ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ್ದಾರೆ. ಕೇವಲ 9 ತಿಂಗಳ ಅವಧಿಗೆ ಸೌರವ್ ಗಂಗೂಲಿ ಬಿಸಿಸಿಐ ಬಿಗ್‌ಬಾಸ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಮುಂಬೈ(ಅ.23): ಬಿಸಿಸಿಐ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂಬೈನ ಬಿಸಿಸಿಐ ಕಚೇರಿಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಇದೀಗ ಸೌರವ್ ಗಂಗೂಲಿ ಬಿಸಿಸಿಐನ 39ನೇ ಅಧ್ಯಕ್ಷರಾಗಿ ಅಧೀಕೃತವಾಗಿ ನೇಮಕಗೊಂಡಿದ್ದಾರೆ.
It's official - formally elected as the President of BCCI pic.twitter.com/Ln1VkCTyIW
— BCCI (@BCCI)
ಇದನ್ನೂ ಓದಿ: ಬಿಸಿಸಿಐ COA ವಿನೋದ್ ರೈ, ಡಯಾನ ಸ್ಯಾಲರಿ ಬಹಿರಂಗ!
ಅ.23ರಂದು ನಡೆಯಬೇಕಿದ್ದ ಬಿಸಿಸಿಐ ಚುನಾವಣೆಗೂ ಮುನ್ನ ಸೌರವ್ ಗಂಗೂಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ಸರಣಿಯಿಂದ ಕೊಹ್ಲಿಗೆ ರೆಸ್ಟ್; ಪ್ರತಿಕ್ರಿಯೆ ನೀಡಿದ ಗಂಗೂಲಿ!
2017ರಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅಮಾನತು ಬಳಿಕ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ ಕಳೆದ 33 ತಿಂಗಳುಗಳ ಕಾಲ ಬಿಸಿಸಿಐ ಆಡಳಿತ ಜವಾಬ್ದಾರಿ ನಿರ್ವಹಿಸಿತು. COA ವಿನೋದ್ ರೈ, ಡಯಾನ ಇಡುಲ್ಜಿ, ರಾಮಚಂದ್ರ ಗುಹಾ ಹಾಗೂ ವಿಕ್ರಂ ಲಿಮಾಯೆ ಬಿಸಿಸಿಐ ಆಡಳಿತ ಜವಾಬ್ದಾರಿ ನೋಡಿಕೊಂಡಿತ್ತು.
ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: