ಪಿರಿಯಡ್ ನೋವಲ್ಲೂ ಮೈದಾನದಲ್ಲಿ ಹೇಗೆ ಆಡ್ತಾರೆ ಅಥ್ಲೆಟ್ಸ್ ?

Published : Oct 11, 2025, 12:58 PM IST
sneh rana

ಸಾರಾಂಶ

ಪ್ರತಿ ತಿಂಗಳು ಮಹಿಳೆಯರಿಗೆ ಪಿರಿಯಡ್ಸ್ ನೋವು ಸಾಮಾನ್ಯವಾದ್ರೂ ಸಹಿಸೋದು ಕಷ್ಟ. ಹೀಗಿರುವಾಗ ಮೈದಾನದಲ್ಲಿ ಹೋರಾಡುವ ಅಥ್ಲೆಟ್ಸ್ ಹೇಗೆ ನೋವು ನುಂಗಿಕೊಳ್ತಾರೆ? ಪಿರಿಯಡ್ ಟೈಂನಲ್ಲಿ ಏನೆಲ್ಲ ಸಮಸ್ಯೆ ಎದುರಿಸ್ತಾರೆ? 

ಕರ್ನಾಟಕ ಸರ್ಕಾರ, ಪ್ರತಿ ತಿಂಗಳು ಒಂದು ದಿನ ಮುಟ್ಟಿನ ರಜೆ ಘೋಷಣೆ ಮಾಡಿದೆ. ಸರ್ಕಾರಿ ಉದ್ಯೋಗಿಗಳು ಹಾಗೂ ಖಾಸಗಿ ಕೈಗಾರಿಕೆಯಲ್ಲಿ ಕೆಲ್ಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಸಿಗಲಿದೆ. ಕರ್ನಾಟಕಕ್ಕಿಂತ ಮೊದಲೇ ಅನೇಕ ರಾಜ್ಯಗಳು ಈ ಯೋಜನೆ ಜಾರಿಗೆ ತಂದಿವೆ. ಕೆಲ ಖಾಸಗಿ ಕಂಪನಿಗಳು ಈಗಾಗಲೇ ಮಹಿಳೆಯರಿಗೆ ಮುಟ್ಟಿನ ರಜೆ ನೀಡ್ತಿವೆ. ಪಿರಿಯಡ್ಸ್ (Periods) ಒಂದು ನೈಸರ್ಗಿಕ ಕ್ರಿಯೆ. ಪ್ರತಿ ತಿಂಗಳು ಮಹಿಳೆ ಮುಟ್ಟಿಗೊಳಗಾಗ್ತಾಳೆ. ಇದು ಅವಳ ಉತ್ತಮ ಆರೋಗ್ಯದ ಸೂಚಕವೂ ಹೌದು. ಪಿರಿಯಡ್ಸ್ ಟೈಂನಲ್ಲಿ ಆಗುವ ನೋವು, ಮಾನಸಿಕ ಕಿರಿಕಿರಿ ಮಹಿಳೆಗೆ ಮಾತ್ರ ಗೊತ್ತಿರಲು ಸಾಧ್ಯ. ಪ್ರತಿ ಮಹಿಳೆ ಪಿರಿಯಡ್ಸ್ ನಲ್ಲಿ ತನ್ನ ದೇಹಕ್ಕೆ ಅನುಗುಣವಾಗಿ ನೋವು ತಿಂತಾಳೆ. ಕಿಬ್ಬೊಟ್ಟೆ ನೋವು, ಕಾಲು ನೋವು, ಹೆವಿ ಬ್ಲೀಡಿಂಗ್, ಮೂಡ್ ಸ್ವಿಂಗ್ ಇದೆಲ್ಲ ಸಾಮಾನ್ಯ. ಈ ಟೈಂನಲ್ಲಿ ಕಚೇರಿಗೆ ಬಂದು ಕೆಲ್ಸ ಮಾಡೋದಿರಲಿ ಬೆಡ್ ನಿಂದ ಏಳೋದು ಕಷ್ಟ ಎನ್ನುವಂತಾಗುತ್ತೆ. ಕೆಲ್ಸ ಮಾಡೋರು ಹೇಗೋ ರಜೆ ತೆಗೆದುಕೊಳ್ಳಬಹುದು. ಆದ್ರೆ ಮೈದಾನದಲ್ಲಿ ಆಟಕ್ಕಿಳಿಯುವ ಮಹಿಳೆಯರ ಕಥೆ ಏನು?

ಪಿರಿಯಡ್ಸ್ ಟೈಂನಲ್ಲಿ ಅಥ್ಲೆಟಿಕ್ಸ್ ಏನು ಮಾಡ್ತಾರೆ? : 

ಕ್ರಿಕೆಟ್ ಇರಲಿ, ಟೆನ್ನಿಸ್ ಇರಲಿ ಇಲ್ಲ ರನ್ನಿಂಗ್, ಹೈ ಜಂಪ್ ಇರ್ಲಿ, ನನಗೆ ಪಿರಿಯಡ್ಸ್ ಅಂತ ಸ್ಪೋಟ್ಸ್ ನಿಂದ ಹೊರಗೆ ಬರಲು ಸಾಧ್ಯವಿಲ್ಲ. ದೇಶವನ್ನು ಪ್ರತಿನಿಧಿಸಿರಲಿ ಇಲ್ಲ ರಾಜ್ಯ ಮಟ್ಟ, ಜಿಲ್ಲಾ ಮಟ್ಟದ ಸ್ಪರ್ಧೆ ಇರ್ಲಿ, ಸ್ಪರ್ಧಿಗಳು ಮೈದಾನದಲ್ಲಿ ಹೋರಾಡೋದು ಅನಿವಾರ್ಯ. ಮುಟ್ಟಿನ ಸಮಯದಲ್ಲಿ ಏನೆಲ್ಲ ಸಮಸ್ಯೆ ಎದುರಾಗುತ್ತೆ ಎಂಬುದನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಸ್ನೇಹಾ ರಾಣಾ (Sneha Rana) ಹೇಳಿದ್ದಾರೆ.

ರಾಜ್ಯದ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ: ಖುಷಿಯ ಬೆನ್ನಲ್ಲೇ ವಿರೋಧ ಯಾಕೆ? ಇದರ ಹಿನ್ನೆಲೆ ಏನು?

ಪಂದ್ಯದ ಟೈಂನಲ್ಲಿ ಪಿರಿಯಡ್ಸ್ ಆದ್ರೆ ಆ ನೋವು, ಮೂಡ್ ಸ್ವಿಂಗ್ ಹೇಗೆ ಸಂಭಾಳಿಸ್ತೀರಿ ಎನ್ನುವ ಪ್ರಶ್ನೆಗೆ ಸ್ನೇಹಾ ಉತ್ತರ ನೀಡಿದ್ದಾರೆ. ಇದೊಂದು ಉತ್ತಮ ಪ್ರಶ್ನೆ. ಅನೇಕರಿಗೆ ಅಥ್ಲೆಟ್ಸ್ ಪಿರಿಯಡ್ಸ್ ವಿಷ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನ್ನ ವಿಷ್ಯ ಹೇಳೋದಾದ್ರೆ ನಾನು ಪಿರಿಯಡ್ಸ್ ಟೈಂನಲ್ಲಿ ಸಾಕಷ್ಟು ನೋವು ತಿನ್ನುತ್ತೇನೆ ಅಂತ ಸ್ನೇಹಾ ಹೇಳಿದ್ದಾರೆ. ಪಿರಿಯಡ್ಸ್ ನಲ್ಲಿ ಸ್ನೇಹಾ ರಾಣಾಗೆ ನೋವು ಹೆಚ್ಚಿರುತ್ತದೆ. ಅವ್ರು ಕೆಲ ಬಾರಿ ಔಷಧಿ ತೆಗೆದುಕೊಳ್ತಾರೆ.

ದೇಶದ ಪರ ಇಲ್ಲ ದೇಶಿ ಮಟ್ಟದಲ್ಲಿ ಪಂದ್ಯ ಆಡ್ತಿರುವಾಗ ಪಿರಿಯಡ್ಸ್ ಆದ್ರೆ ಹಿಂದೆ ಸರಿಯೋಕೆ ಸಾಧ್ಯ ಇಲ್ಲ. ದೇಶ ಅಥವಾ ತಂಡದ ಪರ ಆಟ ಆಡ್ಲೇಬೇಕು. ಪಿರಿಯಡ್ಸ್ ಟೈಂನಲ್ಲಿ ನೋವಾಗುತ್ತೆ, ಆದ್ರೆ ಒಬ್ಬ ಸ್ಪೋರ್ಟ್ಸ್ ಪರ್ಸನ್ ಮಾನಸಿಕವಾಗಿ ಬಲಶಾಲಿಯಾಗಿರ್ತಾರೆ. ನೋವು ಸಾಮಾನ್ಯ ಅಂತ ಭಾವಿಸಿ ಆಟದ ಮೇಲೆ ಫೋಕಸ್ ಮಾಡ್ತಾರೆ ಅಂತ ಸ್ನೇಹಾ ಹೇಳಿದ್ದಾರೆ.

ಕರ್ವಾ ಚೌತ್ ದಿನ Hardik Pandya ಜೊತೆ ಕಾಣಿಸಿಕೊಂಡ ಹೊಸ ಗರ್ಲ್ ಫ್ರೆಂಡ್ ಯಾರು?

ಅಥ್ಲೆಟಿಕ್ಸ್ ಜೊತೆಗಿರುತ್ತೆ ಹಾಟ್ ಪ್ಯಾಡ್ : 

ಪಿರಿಯಡ್ಸ್ ಟೈಂನಲ್ಲಿ ಅಥ್ಲೆಟಿಕ್ಸ್ ಹಾಟ್ ಪ್ಯಾಡ್ ಜೊತೆಗಿಟ್ಟುಕೊಂಡಿರ್ತಾರೆ. ಮೈದಾನದ ಹೊರಗೆ ಇದನ್ನು ಬಳಸ್ತಾರೆ. ಪಿರಿಯಡ್ಸ್ ಕಾರಣಕ್ಕೆ ನಾವು ಏನು ಮಾಡ್ತಿದ್ದೇವೋ ಅದ್ರಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಪಿರಿಯಡ್ಸ್ ಆದಾಗ ಆಡಲು ಸಾಧ್ಯವಿಲ್ಲ ಅಂತ ನಾವು ಎಂದೂ ಭಾವಿಸ್ಬಾರದು ಎಂದ ಸ್ನೇಹಾ ರಾಣಾ, ನನಗೆ ಇದು ವಿರುದ್ಧವಾಗಿದೆ. ನಾನು ಪಿರಿಯಡ್ಸ್ ಟೈಂನಲ್ಲಿ ಚೆನ್ನಾಗಿ ಆಡ್ತೇನೆ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?
ಕೆಎಸ್‌ಸಿಎ ಚುನಾವಣೆ: ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!