
ಸೌರಾಷ್ಟ್ರ(ಜ.03): ರಣಜಿ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ನಾಯಕ ಹಾಗೂ ವೇಗಿ ಜಯದೇವ್ ಉನಾದ್ಕಟ್ ಹೊಸ ದಾಖಲೆ ಬರೆದಿದ್ದಾರೆ. ದೆಹಲಿ ವಿರುದ್ದದ ಪಂದ್ಯದಲ್ಲಿ ಉನಾದ್ಕಟ್ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಎರಡನೇ ಓವರ್‌ನಲ್ಲಿ ಮತ್ತೆರಡು ವಿಕೆಟ್ ಕಬಳಿಸಿ 5 ವಿಕೆಟ್ ಸಾಧನೆ ಮಾಡಿದ್ದಾರೆ. 3ನೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಕಬಳಿಸುವ ಮೂಲಕ ಉನಾದ್ಕಟ್ 6 ವಿಕೆಟ್ ಕಬಳಿಸಿದರು. ಮತ್ತೆ ದಾಳಿ ಮುಂದುವರಿಸಿದ ಉನಾದ್ಕಟ್ ಒಟ್ಟು 8 ವಿಕೆಟ್ ಕಬಳಿಸಿದರು. ಇದರೊಂದಿಗೆ 133 ರನ್‌ಗೆ ದೆಹಲಿ ತಂಡ ಆಲೌಟ್ ಆಗಿದೆ.
ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್ ಬಿ ಪಂದ್ಯದಲ್ಲಿ ದೆಹಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಸೌರಾಷ್ಟ್ರದ ವೇಗಿ ಜಯದೇವ್ ಉನಾದ್ಕಟ್ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದೆಹಲಿಗೆ ಶಾಕ್ ನೀಡಿದರು. ಧ್ರುವ್ ಶೊರೆ, ವೈಭವ್ ರಾವಲ್ ಹಾಗೂ ನಾಯಕ ಯಶ್ ದುಲ್ ಡೌಕೌಟ್ ಆದರು. ಈ ಮೂಲಕ ಉನಾದ್ಕಟ್ ಹ್ಯಾಟ್ರಿಕ್ ಸಾಧನೆ ಮಾಡಿದರು. ದೆಹಲಿ ಖಾತೆ ತೆರೆಯುವ ಮುನ್ನ 3 ವಿಕೆಟ್ ಕಳೆದುಕೊಂಡಿತ್ತು.
ಅಪ್ಪ ಕಟ್ಟಿಸಿದ, ತನ್ನ ಹೆಸರಿನ ಸ್ಟೇಡಿಯಂನಲ್ಲಿ ರಣಜಿ ಪಂದ್ಯವಾಡಿದ ಬಂಗಾಳ ತಂಡದ ನಾಯಕ..!
ರಣಜಿ ಟ್ರೋಫಿಯ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಜಯದೇವ್ ಉನಾದ್ಕಟ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎರಡು ಹಾಗೂ ಮೂರನೇ ಓವರ್‌ನಲ್ಲಿ ದೆಹಲಿ ಕತೆ ಬಹುತೇಕ ಮುಗಿದಿತ್ತು. ಎರಡನೇ ಓವರ್‌ನಲ್ಲಿ ಉನಾದ್ಕಟ್ ವಿಕೆಟ್ ಸಂಖ್ಯೆ 5ಕ್ಕೇರಿತು. ಈ ಮೂಲಕ ರಣಜಿ ಟೂರ್ನಿಯಲ್ಲಿ 21ನೇ 5 ವಿಕೆಟ್ ಸಾಧನೆ ಮಾಡಿದರು.
ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿ ಬಳಿಕ ರಣಜಿ ಟೂರ್ನಿಗೆ ಮರಳಿರುವ ಜಯದೇವ್ ಉನಾದ್ಕಟ್ ಅದ್ಬುತ ಫಾರ್ಮ್‌ನಲ್ಲಿದ್ದಾರೆ. 12 ವರ್ಷಗಳ ಕ್ರಿಕೆಟ್ ಕರಿಯರ್‌ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಉನಾದ್ಕಟ್, 3 ವಿಕೆಟ್ ಕಬಳಿಸಿದ್ದರು. ಇದೀಗ ರಣಜಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ.
ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ,
ದೆಹಲಿ ಮೊದಲ ಇನ್ನಿಂಗ್ಸ್
ಮೊದಲ ದಿನ ಉನಾದ್ಟಕ್ ಸೇರಿದಂತೆ ಸೌರಾಷ್ಟ್ರ ದಾಳಿಗೆ ಸಿಲುಕಿದ ದೆಹಲಿ 133 ರನ್‌ಗೆ ಆಲೌಟ್ ಆಗಿತ್ತು. ಆರಂಭಿಕ 5 ಓವರ್‌ಗಳಲ್ಲಿ ದೆಹಲಿ ತಂಡ 10 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಪ್ರಾಂಶು ವಿಜಯ್ರನ್, ಹೃತಿಕ್ ಶೊಕೀನ್, ಶಿವಾಂಕ್ ವಶಿಷ್ಠ್ ಹೋರಾಟದಿಂದ ದೆಹಲಿ ಕೊಂಚ ಚೇತರಿಸಿಕೊಂಡಿತು. ಪ್ರಾಂಶು 15 ರನ್ ಸಿಡಿಸಿದರೆ, ಹೃತಿಕ್ ಶೋಕೀನ್ 68 ರನ್ ಕಾಣಿಕೆ ನೀಡಿದರು. ಹೃತಿಕ್ ಬ್ಯಾಟಿಂಗ್‌ನಿಂದ ದೆಹಲಿ ತೀವ್ರ ಮುಖಭಂಗದಿಂದ ತಪ್ಪಿಸಿಕೊಂಡಿತು. ಶಿವಾಂಕ್ ವೈಶಿಷ್ಠ್ 38 ರನ್ ಕಾಣಿಕೆ ನೀಡಿದರು. ಈ ಮೂಲಕ ದೆಹಲಿ 133 ರನ್ ಸಿಡಿಸಿತು.
ಸೌರಾಷ್ಟ್ರ ಪರ ಜಯದೇವ್ ಉನಾದ್ಕಟ್ 8 ವಿಕೆಟ್ ಕಬಳಿಸಿದರೆ, ಚಿರಾಗ್ ಜಾನಿ 1 ಹಾಗೂ ಪ್ರೇರಕ್ ಮಂಕಡ್ 1 ವಿಕೆಟ್ ಕಬಳಿಸಿ ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.