ಕೊಹ್ಲಿ, ರೋಹಿತ್‌ ಹೆಣ್ಣಿನ ಮುಖದ ಫೋಟೋ ವೈರಲ್‌

Published : Jun 20, 2020, 08:56 AM ISTUpdated : Jun 20, 2020, 09:02 AM IST
ಕೊಹ್ಲಿ, ರೋಹಿತ್‌ ಹೆಣ್ಣಿನ ಮುಖದ ಫೋಟೋ ವೈರಲ್‌

ಸಾರಾಂಶ

ಪುರುಷರು ಮಹಿಳೆಯಾಗಿದ್ದರೆ ಯಾವ ರೀತಿ ಕಾಣುತ್ತಿದ್ದರು, ಮಹಿಳೆಯರು ಪುರುಷರಾಗಿದ್ದರೆ ಹೇಗೆ ಗೋಚರಿಸುತ್ತಿದ್ದರು ಎಂದು ತೋರಿಸುವ ಆ್ಯಪ್‌ ಫಿಲ್ಟರ್‌ನಲ್ಲಿ ಭಾರತೀಯ ಕ್ರಿಕೆಟಿಗರ ಫೋಟೋಗಳು ವೈರಲ್ ಆಗುತ್ತಿವೆ. ಈ ಪೈಕಿ ರೋಹಿತ್ ಫೋಟೋ ನೋಡಿ ಚಹಲ್ ಕಾಲೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜೂ.20): ಟೀಂ ಇಂಡಿಯಾ ಕ್ರಿಕೆಟ್ ಆಟಗಾರರ ‘ಜೆಂಡರ್‌ ಸ್ವ್ಯಾಪ್‌ ಫಿಲ್ಟರ್‌’ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಪುರುಷರು ಮಹಿಳೆಯಾಗಿದ್ದರೆ ಯಾವ ರೀತಿ ಕಾಣುತ್ತಿದ್ದರು, ಮಹಿಳೆಯರು ಪುರುಷರಾಗಿದ್ದರೆ ಹೇಗೆ ಗೋಚರಿಸುತ್ತಿದ್ದರು ಎಂದು ತೋರಿಸುವ ಆ್ಯಪ್‌ ಫಿಲ್ಟರ್‌ ಇದಾಗಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ರಾಹುಲ್‌, ಧೋನಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಜಡೇಜಾ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಹಿಟ್‌ ಮ್ಯಾನ್‌ಗೆ ಕ್ಯೂಟ್ ಎಂದ ಚಹಲ್:

ಎಲ್ಲಾ ಕ್ರಿಕೆಟಿಗರು ಒಬ್ಬರಿಗಿಂತ ಮತ್ತೊಬ್ಬರು ಸಖತ್ತಾಗಿಯೇ ಕಾಣುತ್ತಿದ್ದಾರೆ. ಈ ಪೈಕಿ ಗುಳಿ ಕೆನ್ನೆಗಳನ್ನು ಹೊಂದಿದ ರೋಹಿತ್ ಶರ್ಮಾ ಅವರನ್ನು ಮಣಿಕಟ್ಟು ಸ್ಪಿನ್ನರ್ ಯುಜುವೇಂದ್ರ ಚಹಲ್ ತುಂಬಾ ಚೆನ್ನಾಗಿದ್ದೀರ ಎಂದು ಟ್ವೀಟ್ ಮಾಡಿದ್ದಾರೆ. ನೀವು ನೋಡುವುದಕ್ಕೆ ತುಂಬಾ ಚೆನ್ನಾಗಿದ್ದೀರ ರೋಹಿತಾ ಶರ್ಮಾ.. ಅಣ್ಣ ಎಂದು ಚಹಲ್ ಹಿಟ್‌ಮ್ಯಾನ್ ಕಾಲೆಳೆದಿದ್ದಾರೆ.

ಕೊರೋನಾ ಭೀತಿಯ ನಡುವೆಯೇ ನಿಧಾನವಾಗಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗತೊಡಗಿವೆ. ಇದೀಗ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದೆ. ಇನ್ನು ಬಿಸಿಸಿಐ ಕೂಡಾ ಈ ವರ್ಷ ಐಪಿಎಲ್ ಆಯೋಜಿಸುವ ಕುರಿತಂತೆ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಐಸಿಸಿ ಟಿ20 ವಿಶ್ವಕಪ್ ಭವಿಷ್ಯ ಏನು ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಾಗಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

109 ರನ್ ಗಳಿಸಿದ ಆರ್ಯವೀರ್ ಸೆಹ್ವಾಗ್; ಮಗನಿಗೆ ಎಚ್ಚರಿಕೆಯ ಕಿವಿ ಮಾತು ಹೇಳಿದ ವೀರೂ..!
ತಂಡದ 7 ಬೇರೆ ಬೇರೆ ಕ್ರಿಕೆಟಿಗರ ಸರ್‌ನೇಮ್ ಒಂದೇ, ಗಮನಸೆಳೆದ ಏಷ್ಯನ್ ಗೇಮ್ಸ್ ಸ್ಕೋರ್‌ಬೋರ್ಡ್