2011ರ ವಿಶ್ವಕಪ್‌ ಫೈನಲ್ ಫಿಕ್ಸ್, ಇದು ಉನ್ನತ ಮಟ್ಟದಲ್ಲಿ ನಡೆದ ಕಳ್ಳಾಟ ಎಂದ ಲಂಕಾ ಮಾಜಿ ಮಂತ್ರಿ!

By Suvarna News  |  First Published Jun 18, 2020, 5:13 PM IST

2011ರ ವಿಶ್ವಕಪ್ ಟೂರ್ನಿ ಇಂದಿಗೂ ಭಾರತೀಯರ ಅಚ್ಚು ಮೆಚ್ಚಿನ ಸರಣಿಯಾಗಿದೆ. ಅದರಲ್ಲೂ ಫೈನಲ್ ಪಂದ್ಯ ಹಾಗೂ ಧೋನಿ ಸಿಡಿಸಿದ ಸಿಕ್ಸರ್ ಹಚ್ಚ ಹಸುರಾಗಿದೆ. ಇದೀಗ ಶ್ರೀಲಂಕಾ ಮಾಜಿ ಕ್ರೀಡಾ ಮಂತ್ರಿ ಫಿಕ್ಸಿಂಗ್ ಬಾಂಬ್ ಸಿಡಿಸಿದ್ದಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು. ಇದು ಆಟಗಾರರ ನಡುವಿನ ಫಿಕ್ಸಿಂಗ್ ಅಲ್ಲ, ಬದಲಾಗಿ ಉನ್ನತ ಮಟ್ಟದ ಫಿಕ್ಸಿಂಗ್ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.


ಕೊಲೊಂಬೊ(ಜೂ.18): ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದು ಸಂಭ್ರಮಿಸಿದ ಕ್ಷಣಗಳು ಇನ್ನೂ ಹಚ್ಚ ಹಸುರಾಗಿದೆ. ಶ್ರೀಲಂಕಾ ತಂಡವನ್ನು ಮಣಿಸಿ ಭಾರತ ವಿಶ್ವಕಪ್ ಟ್ರೋಫಿ ಗೆದ್ದಿತ್ತು.  ಭಾರತ ಆತಿಥ್ಯ ವಹಿಸಿದ ಈ ಟೂರ್ನಿಯ ಪ್ರತಿಯೊಂದು ಪಂದ್ಯಗಳು ಅವಿಸ್ಮರಣೀಯವಾಗಿತ್ತು. 2011ರ ವಿಶ್ವಕಪ್ ವೇಳೆ ಶ್ರೀಲಂಕಾ ಕ್ರೀಡಾ ಸಚಿವರಾಗಿದ್ದ ಮಹೀಂದಾನಂದ ಅಲ್ತುಗಮೆಗೆ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. 2011ರ ವಿಶ್ವಕಪ್ ಫೈನಲ್ ಪಂದ್ಯ ಭಾರತಕ್ಕೆ ಮಾರಾಟ ಮಾಡಿದ್ದೇವು ಎಂದಿದ್ದಾರೆ.

ಈ ವರ್ಷ ಟಿ20 ವಿಶ್ವಕಪ್‌ ಆಯೋಜನೆ ಕಷ್ಟವೆಂದ ಆಸ್ಟ್ರೇಲಿಯಾ...

Tap to resize

Latest Videos

2010 ರಿಂದ 2015ರ ವರೆಗೆ ಶ್ರೀಲಂಕಾ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲ್ತುಗಮೆಗೆ ಫಿಕ್ಸಿಂಗ್ ಸ್ಫೋಟ ಮಾಡಿದ್ದಾರೆ. ಫೈನಲ್ ಪಂದ್ಯವನ್ನು ಉನ್ನತ ಮಟ್ಟದಲ್ಲಿ ಭಾರತಕ್ಕೆ ಮಾರಾಟ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನನಗೆ ಈ ವಿಚಾರ ಹೇಳಲು ಸಾಧ್ಯವಾಗಿಲ್ಲ. ಇದೀಗ ಬಹಿರಂಗ ಪಡಿಸುತ್ತಿದ್ದೇನೆ ಎಂದು ಮಹಿಂದಾನಂದ ಹೇಳಿದ್ದಾರೆ.

ಕೊರೋನಾ ಮುಕ್ತ ನ್ಯೂಜಿಲೆಂಡ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ?

ಎಲ್ಲಾ ಮಾಹಿತಿ ಈಗ ಬಹಿರಂಗ ಪಡಿಸುವುದಿಲ್ಲ. ಆದರೆ ಮುಂದೊಂದು ಬಹಿರಂಗ ಪಡಿಸುತ್ತೇನೆ. ನಾವು ಪಂದ್ಯವನ್ನು ಭಾರತಕ್ಕೆ ಮಾರಾಟ ಮಾಡಿದ್ದೇವೆ. ಶ್ರೀಲಂಕಾ ತಂಡ ಬಲಿಷ್ಠವಾಗಿತ್ತು. ನಾವೇ ವಿಶ್ವಕಪ್ ಗೆಲ್ಲುತ್ತಿದ್ದೇವು. ಆದರೆ ಉನ್ನತ ಮಟ್ಟದಲ್ಲಿ ಪಂದ್ಯ ಮಾರಾಟ ಮಾಡಲಾಗಿತ್ತು ಎಂದು ಮಹಿಂದಾನಂದ ಹೇಳಿದ್ದಾರೆ.

ಕಳಪೆ ಫೀಲ್ಡಿಂಗ್, ಬೌಲಿಂಗ್ ಮಾಡೋ ಮೂಲಕ ಪಂದ್ಯವನ್ನು ಭಾರತಕ್ಕೆ ಬಿಟ್ಟುಕೊಡಲಾಯಿತು. ಶ್ರೀಲಂಕಾ ಈ ರೀತಿ ಹಲವು ಪಂದ್ಯಗಳನ್ನು ಫಿಕ್ಸ್ ಮಾಡಿದೆ. ಇತ್ತೀಚಿನ ಊದಾಹರಣೆ 2018ರ ಲಂಕಾ-ಇಂಗ್ಲೆಂಡ್ ಟೆಸ್ಟ್ ಪಂದ್ಯ ಎಂದು ಮಹೀಂದಾನಂದ ಹೇಳಿದ್ದಾರೆ. 

2017ರಲ್ಲಿ ಶ್ರೀಲಂಕಾ ಮಾಡಿ ನಾಯಕ ಅರ್ಜುನ್ ರಣತುಂಗ, 2011ರ ವಿಶ್ವಕಪ್ ಫೈನಲ್  ಫಿಕ್ಸ್ ಆಗಿದೆ ಅನ್ನೋ ಅನುಮಾನ ಬಲವಾಗುತ್ತಿದೆ. ಈ ಕುರಿತು ತನಿಖೆ ಆಗಬೇಕಿದೆ ಎಂದಿದ್ದರು. 

click me!