75ನೇ ಸ್ವಾತಂತ್ರ್ಯೋತ್ಸವಕ್ಕೆ ದಿಗ್ಗಜರ ಕ್ರಿಕೆಟ್ ಧಮಾಕ.! ದಾದಾಗಿರಿ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ರೆಡಿ

By Suvarna NewsFirst Published Aug 13, 2022, 1:43 PM IST
Highlights

* 2ನೇ ಆವೃತ್ತಿಯ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ
* ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಶೇಷ ಲೆಜೆಂಡರಿ ಕ್ರಿಕೆಟ್ ಲೀಗ್ ಪಂದ್ಯ ಆಯೋಜನೆ
* ಇಂಡಿಯಾ ಮಹಾರಾಜಾಸ್‌ ತಂಡವನ್ನು ಮುನ್ನಡೆಸಲಿರುವ ದಾದಾ

ಬೆಂಗಳೂರು(ಆ.13): ಇದೇ ಸೋಮವಾರ ಅಂದ್ರೆ ಆಗಸ್ಟ್​​​​ 15 ಭಾರತ ದೇಶಕ್ಕೆ ವೆರಿ ಸ್ಪೆಷಲ್​ ಡೇ. ಅಂದು ಇಡೀ ದೇಶ 75ನೇ ಸ್ವಾತಂತ್ರ್ಯೋತ್ಸವನ್ನ ಆಚರಿಸಿಕೊಳ್ಳಲಿದೆ. ಈ ಸ್ಪೆಷಲ್ ಮೂಮೆಂಟ್​ ​​​ಅನ್ನ ಮತ್ತಷ್ಟು ಸ್ಮರಣೀಯವಾಗಿಸಲು ಬಿಸಿಸಿಐ ಪಣ ತೊಟ್ಟಿದ್ದು ಇದಕ್ಕಾಗಿ ದಿಗ್ಗಜರ ಕ್ರಿಕೆಟ್​ ಆಯೋಜಿಸ್ತಿದೆ. ಕೇಂದ್ರ ಸರ್ಕಾರ ಹೇಳಿದಂತೆ ಬಿಗ್​​ಬಾಸ್​ಗಳು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲೆಜೆಂಡ್​​​​​​​​ ಲೀಗ್​​ ಕ್ರಿಕೆಟ್​​​​​​​​ ಆಡಿಸ್ತಿದೆ. ಈ ವಿಶೇಷ ಪಂದ್ಯದಲ್ಲಿ ಬಂಗಾಳದ ಹುಲಿ ಸೌರವ್​ ಗಂಗೂಲಿ ಟೀಂ​ ಇಂಡಿಯಾವನ್ನ ಮುನ್ನಡೆಸಲಿದ್ದಾರೆ. ಇದರಿಂದ ಫ್ಯಾನ್ಸ್​​​​​​ ಫುಲ್​ ಖುಷ್ ಆಗಿದ್ದು, ಮತ್ತೆ ದಾದಾಗಿರಿ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ.

ಸೆಪ್ಟೆಂಬರ್​​​​ 16ಕ್ಕೆ ಮಹಾರಾಜಸ್​​​ V/S ವರ್ಲ್ಡ್​ ಜೈಂಟ್ಸ್​​ ಫೈಟ್​​: 

ಆಗಸ್ಟ್​​​​​​​​ 15ರಂದು ಸ್ವಾತಂತ್ರ್ಯೋತ್ಸವ  ಮುಗಿದ ಒಂದು ತಿಂಗಳಿಗೆ ಸರಿಯಾಗಿ ನೀವು ಸ್ಪೆಷಲ್​ ಲೆಜೆಂಡ್​​ ಲೀಗ್ ಕ್ರಿಕೆಟ್​ ಅನ್ನ ಸವಿಯಲು ಸಜ್ಜಾಗಬೇಕಿದೆ. ಸೆಪ್ಟೆಂಬರ್​​​​​​​ ​16ರಂದು ಇಂಡಿಯಾ ಮಹಾರಾಜಸ್​​ ಮತ್ತು ವರ್ಲ್ಡ್ ಜೈಂಟ್ಸ್​​ ನಡುವೆ ಕ್ರಿಕೆಟ್​ ಮಹಾಸಮರ ಏರ್ಪಡಲಿದೆ. ಕ್ರಿಕೆಟ್ ಕಾಶಿ ಈಡನ್​ ಗಾರ್ಡನ್​​ನಲ್ಲಿ ಪಂದ್ಯ ನಡೆಯಲಿದೆ. ತವರಿನ ಅಂಗಳದಲ್ಲಿ ಗಂಗೂಲಿ ಇಂಡಿಯಾಕ್ಕೆ ಸಾರಥಿಯಾದ್ರೆ, ವರ್ಲ್ಡ್ ಜೈಂಟ್ಸ್​​​​​ ತಂಡವನ್ನ 2019ರ ವಿಶ್ವಕಪ್​ ವಿಜೇತ ಕ್ಯಾಪ್ಟನ್​​ ಇಯಾನ್​​ ಮಾರ್ಗನ್​ ಮುನ್ನಡೆಸಲಿದ್ದಾರೆ.

Ind vs Pak ಭಾರತವನ್ನು ಎದುರಿಸುವಾಗ ಯಾವಾಗಲೂ ಒತ್ತಡವಿರುತ್ತೆ: ಪಾಕ್ ನಾಯಕ ಬಾಬರ್ ಅಜಂ

ಇಂಡಿಯಾ ಮಹಾರಾಜಸ್​​​​​​​​​​​ ತಂಡದಲ್ಲಿ ದಾದಾ ಜೊತೆ ಇನ್ನಷ್ಟು ಲೆಜೆಂಡ್ರಿ ಪ್ಲೇಯರ್ಸ್​ ಆಡಲಿದ್ದಾರೆ. ಸಿಡಿಲಮರಿ ವಿರೇಂದ್ರ ಸೆಹ್ವಾಗ್​​​, ಮೊಹಮ್ಮದ್​​ ಕೈಫ್​​​​​​​, ಇರ್ಫಾನ್​ ಪಠಾಣ್​​​​​​ ಹಾಗೂ ಹರ್ಭಜನ್​ ಸಿಂಗ್ ಇನ್ನು ಕೆಲ ದಿಗ್ಗಜರು ತಂಡದಲ್ಲಿದ್ದಾರೆ. ಇನ್ನು ವರ್ಲ್ಡ್ ಜೈಂಟ್ಸ್​​​​ನಲ್ಲಿ ​​​ಹರ್ಷಲ್ ಗಿಬ್ಸ್​​​, ಸನತ್​ ಜಯಸೂರ್ಯ, ಜಾಂಟಿ ರೋಡ್ಸ್​​​ ಹಾಗೂ ಮುತ್ತಯ್ಯ ಮುರಳೀಧರನ್​​​​​​ರಂತ ಲೆಜೆಂಡ್ರಿ ಆಟಗಾರರಿದ್ದಾರೆ.

ಸೆಪ್ಟೆಂಬರ್​​​​​​​ 17 ರಿಂದ ಲೆಜೆಂಡ್ಸ್​​ ಲೀಗ್​ 2ನೇ ಆವೃತ್ತಿ : 

ಇನ್ನು ಸೆಪ್ಟೆಂಬರ್ 16 ರಂದು ಇಂಡಿಯಾ ಮಹಾರಾಜಸ್​​ ವರ್ಸಸ್​​​​​​ ವರ್ಲ್ಡ್ ಜೈಂಟ್ಸ್​ ನಡುವಿನ ವಿಶೇಷ ಮ್ಯಾಚ್​​​ ಮುಗಿಯುತ್ತಿದ್ದಂತೆ ಸೆಪ್ಟೆಂಬರ್ 17 ರಿಂದ ​​​ಲೆಜೆಂಡ್ಸ್​​ ಲೀಗ್ ಕ್ರಿಕೆಟ್​​​​​​​ನ 2 ಸೀಸನ್​​ ಆರಂಭಗೊಳ್ಳಲಿದೆ. ಈ ಸಲ ಒಟ್ಟು 15 ಪಂದ್ಯಗಳು ನಡೆಯಲಿವೆ. 4 ನಾಲ್ಕು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಸಲ ಇಂಡಿಯಾ ಲೆಜೆಂಡ್ಸ್​​ ತಂಡದ ಪರ ವೀರೂ, ದಾದಾ ಆಡ್ತಿದ್ದು ಟೂರ್ನಿ ಮೊದಲ ಸೀಸನ್​​​ಗಿಂತ ಮತ್ತಷ್ಟು ಕಿಕ್ಕೇರಲಿದೆ.

ವಿಶೇಷ ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಪಂದ್ಯಕ್ಕೆ ತಂಡಗಳು ಹೀಗಿವೆ ನೋಡಿ

ಇಂಡಿಯಾ ಮಹರಾಜಾಸ್‌

ಸೌರವ್ ಗಂಗೂಲಿ(ನಾಯಕ), ವಿರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಪ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್(ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮಾನ್ ಓಜಾ(ವಿಕೆಟ್ ಕೀಪರ್), ಅಶೋಕ್ ದಿಂಡಾ, ಅಜಯ್ ಜಡೇಜಾ, ಆರ್‌ಪಿ ಸಿಂಗ್, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋದಿ.

ವರ್ಲ್ಡ್‌ ಜೈಂಟ್ಸ್‌

ಇಯಾನ್ ಮಾರ್ಗನ್‌(ನಾಯಕ), ಲಿಂಡ್ಲೆ ಸಿಮೊನ್ಸ್‌, ಹರ್ಷಲ್ ಗಿಬ್ಸ್‌, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್(ವಿಕೆಟ್ ಕೀಪರ್), ನೇಥನ್ ಮೆಕ್ಕಲಂ, ಜಾಂಟಿ ರೋಡ್ಸ್‌, ಮುತ್ತಯ್ಯ ಮುರುಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಸಕಜಾ, ಮೊಶ್ರಫೆ ಮೊರ್ತಾಜ, ಆಸ್ಗರ್ ಆಫ್ಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒ ಬ್ರಿಯನ್, ದಿನೇಶ್ ರಾಮ್ದಿನ್‌(ವಿಕೆಟ್ ಕೀಪರ್).

click me!