ಹೊಸ ಜವಾಬ್ದಾರಿ ನೀಡಲು ವೇದಿಕೆ ಸಜ್ಜಾಗಿದೆ. ಐಪಿಎಲ್ ಟೂರ್ನಿಯಲ್ಲಿ ಇದೀಗ ಗಂಗೂಲಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಜವಾಬ್ದಾರಿ ಇದೀಗ ಗಂಗೂಲಿ ಹೆಗಲೇರುವ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೆಡ್ ಆಫ್ ಆಲ್ ಕ್ರಿಕೆಟ್ ಜವಾಬ್ದಾರಿ ಗಂಗೂಲಿಗೆ ನೀಡಲು ಫ್ರಾಂಚೈಸಿ ಮುಂದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದ ಗಂಗೂಲಿ, ಬಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸ್ವಹಿತಾಸಕ್ತಿ ಸಮಸ್ಯೆಯಿಂದ ಮೆಂಟರ್ ಹುದ್ದೆ ತ್ಯಜಿಸಿದ್ದರು. ಇದೀಗ ಬಿಸಿಸಿಐ ಹಾಗೂ ಭಾರತೀಯ ಕ್ರಿಕೆಟ್ ಆಡಳಿತದ ದೂರ ಉಳಿದಿರುವ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಜವಾಬ್ದಾರಿಯನ್ನು ಗಂಗೂಲಿಗೆ ನೀಡಲು ಫ್ರಾಂಚೈಸಿಗೆ ಮುಂದಾಗಿದೆ. ಡೆಲ್ಲಿ ತಂಡಕ್ಕೆ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಕೋಚ್ ಆಗಿದ್ದಾರೆ. ಇದೀಗ ಗಂಗೂಲಿ ಹಾಗೂ ಪಾಂಟಿಂಗ್ ಜೋಡಿ ಜೊತೆಯಾಗಿ ಡೆಲ್ಲಿ ತಂಡಕ್ಕೆ ಕೆಲಸ ಮಾಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂದಲೆಳೆಯುವ ಅಂತರದಲ್ಲಿ ಪ್ಲೇ ಆಫ್ ಅವಕಾಶ ಮಿಸ್ ಮಾಡಿಕೊಂಡಿತು. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಸ್ಥಾನಕ್ಕೇರಿತ್ತು.

ಮಾಡಿದ ಕರ್ಮ ಎಲ್ಲಿಗೆ ಹೋಗುತ್ತೆ..? ಗಂಗೂಲಿಯನ್ನು ಟ್ರೋಲ್ ಮಾಡಿದ ಕೊಹ್ಲಿ ಫ್ಯಾನ್ಸ್‌..!

ಇತ್ತೀಚೆಗೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂಪಾಯಿ ನೀಡಿ ವೇಗಿ ಇಶಾಂತ್ ಶರ್ಮಾ ಖರೀದಿ ಮಾಡಿತ್ತು. ಇನ್ನು ವಿದೇಶಿ ಆಟಗಾರರ ಕೋಟಾದಡಿ ಫಿಲ್ ಸಾಲ್ಟ್‌ಗೆ 2 ಕೋಟಿ ರೂಪಾಯಿ ನೀಡಿದೆ. ಇನ್ನು ಮುಕೇಶ್ ಕುಮಾರ್ 5.5 ಕೋಟಿ, ಕನ್ನಡಿಗ ಮನೀಶ್ ಪಾಂಡೆ 2.4 ಕೋಟಿ ರೂಪಾಯಿ, ರಿಲೆ ರೂಸೋ 4.6 ಕೋಟಿ ರೂಪಾಯಿ ನೀಡಿ ಖರೀದಿಸಿದೆ.

ಇತ್ತೀಚಿನ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ
ರಿಷಬ್ ಪಂತ್(ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಶ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅನ್ರಿಚ್ ನೋರ್ಜೆ, ಚೇತನ್ ಸಕಾರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹಮ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರಹೆಮಾನ್, ಅಮನ್ ಖಾನ್, ಕುಲ್ದೀಪ್ ಯಾದವ್, ಪ್ರವೀಣ್ ದುಬೆ, ವಿಕಿ ಒಸ್ಟ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಕೇಶ್ ಕುಮಾರ್, ಮನೀಶ್ ಪಾಂಡೆ, ರಿಲೆ ರೊಸೋ

'ಶಾಶ್ವತವಾಗಿ ಆಡಳಿತಾಧಿಕಾರಿಯಾಗಿರಲು ಸಾಧ್ಯವಿಲ್ಲ': ಸೌರವ್ ಗಂಗೂಲಿ ಹೀಗಂದಿದ್ದೇಕೆ..?

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಐಪಿಎಲ್ ಟೂರ್ನಿಗೆ ಲಭ್ಯವಿಲ್ಲ. ಹೀಗಾಗಿ ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡ ಮುನ್ನಡೆಸುವ ಸಾಧ್ಯತೆ ಇದೆ.

click me!