ಪಠಾಣ್ ಸಾಂಗ್‌ಗೆ ಸ್ಟೆಪ್‌ ಹಾಕಿದ ಜಡ್ಡು-ಕೊಹ್ಲಿ..! ನನಗಿಂತ ನೀವೇ ಸೂಪರ್ ಎಂದ ಶಾರುಕ್‌ ಖಾನ್..!

Published : Feb 14, 2023, 04:38 PM IST
ಪಠಾಣ್ ಸಾಂಗ್‌ಗೆ ಸ್ಟೆಪ್‌ ಹಾಕಿದ ಜಡ್ಡು-ಕೊಹ್ಲಿ..! ನನಗಿಂತ ನೀವೇ ಸೂಪರ್ ಎಂದ ಶಾರುಕ್‌ ಖಾನ್..!

ಸಾರಾಂಶ

ಪಠಾಣ್ ಸಿನಿಮಾದ ಹಾಡಿಗೆ ಸ್ಟೆಪ್‌ ಹಾಕಿದ ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ನಾಗ್ಪುರ ಟೆಸ್ಟ್ ಪಂದ್ಯದ ವೇಳೆ 'ಝೂಮ್‌ ಜೋ ಪಠಾಣ್' ಹಾಡಿಗೆ ಮೈದಾನದಲ್ಲಿ ಡ್ಯಾನ್ಸ್ ಈ ಡ್ಯಾನ್ಸ್‌ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಶಾರುಕ್ ಖಾನ್

ಮುಂಬೈ(ಫೆ.14): ಸದ್ಯ ಎಲ್ಲೆಲ್ಲೂ ಬಾಲಿವುಡ್‌ ಸಿನೆಮಾ ಪಠಾಣ್ ಅಬ್ಬರವೇ ಜೋರಾಗಿದೆ. ಪಠಾಣ್ ಸಿನಿಮಾದ ಕ್ರೇಜ್‌ ಹೇಗಿದೆ ಎಂದರೆ ಅಭಿಮಾನಿಗಳು, ಸೆಲಿಬ್ರಿಟಿಗಳು ಮಾತ್ರವಲ್ಲ ಕ್ರಿಕೆಟಿಗರು ಕೂಡಾ ಪಠಾಣ್ ಸಿನಿಮಾದ ಗುಂಗಿನಲ್ಲಿದ್ದಾರೆ. ಇದೀಗ ಫೆಬ್ರವರಿ 11ರಂದು ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ನಾಗ್ಪುರ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಪಠಾಣ್ ಸಿನಿಮಾದ 'ಝೂಮ್‌ ಜೋ ಪಠಾಣ್' ಹಾಡಿಗೆ ಮೈದಾನದಲ್ಲಿಯೇ ಬಿಂದಾಸ್ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಬಾಲಿವುಡ್ ನಟ ಶಾರುಕ್ ಖಾನ್ ಕೂಡಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಗ್ಪುರ ಟೆಸ್ಟ್‌ ಪಂದ್ಯವು ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ ಕೇವಲ ಎರಡೂವರೆ ದಿನಕ್ಕೆ ಪಂದ್ಯ ಮುಕ್ತಾಯವಾಗಿತ್ತು. ಈ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಮಾಡಲಿಳಿಯುವ ಮುನ್ನ ಟೀಂ ಇಂಡಿಯಾ ಆಟಗಾರರು ಕ್ಷೇತ್ರರಕ್ಷಣೆ ಮಾಡಲಿಳಿಯಲು ಸಜ್ಜಾಗಿದ್ದರು. ಈ ಸಂದರ್ಭದಲ್ಲಿ ಸ್ಟೇಡಿಯಂನಲ್ಲಿ ಕೇಳಿ ಬಂದ 'ಝೂಮ್‌ ಜೋ ಪಠಾಣ್' ಸಾಂಗ್‌ಗೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಮೈದಾನದಲ್ಲಿಯೇ ಹೆಜ್ಜೆ ಹಾಕಿದ್ದಾರೆ.

WPL Auction:ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನ ಬಗ್ಗೆ ಆರ್‌ಸಿಬಿ ಮೈಕ್‌ ಹೆಸನ್ ಹೇಳಿದ್ದೇನು..?

ಇನ್ನು ನೆಟ್ಟಿಗರೊಬ್ಬರು #AskSRK ಟ್ಯಾಗ್‌ ಬಳಸಿ ಶಾರುಕ್ ಖಾನ್‌ಗೆ ಈ ಡ್ಯಾನ್ಸ್‌ ಬಗ್ಗೆ ನೀವೇನನ್ನುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸುಂದರ ಪ್ರತಿಕ್ರಿಯೆ ನೀಡಿರುವ ಶಾರುಕ್ ಖಾನ್, "ಅವರು ನನಗಿಂತಲೂ ಚೆನ್ನಾಗಿಯೇ ಮಾಡಿದ್ದಾರೆ. ನಾನು ವಿರಾಟ್ ಹಾಗೂ ಜಡೇಜಾ ಅವರಿಂದ ಕಲಿತುಕೊಳ್ಳಲಿದ್ದೇನೆ ಎಂದು ಟ್ವೀಟ್ ಮೂಲಕವೇ ಉತ್ತರ ನೀಡಿದ್ದಾರೆ.

ಪಠಾಣ್ ಸಿನಿಮಾದ ಬಗ್ಗೆ ಹೇಳುವುದಾದರೇ, ಶಾರುಕ್ ಖಾನ್‌, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದು, ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯಶ್‌ ರಾಜ್ ಫಿಲ್ಮ್ಸ್‌ ನಿರ್ಮಾಣದ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ನಿರ್ದೇಶನವನ್ನು ಸಿದ್ದಾರ್ಥ್ ಆನಂದ್ ಮಾಡಿದ್ದಾರೆ. ಪಠಾಣ್ ಚಿತ್ರವು ಜನವರಿ 25ರಂದು ಜಗತ್ತಿನಾದ್ಯಂತ ತೆರೆ ಕಂಡಿದ್ದು, ಬಾಕ್ಸ್‌ ಆಫೀಸ್ ಕೊಳ್ಳೆಹೊಡೆದಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

₹5.65 ಲಕ್ಷಕ್ಕೆ Nissan 7 ಸೀಟರ್‌ ಕಾರು; 6 ಏರ್‌ಬ್ಯಾಗ್‌, 19.6 kmpl ಮೈಲೇಜ್‌, ಫೀಚರ್ಸ್‌ ಸೂಪರ್‌!
ರಾಹುಲ್ ದ್ರಾವಿಡ್ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕದ್ದುಮುಚ್ಚಿ ಮ್ಯಾಚ್ ನೋಡುತ್ತಿದ್ದದ್ದು ಯಾಕೆ? ಆ ಸತ್ಯ ಬಿಚ್ಚಿಟ್ಟ ಗಂಗೂಲಿ