
ಕೋಲ್ಕತಾ(ಜು.16): ಕೊರೋನಾ ವೈರಸ್ ಭೀಕರತೆ ಹೆಚ್ಚಾಗುತ್ತಿದೆ. ಲಕ್ಷಣಗಳೇ ಇಲ್ಲದವರಲ್ಲೂ ಕೊರೋನಾ ಕಾಣಿಸುತ್ತಿದೆ. ಇತ್ತ ಯಾರ ಸಂಪರ್ಕಕ್ಕೂ ಸಿಗದವರಿಗೂ ಕರೋನಾ ಅಂಟಿಕೊಳ್ಳುತ್ತಿದೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೋನಾ ಆತಂಕ ತಗುಲಿದೆ. ಇದಕ್ಕೆ ಕಾರಣ ಗಂಗೂಲಿ ಸಹೋದರ, ಬಂಗಾಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸ್ನೇಹಶಿಷ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಭಾರತ-ಇಂಗ್ಲೆಂಡ್ ಸರಣಿ ಮುಂದೂಡಿಕೆ..! IPL ನಡೆಯೋದು ಪಕ್ಕಾ..?
ಕೊರೋನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಕಾರಣ ಸ್ನೇಹಶಿಷ್ ಪರೀಕ್ಷೆಗೆ ಒಳಗಾಗಿದ್ದರು. ಬುಧವಾರ(ಜು.15) ವರದಿ ಬಂದಿದ್ದು, ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ತಿಂಗಳು ಸ್ನೇಹಶಿಷ್ ಪತ್ನಿ ಹಾಗೂ ಆತ್ತೆಗೂ ಕೊರೋನಾ ವೈರಸ್ ದೃಢಪಟ್ಟಿತ್ತು. ಕಳೆದ ವಾರ ಸ್ನೇಹಶಿಷ್ ಜ್ವರದಿಂದ ಬಳಲಿದ್ದರು. ಹೀಗಾಗಿ ಪರೀಕ್ಷೆ ಮಾಡಿಸಲಾಗಿತ್ತು.
ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಖಚಿತ ಪಡಿಸಿದ BCCI!
ಕೊರೋನಾ ವೈರಸ್ ದೃಢಪಟ್ಟ ಕಾರಣ ಸ್ನೇಹಶಿಷ್ ಅವರನ್ನು ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಾಗಿದೆ. ಸ್ನೇಹಶಿಷ್‌ಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಸೌರವ್ ಗಂಗೂಲಿ ಹಾಗೂ ಕುಟುಂಬ ಕೂಡ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 10 ದಿನಗಳ ಕಾರಣ ಗಂಗೂಲಿ ಕ್ವಾಂರೈಟನ್‌ಗೆ ಒಳಗಾಗಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಒಟ್ಟು 32,838 ಕೊರೋನಾ ವೈರಸ್ ಪ್ರಕರಣ ದೃಢವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 11,927.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.