ಶೋಯೆಬ್ ಮಲ್ಲಿಕ್‌ಗೆ ಪಿಸಿಬಿ ಗ್ರೀನ್ ಸಿಗ್ನಲ್; ಸಾನಿಯಾ ಹಾಗೂ ಪುತ್ರನ ನೋಡಲು ಭಾರತ ಪ್ರವಾಸ!

Suvarna News   | Asianet News
Published : Jun 20, 2020, 03:43 PM ISTUpdated : Jun 20, 2020, 04:05 PM IST
ಶೋಯೆಬ್ ಮಲ್ಲಿಕ್‌ಗೆ ಪಿಸಿಬಿ ಗ್ರೀನ್ ಸಿಗ್ನಲ್; ಸಾನಿಯಾ ಹಾಗೂ ಪುತ್ರನ ನೋಡಲು ಭಾರತ ಪ್ರವಾಸ!

ಸಾರಾಂಶ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಎಲ್ಲಾ ತಯಾರಿ ಮಾಡಿಕೊಂಡಿದೆ. ತಂಡ ಶೀಘ್ಲದಲ್ಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದರೆ ಹಿರಿಯ ಕ್ರಿಕೆಟಿಗ ಶೋಯೆಬ್ ಮಲ್ಲಿಕ್‌ಗೆ ಪತ್ನಿ ಹಾಗೂ ಪುತ್ರನ ಬೇಟಿಯಾಗಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಪ್ರವಾಸ ಮಾಡಲು ಅನುಮತಿ ನೀಡಿದೆ. 

ಲಾಹೋರ್(ಜೂ.20): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಪಾಕಿಸ್ತಾನ ತಂಡದಲ್ಲಿ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಸ್ಥಾನ ಪಡೆದಿದ್ದಾರೆ. ಜೂನ್ 28 ರಂದು ಪಾಕಿಸ್ತಾನ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಬಳಿಕ 14 ದಿನ ಕ್ವಾರಂಟೈನ್ ಆಗಲಿದೆ. ಆದರೆ ಶೋಯೆಬ್ ಮಲಿಕ್ ತಂಡದ ಜೊತೆ ಇಂಗ್ಲೆಂಡ್‌ಗೆ ಪ್ರಯಾಣ ಮಾಡುತ್ತಿಲ್ಲ. ಬದಲಾಗಿ ಭಾರತಕ್ಕೆ ಆಗಮಿಸಲಿದ್ದಾರೆ.

ಕೊಹ್ಲಿ, ರೋಹಿತ್‌ ಹೆಣ್ಣಿನ ಮುಖದ ಫೋಟೋ ವೈರಲ್‌

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಹಾಗೂ ಲಾಕ್‌ಡೌನ್ ಕಾರಣ ಕಳೆದ 5 ತಿಂಗಳಿಂದ ಶೋಯೆಬ್ ಮಲಿಕ್ ಪಾಕಿಸ್ತಾನ ಸೈಲ್‌ಕೋಟ್‌ನಲ್ಲಿ ಬಂಧಿಯಾಗಿದ್ದಾರೆ. ಇತ್ತ ಮಲ್ಲಿಕ್ ಪತ್ನಿ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪುತ್ರ ಭಾರತದಲ್ಲಿದ್ದಾರೆ. ಕಳೆದ 5 ತಿಂಗಳಿಂದ ಪತ್ನಿ ಹಾಗೂ ಪುತ್ರನನ್ನು ಶೋಯೆಬ್ ಮಲಿಕ್ ಬೇಟಿಯಾಗಿಲ್ಲ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅನುಮತಿ ಪಡೆದು ಇದೀಗ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಈ ವರ್ಷ ಟಿ20 ವಿಶ್ವಕಪ್‌ ಆಯೋಜನೆ ಕಷ್ಟವೆಂದ ಆಸ್ಟ್ರೇಲಿಯಾ.

ಜುಲೈ 24 ರಂದು ಶೋಯೆಬ್ ಮಲಿಕ್ ಭಾರತ ಪ್ರವಾಸ ಮುಗಿಸಿ ಇಂಗ್ಲೆಂಡ್‌‌ಗೆ ತೆರಳಲಿದ್ದಾರೆ. ಇದಕ್ಕಾಗಿ ಪಾಕಿಸ್ತಾನ ಕ್ರಿಕೆಚ್ ಮಂಡಳಿ, ಇಂಗ್ಲೆಂಡ್ ಜೊತೆ ಮಾತುಕತೆ ನಡೆಸಿದೆ. ಶೋಯೆಬ್ ಮಲಿಕ್ ಇಂಗ್ಲೆಂಡ್ ಪ್ರವೇಶದ ವೇಳೆ ಇಂಗ್ಲೆಂಡ್ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಿದ್ದಾರೆ ಎಂದಿದೆ.

ಜೂನ್ 28ಕ್ಕೆ ಪಾಕಿಸ್ತಾನ ತಂಡ ಮ್ಯಾಂಚೆಸ್ಟರ್‌ಗೆ ತೆರಳಲಿದೆ. ಡರ್ಬಿಶೇರ್ ಜೊತೆಗಿನ ಪಂದ್ಯಕ್ಕೂ ಮೊದಲು ಪಾಕ್ ತಂಡ 14 ದಿನ ಕ್ವಾರಂಟೈನ್ ಆಗಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?