
ಕೊಲಂಬೊ(ಜು.28): ಕೊರೋನಾ ಕಾರಣಕ್ಕೆ ಸ್ಥಗಿತವಾಗಿದ್ದ ಪಂದ್ಯದ ಟಾಸ್ ಆಗಿದ್ದು ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಹಾಗೂಅದೇ ರೀತಿ ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಸಂಪೂರ್ಣ ಫಿಟ್ ಆಗಿದ್ದು, ಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.
ಜುಲೈ 27ರಂದು ಆರಂಭವಾಗಬೇಕಿದ್ದ ಲಂಕಾ ಎದುರಿನ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಇನ್ನು ಕೃನಾಲ್ ಪಾಂಡ್ಯ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನುಳಿದ ಏಳು ಆಟಗಾರರನ್ನು ಹೋಟೆಲ್ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಕೃನಾಲ್ ಪಾಂಡ್ಯ ಸೇರಿ ಒಟ್ಟು 8 ಆಟಗಾರರು ಲಂಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
INDvSL 2ನೇ ಪಂದ್ಯ ಕೊರೋನಾ ಕಾರಣ ಮುಂದೂಡಿಕೆ; ಹೊಸ ವೇಳಾಪಟ್ಟಿ ಬಿಡುಗಡೆ!
ಇದು ಮೊದಲು ಆಡಿದ್ದ ಪಿಚ್ ಆಗಿದ್ದು ಕಳೆದ ರಾತ್ರಿ ಕವರ್ ಆಗಿತ್ತು. ಮೊದಲು ಬೌಲಿಂಗ್ ಮಾಡಿದರೆ ಲಾಭ ಆಗುವ ನಿರೀಕ್ಷೆ ಇರುವುದರಿಂದ ಬೌಲಿಂಗ್ ತೆಗೆದುಕೊಂಡಿದ್ದೇವೆ ಶ್ರೀಲಂಕಾ ನಾಯಕ ದಸುನ್ ಶನಕ ತಿಳಿಸಿದ್ದಾರೆ.
ನಮಗೆ ಮೊದಲು ಬ್ಯಾಟಿಂಗ್ ಸಿಕ್ಕಿರುವುದು ಖುಷಿಯೇ ಇದೆ. ಕೆಲವೊಂದು ಕಾರಣಕ್ಕೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಪಂದ್ಯಕ್ಕೆ ದೀಪಕ್ ಚಹರ್ ಮತ್ತೆ ಮನೀಶ್ ಪಾಂಡೆ ಲಭ್ಯವಿಲ್ಲ ಎಂದು ಭಾರತದ ನಾಯಕ ಶಿಖರ್ ಧವನ್ ತಿಳಿಸಿದ್ದಾರೆ.
ಭಾರತ; ಶಿಖರ್ ಧವನ್(ನಾಯಕ), ರುತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸಾಮ್ಸನ್, ನೀತಿಶ್ ರಾಣಾ, ಭುವನೇಶ್ವರ ಕುಮಾರ್, ನೀತಿಶ್ ರಾಣಾ, ಕುಲದೀಪ್ ಯಾದವ್, ರಾಹುಲ್ ಚಹಾರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.