
ಬೆಂಗಳೂರು(ಮೇ.6) ವಿರಾಟ್ ಕೊಹ್ಲಿ ಕಳೆದ ಕೆಲ ದಿನಗಳಿಂದ ಬೇಸರದಲ್ಲಿದ್ದಾರೆ. ಇತ್ತೀಚೆಗೆ ನಡೆದ ಲೈಕ್ ವಿವಾದ ಕೊಹ್ಲಿಯನ್ನು ಇನ್ನಿಲ್ಲದಂತೆ ಕಾಡಿದೆ. ಅಭಿಮಾನಿಗಳು ಕೊಹ್ಲಿ ಪರ ನಿಂತಿದ್ದರೂ ಕ್ರಿಕೆಟಿಗ ಮಾತ್ರ ಮೂಡ್ ಆಫ್ ಆಗಿದ್ದು. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಎಂದಿನಂತಿಲ್ಲ ಅನ್ನೋದು ಸ್ಪಷ್ಟವಾಗಿತ್ತು. ಈ ಎಲ್ಲಾ ಬೆಳವಣಿಗೆ ನಿಧಾನಕ್ಕೆ ಮರೆಯಾಗುತ್ತಿದೆ ಅನ್ನೋವಷ್ಟರಲ್ಲೇ ಇದೀಗ ಗಾಯಕ ರಾಹುಲ್ ವೈದ್ಯ ಮಾತುಗಳು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ನಟಿಯ ಫೋಟೋ ಲೈಕ್ ಮಾಡಿದ ವಿವಾದದ ಸ್ಪಷ್ಟನೆಯನ್ನೇ ಮುಂದಿಟ್ಟುಕೊಂಡು ಕೊಹ್ಲಿಯನ್ನ ಅಣಕಿಸಿದ್ದಾರೆ.ಇದು ಕೊಹ್ಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೊಹ್ಲಿ ಟಾರ್ಗೆಟ್ ಮಾಡಿದ ಗಾಯಕ
ಗಾಯಕ, ಬಿಗ್ ಬಾಸ್ 14ನೇ ಆವೃತ್ತಿ ರನ್ನರ್ ಅಪ್ ರಾಹುಲ್ ವೈದ್ಯ ಇದೀಗ ಕೊಹ್ಲಿ ಟಾರ್ಗೆಟ್ ಮಾಡಿ ಮತ್ತೆ ಟ್ರೋಲ್ ಮಾಡಿದ್ದಾರೆ. ಈ ಬಾರಿ ರಾಹುಲ್ ವೈದ್ಯ ಮಾತುಗಳು ಆರ್‌ಸಿಬಿ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ. ಇತ್ತೀಚೆಗೆ ವಿರಾಟ್ ಕೊಹ್ಲಿ ತಪ್ಪಾಗಿ ಇನ್‌ಸ್ಟಾಗ್ರಾಂ ಮೂಲಕ ನಟಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ವಿವಾದ ಜೋರಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿದ್ದರು. ಈ ವೇಳೆ ಕೊಹ್ಲಿ ಇದು ಇನ್‌ಸ್ಟಾಗ್ರಾಂನ ಅಲ್ಗೋರಿದಂ ತಪ್ಪಿನಿಂದ ಆಗಿದೆ ಎಂದಿದ್ದರು. ಆದರೆ ಕೊಹ್ಲಿ ಸ್ಪಷ್ಟನೆಯನ್ನೇ ಕೆಲವರು ಟ್ರೋಲ್ ಮಾಡಿದ್ದಾರೆ. ಈ ಸಾಲಿಗೆ ಇದೀಗ ರಾಹುಲ್ ವೈದ್ಯ ಸೇರಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ತಪ್ಪಾಗಿ ಕೊಟ್ಟ ಒಂದು ಲೈಕ್‌ನಿಂದ ನಟಿ ಅವನೀತ್ ಕೌರ್ ಫಾಲೋವರ್ಸ್ ಡಬಲ್
ಇನ್‌ಸ್ಟಾಗ್ರಾಂ ಮೂಲಕ ರಾಹುಲ್ ವೈದ್ಯ ಕೊಹ್ಲಿಯನ್ನು ಅಣಕಿಸಿದ್ದಾರೆ. ಹುಡುಗಿಯರೇ ನಾನು ಕೆಲ ಮಾತು ಹೇಳಬೇಕು. ಲೈಕ್ ಮಾಡಿದ್ದು ನಾನಲ್ಲ. ಅದು ಇನ್‌ಸ್ಟಾಗ್ರಾಂ ಅಲ್ಗೋರಿದಂ. ಹೀಗಾಗಿ ನೀವು ಯಾವುದೇ ಪಿಆರ್ ಪ್ರಚಾರದ ಪ್ರಯತ್ನ ಮಾಡಬೇಡಿ. ಅದು ಇನ್‌ಸ್ಟಾಗ್ರಾಂ ಮಾಡಿದ ಮಿಸ್ಟೇಕ್ ಎಂದು ಕೊಹ್ಲಿ ಸ್ಪಷ್ಟನೆ ಮಾತುಗಳನ್ನೇ ಮುಂದಿಟ್ಟು ಕೊಹ್ಲಿ ಟ್ರೋಲ್ ಮಾಡಿದ್ದಾರೆ.
ಇಷ್ಟಕ್ಕೆ ಮಾತು ನಿಲ್ಲಿಸದ ರಾಹುಲ್ ವೈದ್ಯ, ವಿರಾಟ್ ಕೊಹ್ಲಿ ನನ್ನ ಖಾತೆ ಬ್ಲಾಕ್ ಮಾಡಿದ್ದಾರೆ. ಇದು ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರವಲ್ಲ. ಕೊಹ್ಲಿ ಕೊಹ್ಲಿ ನನ್ನ ಖಾತೆ ಬ್ಲಾಕ್ ಮಾಡಲು ಸಾಧ್ಯವಿಲ್ಲ. ಇನ್‌ಸ್ಟಾಗ್ರಾಂ ವಿರಾಟ್ ಕೊಹ್ಲಿಗೆ ಒಂದು ಮಾತು ಹೇಳಿರಬೇಕು, ಕೊಹ್ಲಿ ಪರವಾಗಿ ರಾಹುಲ್ ವೈದ್ಯ ಖಾತೆ ಬ್ಲಾಕ್ ಮಾಡುತ್ತೇನೆ ಎಂದು. ಬಳಿಕ ಇನ್‌ಸ್ಟಾಗ್ರಾಂ ಕೊಹ್ಲಿ ಪರವಾಗಿ ನನ್ನ ಖಾತೆ ಬ್ಲಾಕ್ ಮಾಡಿತು ಎಂದು ಅಣಕಿಸಿದ್ದಾರೆ.
ರಾಹುಲ್ ವೈದ್ಯ ಈ ಮಾತಗಳನ್ನು ಹೇಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ಹೊರಹಾಕಿದ್ದಾರೆ. ರಾಹುಲ್ ವೈದ್ಯ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡಿರುವು ರಾಹುಲ್ ವೈದ್ಯ, ವಿರಾಟ್ ಕೊಹ್ಲಿ ಅಭಿಮಾನಿಗಳು ಜೋಕರ್ಸ್ ಎಂದು ಕರೆದಿದ್ದಾರೆ. ಇಷ್ಟೇ ಅಲ್ಲ ಕೊಹ್ಲಿ ಅಭಿಮಾನಿಗಳು ನನ್ನ ವಿರುದ್ದ ಟೀಕೆ, ಆಕ್ರೋಶ ಹೊರಹಾಕುವುದು ಸರಿ. ಆದರೆ ನನ್ನ ಕುಟುಂಬವನ್ನು ಎಳೆದು ತರುವುದು ಸರಿಯಲ್ಲ. ಇದೇ ಕಾರಣಕ್ಕೆ ನಾನು ಸರಿಯಾಗಿ ಹೇಳಿದ್ದೇನೆ, ವಿರಾಟ್ ಕೊಹ್ಲಿ ಅಭಿಮಾನಿಗಳು ಕೇವಲ ಜೋಕರ್ಸ್ ಎಂದಿದ್ದಾರೆ.
ಫೋಟೋ ವಿವಾದದಿಂದ ಬೇಸರ
ವಿರಾಟ್ ಕೊಹ್ಲಿ ಇತ್ತೀಚೆಗೆ ನಟಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿ ವಿವಾದ ಸೃಷ್ಟಿಸಿದ್ದರು. ಬಳಿಕ ಸ್ಪಷ್ಟನೆ ನೀಡಿ ಪ್ರಕರಣ ಅಂತ್ಯಗೊಳಿಸಿದ್ದರು. ಕೊಹ್ಲಿ ವಿರುದ್ಧ ಹರಿದಾಡಿದ ಮೀಮ್ಸ್ ಹಾಗೂ ಟ್ರೋಲ್‌ನಿಂದ ಕೊಹ್ಲಿ ಬೇಸರಗೊಂಡಿದ್ದರು. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಸಿಡಿಸಿದರೂ ಸಂಭ್ರಮಿಸಲಿಲ್ಲ. ಇನ್ನು ಸಿಎಸ್‌ಕೆ ವಿರುದ್ದ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದರೂ ಕೊಹ್ಲಿ ಸಂಭ್ರಮಿಸಲಿಲ್ಲ. ಕೊಹ್ಲಿ ಸಂಪೂರ್ಣ ಪಂದ್ಯದಲ್ಲಿ ಡಲ್ಲಾಗಿದ್ದರು. ಈ ಕುರಿತು ಅಭಿಮಾನಿಗಳು ಪ್ರಶ್ನಿಸಿದ್ದರು.
ಅವನೀತ್ ಕೌರ್ ಫೋಟೋ ಲೈಕ್ ಮಾಡಿ ಸ್ಪಷ್ಟನೆ ಕೊಟ್ಟರೂ ಕೊಹ್ಲಿ ಬೆಂಬಿಡದ ಮೀಮ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.