ಉದ್ಘಾಟನಾ ಪಂದ್ಯವಾಡಿದ ಕೆನಡಾ-ಅಮೆರಿಕ ತಂಡಗಳಲ್ಲಿ ಒಟ್ಟು 10 ದೇಶಗಳ ಆಟಗಾರರು ಕಣಕ್ಕಿಳಿದರು. ಈ ಪೈಕಿ ಭಾರತೀಯ ಮೂಲದವರೇ 7 ಮಂದಿ ಇದ್ದರು. ಅಮೆರಿಕ ತಂಡದಲ್ಲಿ ಮೂವರು, ಕೆನಡಾ ತಂಡದಲ್ಲಿ ನಾಲ್ವರು ಭಾರತ ಮೂಲಕ ಆಟಗಾರರಿದ್ದರು.
ಡಲ್ಲಾಸ್: ರಾಜ್ಯದ ದಾವಣಗೆರೆಯಲ್ಲಿ ಆಡಿ ಬೆಳೆದ ಯುವಕ ಶ್ರೇಯಸ್ ಮೋವಾ ಟಿ20 ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ಕೆನಡಾ ಪರ ಅಬ್ಬರಿಸಿದ್ದಾರೆ. ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಶ್ರೇಯಸ್ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿ 16 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ನೊಂದಿಗೆ 32 ರನ್ ಸಿಡಿಸಿದರು.
ಟಿ20 ವಿಶ್ವಕಪ್: ಕೆನಡಾ ತಂಡದಲ್ಲಿ ಕೆನಡಾ ಆಟಗಾರರು ಯಾರೂ ಇಲ್ಲ!
ಡಲ್ಲಾಸ್: ಭಾನುವಾರ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಆಡಿದ ಕೆನಡಾ ತಂಡದಲ್ಲಿ ಕೆನಡಾದ ಯಾವೊಬ್ಬ ಆಟಗಾರರನೂ ಇಲ್ಲದಿದ್ದಿದ್ದು ವಿಶೇಷ. ಭಾರತ ಮೂಲದ ನಾಲ್ವರು, ಪಾಕ್‌ನ ಇಬ್ಬರು, ಗಯಾನಾದ ಇಬ್ಬರು, ಕುವೈತ್, ಬಾರ್ಬಡೊಸ್, ಜಮೈಕಾ ಮೂಲದ ತಲಾ ಓರ್ವ ಆಟಗಾರ ಕೆನಡಾ ತಂಡ ಪ್ರತಿನಿಧಿಸಿದರು.
T20 World Cup 2024 ಪಪುವಾ ನ್ಯೂ ಗಿನಿ ವಿರುದ್ಧ ಎದ್ದು ಬಿದ್ದು ಗೆದ್ದ ವೆಸ್ಟ್‌ಇಂಡೀಸ್
ಕೆನಡಾ-ಯುಎಸ್ ತಂಡದಲ್ಲಿ 10 ದೇಶಗಳ ಆಟಗಾರರು!
ಉದ್ಘಾಟನಾ ಪಂದ್ಯವಾಡಿದ ಕೆನಡಾ-ಅಮೆರಿಕ ತಂಡಗಳಲ್ಲಿ ಒಟ್ಟು 10 ದೇಶಗಳ ಆಟಗಾರರು ಕಣಕ್ಕಿಳಿದರು. ಈ ಪೈಕಿ ಭಾರತೀಯ ಮೂಲದವರೇ 7 ಮಂದಿ ಇದ್ದರು. ಅಮೆರಿಕ ತಂಡದಲ್ಲಿ ಮೂವರು, ಕೆನಡಾ ತಂಡದಲ್ಲಿ ನಾಲ್ವರು ಭಾರತ ಮೂಲಕ ಆಟಗಾರರಿದ್ದರು. ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಜಮೈಕಾ, ಬಾರ್ಬಡೊಸ್ ಸೇರಿದಂತೆ ಇತರ ಕೆಲ ದೇಶಗಳ ಆಟಗಾರರೂ ಈ ಪಂದ್ಯದಲ್ಲಿ ಕಣಕ್ಕಿಳಿದರು.
ಟಿ20 ವಿಶ್ವಕಪ್‌ನಲ್ಲಿ ಎರಡು ದೇಶಗಳ ಪರ ಆಡಿದ 5ನೇ ಆಟಗಾರ ಆ್ಯಂಡರ್‌ಸನ್!
ಟೆಕ್ಸಾಸ್: ಈ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ತಂಡದ ಪರ ಕಣಕ್ಕಿಳಿದ ಕೋರೆ ಆ್ಯಂಡರ್‌ಸನ್, ಟಿ20 ವಿಶ್ವಕಪ್ ಇತಿಹಾಸದಲ್ಲೇ 2 ದೇಶದ ತಂಡಗಳ ಪರ ಆಡಿದ 5ನೇ ಆಟಗಾರ ಎನಿಸಿಕೊಂಡರು. 33 ವರ್ಷದ ಆ್ಯಂಡರ್‌ಸನ್ 2016ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಆ್ಯಂಡರ್‌ಸನ್ ಹೊರತಾಗಿ ವ್ಯಾನ್ ಡೆರ್ ಮರ್ವೆ ದಕ್ಷಿಣ ಆಫ್ರಿಕಾ ಮತ್ತು ನೆದರ್‌ಲೆಂಡ್ಸ್, ಡರ್ಕ್ ನ್ಯಾನಸ್ ಆಸ್ಟ್ರೇಲಿಯಾ ಮತ್ತು ನೆದರ್‌ಲೆಂಡ್ಸ್, ಮಾರ್ಕ್ ಚಾಪ್ಮನ್ ಹಾಂಕಾಂಗ್ ಮತ್ತು ನ್ಯೂಜಿಲೆಂಡ್, ಡೇವಿಡ್ ವೀಸಾ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾ ತಂಡಗಳ ಪರ ಟಿ20 ವಿಶ್ವಕಪ್ ಆಡಿದ್ದಾರೆ.
2025ರ ಐಪಿಎಲ್ ಟೂರ್ನಿಗೂ ಮುನ್ನ ಒಂದು ತಂಡಕ್ಕೆ ಎಷ್ಟು ರೀಟೈನ್‌ಗೆ ಅವಕಾಶ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಟಿ20 ವಿಶ್ವಕಪ್ ಸ್ವಾರಸ್ಯ
ಈ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಅತಿಹಿರಿಯ ಆಟಗಾರ ಎನ್ನುವ ಹಿರಿಮೆ ಉಗಾಂಡದ ಫ್ರಾಂಕ್ ಎನ್‌ಸುಬುಗಾಗೆ ಸಲ್ಲುತ್ತದೆ. 43 ವರ್ಷದ ಫ್ರಾಂಕ್ 27 ವರ್ಷಗಳಿಂದ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಫ್ರಾಂಕ್ ಉಗಾಂಡ ಪರ 54 ಟಿ20 ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಆಸ್ಟ್ರೇಲಿಯಾದ ಬ್ರಾಡ್ ಹಾಗ್, 2016ರಲ್ಲಿ ಹಾಂಕಾಂಗ್‌ನ ರ್‍ಯಾನ್ ಕ್ಯಾಂಬೆಲ್ ತಮ್ಮ 43ನೇ ವಯಸ್ಸಿನಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಇನ್ನು 2024ರ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಅತಿಕಿರಿಯ ಆಟಗಾರ ನೇಪಾಳದ ಗುಲ್ಶನ್ ಝಾ. ಈತನಿಗೆ ವಯಸ್ಸು 18 ವರ್ಷ.