ಬಿಸಿಸಿಐ COA ವಿನೋದ್ ರೈ, ಡಯಾನ ಸ್ಯಾಲರಿ ಬಹಿರಂಗ!

By Web Desk  |  First Published Oct 23, 2019, 11:26 AM IST

ಬಿಸಿಸಿಐ COA ವಿನೋದ್ ರೈ ಹಾಗೂ ಆಡಳಿತ ಸಮಿತಿ ಸದಸ್ಯರಾದ ಡಯಾನ ಇಡುಲ್ಜಿ ಸ್ಯಾಲರಿ ಬಹಿರಂಗವಾಗಿದೆ. 2017ರಿಂದ ಇಲ್ಲೀವರೆಗಿನ ಸ್ಯಾಲರಿಯನ್ನು ಬಿಸಿಸಿಐ ತಕ್ಷಣವೇ ನೀಡಬೇಕಿದೆ.
 


ಮುಂಬೈ(ಅ.23): ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಅಮಾನತುಗೊಂಡ ಬಳಿಕ ಶ್ರೀಮಂತ ಕ್ರಿಕೆಟ್ ಮಂಡಳಿ ಚುಕ್ಕಾಣಿ ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಮಂಡಳಿ(COA) ಕೈ ಸೇರಿತು. 2017ರಲ್ಲಿ ಸುಪ್ರೀಂ ಕೋರ್ಟ್ ವಿನೋದ್ ರೈ ನೇತೃತ್ವದ ಸಮಿತಿ ರಚಿಸಿತು. ಈ ಸಮಿತಿಯಲ್ಲಿ ಡಯಾನಾ ಇಡುಲ್ಜಿ, ರಾಮಚಂದ್ರ ಗುಹಾ ಹಾಗೂ ವಿಕ್ರಂ ಲಿಮಾಯೆ ಇತರ ಸದಸ್ಯರು. 2017ರ ಜನವರಿ 30 ರಿಂದ ಇಲ್ಲೀವರೆಗ ವಿನೋದ್ ರೈ ಹಾಗೂ ಡಯಾನ ಇಡುಲ್ಜಿ ಸ್ಯಾಲರಿ ಬಹಿರಂಗವಾಗಿದೆ.

ಇದನ್ನೂ ಓದಿ: 110 ದಿನದ ಪ್ರಯಾಣ ಭತ್ಯೆ 53 ಲಕ್ಷ -ಬೆಚ್ಚಿ ಬಿದ್ದ ಬಿಸಿಸಿಐ ಸಿಒಎ

Tap to resize

Latest Videos

undefined

COA ವಿನೋದ್ ರೈ ಹಾಗೂ ಡಯಾನ ಇಡುಲ್ಜಿ ಸೇವೆಗೆ ಬಿಸಿಸಿಐ ಬರೋಬ್ಬರಿ 3.62 ಕೋಟಿ ರೂಪಾಯಿ ನೀಡಬೇಕಿದೆ.  2017ರಲ್ಲಿ ಬಿಸಿಸಿಐ ಆಡಳಿತ ಚುಕ್ಕಾಣಿ ಹಿಡಿದ ವಿನೋದ್ ರೈ ಹಾಗೂ ಡಯಾನ ಪ್ರತಿ ತಿಂಗಳ ವೇತನ 10 ಲಕ್ಷ ರೂಪಾಯಿ.  ಲೋದ ಸಮಿತಿಯ ನಿಯಮದ ಪ್ರಕಾರ, ಸೇವೆಗೆ ರಾಜೀನಾಮೆ ನೀಡಿದ 48 ಗಂಟೆಗಳಲ್ಲಿ ಇವರ ವೇತನವನ್ನು ಬಿಸಿಸಿಐ ನೀಡಬೇಕಿದೆ.

ಇದನ್ನೂ ಓದಿ: ಇಂದು ಬಿಸಿ​ಸಿಐ ಅಧ್ಯಕ್ಷ ಗದ್ದುಗೆ ಏರ​ಲಿರುವ ದಾದಾ!

ವಿನೋದ್ ರೈ-ಡಯಾನ ಇಡುಲ್ಜಿ ವೇತನ:
2017ರಲ್ಲಿ  10 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ
2018ರಲ್ಲಿ 11 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ
2019ರಲ್ಲಿ 12 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ
ಒಟ್ಟು 3.62 ಕೋಟಿ ರೂಪಾಯಿ

click me!