ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಆರ್‌ಸಿಬಿ ಪ್ರಮುಖ ಪ್ಲೇಯರ್, ನಮ್ಮ ಕನ್ನಡತಿ ಶ್ರೇಯಾಂಕ ಪಾಟೀಲ್ ತನ್ನ ತಂದೆಗೆ 35 ಲಕ್ಷ ರೂಪಾಯಿ ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದ್ದಾರೆ. ತಂದೆ ಹುಟ್ಟು ಹಬ್ಬಕ್ಕೆ ಶ್ರೇಯಾಂಕಾ ಪಾಟೀಲ್ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಶ್ರೇಯಾಂಕ ಗಿಫ್ಟ್ ಕೊಟ್ಟ ಕಾರು ಯಾವುದು?
ಬೆಂಗಳೂರು(ಮಾ.26) ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಹಲವು ಕನ್ನಡತಿಯರು ಮಿಂಚಿದ್ದಾರೆ. ವೇದಾ ಕೃಷ್ಣಮೂರ್ತಿ, ವನಿತಾ ವಿಆರ್ ಸೇರಿದಂತೆ ಹಲವರು ತಂಡದ ಖಾಯಂ ಸದಸ್ಯರಾಗಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಟೀಂ ಇಂಡಿಯಾ ವುಮೆನ್ ತಂಡದ ಸೆನ್ಸೇಶನ್ ಶ್ರೇಯಾಂಕ ಪಾಟೀಲ್. ನಮ್ಮ ಕನ್ನಡತಿ, ಆರ್‌ಸಿಬಿ ತಂಡದ ಪ್ರಮುಖ ಆಟಗಾರ್ತಿಯಾಗಿರುವ ಶ್ರೇಯಾಂಕಾ ಪಾಟೀಲ್‌ಗೆ ಅಪಾರ ಅಭಿಮಾನಿ ಬಳಗವೇ ಇದೆ. ಕಳೆದ ಬಾರಿ ಆರ್‌ಸಿಬಿ ಮಹಿಳಾ ತಂಡ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಶ್ರೇಯಾಂಕ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಶ್ರೇಯಾಂಕ ಪಾಟೀಲ್ ತಮ್ಮ ತಂದೆಯ ಹುಟ್ಟು ಹಬ್ಬಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ. ತಂದೆ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದ್ದಾರೆ.
ಶ್ರೇಯಾಂಕ ಪಾಟೀಲ್ ತಂದಗೆ ನೀಡಿದ ಕಾರು ಯಾವುದು?
ಶ್ರೇಯಾಂಕಾ ಪಾಟೀಲ್ ತಮ್ಮ ತಂದೆಗೆ 35 ಲಕ್ಷ ರೂಪಾಯಿ ಮೌಲ್ಯದ ಟೋಯೋಟಾ ಇನೋವಾ ಕ್ರ್ಸೈಸ್ಟಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಹುತೇಕ ಫೀಚರ್ಸ್ ಒಳಗೊಂಡ ಈ ಕಾರನ್ನು ತಂದೆಗೆ ಗಿಫ್ಟ್ ಆಗಿ ನೀಡಿದ್ದಾರೆ.
ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಭರ್ಜರಿ ಡ್ಯಾನ್ಸ್ ಗೆ ಫಿದಾ ಆಗೋದ್ರು ಫ್ಯಾನ್ಸ್
ತಂದೆ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್
ಶ್ರೇಯಾಂಕ ಪಾಟೀಲ್ ತಂದೆಗೆ ಕಾರು ಉಡುಗೊರೆ ಕೊಡಲು ನಿರ್ಧರಿಸಿದ್ದರು. ತಂದೆ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡಿದರೆ ಸಂಬ್ರಮ ಮತ್ತಷ್ಟು ಹೆಚ್ಚಾಗಲಿದೆ ಎಂದು ನಿರ್ಧರಿಸಿದ್ದಾರೆ. ಕ್ರೈಸ್ಟಾ ಕಾರು ಬುಕ್ ಮಾಡಿದ್ದಾರೆ. ತಂದೆಯ ಹುಟ್ಟು ಹಬ್ಬದ ದಿನ ಟೀಂ ಇಂಡಿಯಾ ಹಾಗೂ ಆರ್‌ಸಿಬಿ ಪ್ರಮುಖ ಆಟಗಾರ್ತಿಯರಾದ ಸ್ಮೃತಿ ಮಂದನಾ, ಜೇಮಿನಿ ಸೇರಿದಂತೆ ಹಲವರು ಶ್ರೇಯಾಂಕ ಪಾಟೀಲ್ ಮನೆಗೆ ಆಗಮಿಸಿದ್ದರು. ತಂದೆಗೆ ಇದರ ಸುಳಿವೇ ಇರಲಿಲ್ಲ. ಹುಟ್ಟು ಹಬ್ಬ ದಿನ ತಂದೆ ಅಚ್ಚರಿ ನೀಡಿದ್ದರು.
22ನೇ ವಯಸ್ಸಿಗೆ ತಂದೆಗೆ 35 ಲಕ್ಷ ರೂ ಕಾರು ಉಡುಗೊರೆ
ತಂದೆಗೆ ಸಣ್ಣ ವಯಸ್ಸಿನಲ್ಲಿ ಕಾರು ಉಡುಗೊರೆ ನೀಡಿರುವುದು ಅತೀವ ಸಂತಸವಿದೆ ಎಂದು ಶ್ರೇಯಾಂಕ ಪಾಟೀಲ್ ಹೇಳಿದ್ದಾರೆ. ಹಲವರು ಈ ಕುರಿತು ಪ್ರಶ್ನಿಸಿದ್ದಾರೆ. ಇದು ನನ್ನ ಸಂಭ್ರಮ ಹೆಚ್ಚಿಸಿದೆ. ತಂದೆ ನನ್ನ ಕ್ರಿಕೆಟ್ ಕರಿಯರ್‌ಗೆ ಹಲವು ತ್ಯಾಗ ಮಾಡಿದ್ದಾರೆ. ತಂದೆಯ ತ್ಯಾಗ ಹಾಗೂ ಪರಿಶ್ರಮದಿಂದ ನಾನು ಇಲ್ಲಿದ್ದೇನೆ. ಹೀಗಾಗಿ ತಂದೆಗೆ ಸಣ್ಣ ಉಡುಗೊರೆ ನೀಡಿದ್ದೇನೆ ಎಂದು ಶ್ರೇಯಾಂಕ ಪಾಟೀಲ್ ಹೇಳಿದ್ದಾರೆ. ನಾನು ಟೀಂ ಇಂಡಿಯಾ ಹಾಗೂ ಆರ್‌ಸಿಬಿಯಿಂದ ಸಂಭಾವನೆ ಪಡೆಯುತ್ತಿದ್ದೇನೆ. ಹೀಗಾಗಿ ನಾನು ತಂದೆಗೆ ಉಡುಗೊರೆ ನೀಡಲು ಸಾಧ್ಯವಾಗಿದೆ ಎಂದಿದ್ದಾರೆ.
ಹಲವು ಬಾರಿ ತಂದೆ ಕಾರು ಖರೀದಿಸಲು ಹೇಳಿದ್ದರು. ಅಭ್ಯಾಸಕ್ಕೆ ತೆರಳಲು, ಇತರ ಅಗತ್ಯಕ್ಕೆ ಖರೀದಿಸಲು ಸೂಚಿಸಿದ್ದರು. ಆದರೆ ನನಗಿಂತ ನನ್ನ ತಂದೆಗೆ ಕಾರು ನೀಡಬೇಕೆಂದು ನಾನು ಬಯಸಿದ್ದೆ ಎಂದು ಶ್ರೇಯಾಂಕ ಪಾಟೀಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಡ್‌ಕಾಸ್ಟ್ ವೇಳೆ ಹೇಳಿದ್ದಾರೆ.
ಮೊದಲು ನಾನು ನನ್ನ ಪೋಷಕರಿಗೆ ಉಡುಗೊರೆ ನೀಡಲು ಬಯಸುತ್ತೇನೆ. ನನ್ನ ಪ್ರೇರಣೆ, ಶಕ್ತಿ, ಪ್ರೋತ್ಸಾಹ ಎಲ್ಲವೂ ಪೋಷಕರಾಗಿದ್ದಾರೆ. ಹೀಗಾಗಿ ಮೊದಲು ಅವರಿಗೆ ಉಡುಗೊರೆ ನೀಡುತ್ತೇನೆ ಎಂದು ಶ್ರೇಯಾಂಕಾ ಪಾಟೀಲ್ ಹೇಳಿದ್ದಾರೆ. ಈ ಬಾರಿಯ ಮಹಿಳಾ ಐಪಿಎಲ್ ಟೂರ್ನಿ ನಡುವೆ ಅಂದರೆ ಫೆಬ್ರವರಿ ತಿಂಗಳಲ್ಲಿ ಶ್ರೇಯಾಂಕ ಪಾಟೀಲ್ ಕಾರು ಖರೀದಿಸಿ ಉಡುಗೊರೆ ನೀಡಿದ್ದರು. ಶ್ರೇಯಾಂಕಾ ಸಾಧನೆಗೆ ಹಾಗೂ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೋಷಕರಿಗೆ ಮತ್ತಷ್ಟು ಉಡುಗೊರೆ ನೀಡುವಂತಾಗಲಿ ಎಂದು ಹಲವರು ಹಾರೈಸಿದ್ದಾರೆ.
ಆರ್‌ಸಿಬಿ ಕ್ರಶ್ ಶ್ರೇಯಾಂಕ ಪಾಟೀಲ್ ವಿಚಿತ್ರ ಹವ್ಯಾಸ; ಸಂತಸವಾದ್ರೂ, ದುಃಖವಾದ್ರೂ ಪಕ್ಕದಲ್ಲಿರೋರನ್ನ ಕಚ್ಚಿಬಿಡ್ತಾಳೆ