ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾ, ಮುಂಬರುವ ಸೌತ್ ಆಫ್ರಿಕಾ ವಿರುದ್ಧದ ಸರಣಿ ಆಡುವುದು ಬಹುತೇಕ ಖಚಿತ. ಇದರ ನಡುವೆ ರವೀಂದ್ರ ವಿಶೇಷ ಅನುಮತಿಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೊರೆ ಹೋಗಿದ್ದಾರೆ. ಆದರೆ ಜಡೇಜಾಗೆ ಅನುಮತಿ ನೀಡಲು ಗಂಗೂಲಿ ನಿರಾಕರಿಸಿದ್ದಾರೆ.
ಮುಂಬೈ(ಮಾ.06): ಏಕದಿನ ಸರಣಿಗಾಗಿ ಸೌತ್ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದೆ. ಮಾರ್ಚ್ 12ರಿಂದ ಏಕದಿನ ಸರಣಿ ಆರಂಭವಾಗಿದ್ದು, ಮೊದಲ ಪಂದ್ಯಕ್ಕೆ ಧರ್ಮಶಾಲಾ ಆತಿಥ್ಯವಹಿಸಲಿದೆ. ಇತ್ತ ರಣಜಿ ಟ್ರೋಫಿ ಫನಲ್ ಪಂದ್ಯ ಮಾರ್ಚ್ 9 ರಿಂದ 13ರ ವರಗೆ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಬಂಗಾಳ ತಂಡ ಮುಖಾಮುಖಿಯಾಗುತ್ತಿದೆ.
ಇದನ್ನೂ ಓದಿ: ಕೊರೋನಾ ವೈರಸ್‌ನಿಂದ IPL 2020 ರದ್ದಾಗುತ್ತಾ? ಮೌನ ಮುರಿದ ಗಂಗೂಲಿ!.
undefined
ಪ್ರಶಸ್ತಿ ಗೆಲ್ಲಲು ಕಠಿಣ ಅಭ್ಯಾಸ ಮಾಡುತ್ತಿರುವ ಸೌರಾಷ್ಟ್ರ, ಟೀಂ ಇಂಡಿಯಾದಲ್ಲಿ ಪ್ರಮುಖ ಆಟಗಾರ ರವೀಂದ್ರ ಜಡೇಜಾರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸೌರಾಷ್ಟ್ರ ನಿರ್ಧರಿಸಿತ್ತು. ಇದಕ್ಕಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಯದೇವ್ ಶಾ , ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮನಮಿ ಮಾಡಿದರು. ಮೊದಲ ಏಕದಿನ ಪಂದ್ಯದಿಂದ ಬಿಡುಗಡೆ ಮಾಡಿ ರಣಜಿ ಫೈನಲ್ ಆಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: 19 ವರ್ಷದ ಶಿಖರ್ ಧವನ್ ಪುತ್ರಿಯಿಂದ ಸೌಂದರ್ಯಕ್ಕೆ ಸವಾಲೆಸೆಯುವ ನಿರ್ಧಾರ!
ಸೌರಾಷ್ಟ್ರ ಕ್ರಿಕೆಟ್ ಮಂಡಳಿ ಮನವಿಯನ್ನು ಬಿಸಿಸಿಐ ಅಧ್ಯಕ್ಷ ತಿರಸ್ಕರಿಸಿದ್ದಾರೆ. ದೇಶ ಮೊದಲು, ದೇಸಿ ಟೂರ್ನಿಗಾಗಿ ಭಾರತ ತಂಡದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಭಾರತ ದೇಶ ಪ್ರತಿನಿಧಿಸುವ ಕಾರಣ ಟೀಂ ಇಂಡಿಯಾ ಬಲಿಷ್ಠವಾಗಿರಬೇಕು ಎಂದು ಗಂಗೂಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ