ಹೋಗಿ ಹೋಗಿ ನಾಯಿ ಬಾಲ ನೆಟ್ಟಗೆ ಮಾಡಲು ಹೋದ್ರಾ ಸಾರಾ ತೆಂಡೂಲ್ಕರ್? ಬೇರೇನೂ ಸಿಗಲಿಲ್ವಾ?

Published : Oct 08, 2025, 01:14 PM IST
Sara Tendulkar

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಾರಾ ತೆಂಡೂಲ್ಕರ್ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಭಾವಿ ಅತ್ತಿಗೆ ಜೊತೆಗಿರುವ ಸಾರಾ ತೆಂಡೂಲ್ಕರ್ ಏನು ಮಾಡಿದ್ದಾರೆ ನೀವೇ ನೋಡಿ. 

ಕ್ರಿಕೆಟ್ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಸಚಿನ್ ತೆಂಡೂಲ್ಕರ್ (Sachin Tendulkar) ಮಗಳು ಸಾರಾ ತೆಂಡೂಲ್ಕರ್ (Sara Tendulkar), ಭಾವಿ ಅತ್ತಿಗೆ ಜೊತೆ ಮೋಜು ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ಸಾರಾ ತೆಂಡೂಲ್ಕರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಸಾರಾ ತೆಂಡೂಲ್ಕರ್, ಇನ್ಸ್ಟಾಗ್ರಾಮ್ ನಲ್ಲಿ ಚಂದದ ವಿಡಿಯೋಗಳನ್ನು ಪೋಸ್ಟ್ ಮಾಡ್ತಾ, ಬಳಕೆದಾರರ ಗಮನ ಸೆಳೆಯುತ್ತಾರೆ. ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲದ ಸಾರಾ ತೆಂಡೂಲ್ಕರ್ ಇನ್ಸ್ಟಾದಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಸಾರಾ ತೆಂಡೂಲ್ಕರ್ ಜೊತೆ ಭಾವಿ ಅತ್ತಿಗೆ ಸಾನಿಯಾ ಚಂದೋಕ್ ಕೂಡ ಕಾಣಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಾಯಿಮರಿ ಜೊತೆ ಆಟ ಆಡ್ತಿರುವ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ಸಾರಾ ತೆಂಡೂಲ್ಕರ್ ಎಂಜಾಯ್ ಮಾಡ್ತಿರೋದನ್ನು ನೀವು ಕಾಣ್ಬಹುದು.

ನಾಯಿ ಬಾಲವನ್ನು ಮೈಕ್ ಮಾಡ್ಕೊಂಡ ಸಾರಾ ತೆಂಡೂಲ್ಕರ್ : 

ಸಾರಾ ತೆಂಡೂಲ್ಕರ್, ತಮ್ಮ ನೆಚ್ಚಿನ ನಾಯಿ ಜೊತೆ ಈ ವಿಡಿಯೋದಲ್ಲಿ ಆಟವಾಡ್ತಿದ್ದಾರೆ. ಎರಡು ನಾಯಿಗಳನ್ನು ಮುದ್ದಿಸ್ತಿದ್ದಾರೆ. ನಾಯಿ ಬಾಲವನ್ನು ಹಿಡಿದು ಮೈಕ್ ಚೆಕ್ ಅಂತಿರೋದನ್ನು ವಿಡಿಯೋದಲ್ಲಿ ನೀವು ಕಾಣ್ಬಹುದು. ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಇಬ್ಬರು ಅತ್ತಿಗೆಯಂದಿರ ಮಸ್ತಿ ಅಂತ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಬಹುತೇಕ ಕಮೆಂಟ್ ನಲ್ಲಿ ಕ್ರಿಕೆಟರ್ ಶುಭಮನ್ ಗಿಲ್ ಎಮೋಜಿಯನ್ನು ಕಾಣ್ಬಹುದು.

ಇಂಗ್ಲೆಂಡ್‌ನಲ್ಲೂ ಕಾಂತಾರಾ ಮೋಡಿ, ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್

ಸಾರಾ ತೆಂಡೂಲ್ಕರ್ ಜೊತೆ ಸಾನಿಯಾ ಚಂದೋಕ್ : 

ವಿಡಿಯೋದಲ್ಲಿರುವ ಸಾರಾ ತೆಂಡೂಲ್ಕರ್ ಜೊತೆ ಸಾನಿಯಾ ಚಂದೋಕ್ ಅವ್ರನ್ನು ಕಾಣ್ಬಹುದು. ಸಾನಿಯಾ ಚಂದೋಕ್, ಅರ್ಜುನ್ ತೆಂಡೂಲ್ಕರ್ ಮದುವೆ ಯಾಗಲಿರುವ ಹುಡುಗಿ. ಕೆಲ ದಿನಗಳ ಹಿಂದೆ ಇಬ್ಬರು ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ಅರ್ಜುನ್ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ್ಮೇಲೆ ಸಾರಾ ಹಾಗೂ ಸಾನಿಯಾ ಸ್ನೇಹಿತೆಯರಾಗಿಲ್ಲ. ಇಬ್ಬರೂ ಅನೇಕ ವರ್ಷಗಳಿಂದ ಪರಿಚಿತರು. ದುಬೈ, ಆಸ್ಟ್ರೇಲಿಯಾಕ್ಕೆ ಇಬ್ಬರು ಅನೇಕ ಬಾರಿ ಒಟ್ಟಿಗೆ ಹೋಗಿ ಬಂದಿದ್ದಾರೆ. ಇಬ್ಬರ ಮಧ್ಯೆ ಉತ್ತಮ ಸ್ನೇಹ ಇದೆ.

ಸಾನಿಯಾಗಿಂತ ಅರ್ಜುನ್ ಚಿಕ್ಕವರು? : 

ಸಾನಿಯಾ ತೆಂಡೂಲ್ಕರ್ ಹಾಗೂ ಅರ್ಜುನ್ ನಿಶ್ಚಿತಾರ್ಥದ ಬಗ್ಗೆ ಸಚಿನ್ ತೆಂಡೂಲ್ಕರ್ ಸ್ಪಷ್ಟನೆ ನೀಡ್ತಿದ್ದಂತೆ ಇದ್ರ ಬಗ್ಗೆ ಜನರು ಇಂಟರೆಸ್ಟ್ ತೋರಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ , ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡ್ತಿದ್ದಾರೆ. ಅರ್ಜುನ್ ಸೆಪ್ಟೆಂಬರ್ 24, 1999 ರಂದು ಜನಿಸಿದ್ರೆ, ಸಾನಿಯಾ ಚಂದೋಕ್ ಜೂನ್ 23, 1998 ರಂದು ಜನಿಸಿದ್ದಾರೆ. ಅರ್ಜುನ್ ಗೆ 26 ವರ್ಷವಾದ್ರೆ ಸಾನಿಯಾಗೆ 27 ವರ್ಷ.

ಗಿಫ್ಟ್ ಸಿಕ್ಕ ಕಾರನ್ನು ಭಾರತಕ್ಕೆ ತರುವಂತಿಲ್ಲ ಅಭಿಷೇಕ್ ಶರ್ಮಾ, ಕಾರಣ ಏನು?

ಏನು ಮಾಡ್ತಿದ್ದಾರೆ ಸಾರಾ ತೆಂಡೂಲ್ಕರ್? : 

ಸಚಿನ್ ತೆಂಡೂಲ್ಕರ್ ಪತ್ನಿ ಸಾರಾ ತೆಂಡೂಲ್ಕರ್ ಗೆ 27 ವರ್ಷ ವಯಸ್ಸು. ಸಾರಾ ತೆಂಡೂಲ್ಕರ್ ಮುಂಬೈನಲ್ಲಿ ತಮ್ಮದೇ ಆದ ಪೈಲೇಟ್ಸ್ ಸ್ಟುಡಿಯೋ ತೆರೆದಿದ್ದಾರೆ. ಇದ್ರಲ್ಲಿ ಪೈಲೇಟ್ಸ್ ವ್ಯಾಯಾಮದ ಬಗ್ಗೆ ತರಬೇತಿ ನೀಡಲಾಗುತ್ತದೆ. ಸಾರಾ ತೆಂಡೂಲ್ಕರ್ ಮಾಡಲಿಂಗ್ ಸೇರಿದಂತೆ ಬೇರೆ ಕೆಲ್ಸದಲ್ಲಿ ಬ್ಯುಸಿ ಇದ್ದಾರೆ. ಸಾರಾ ಯಾರನ್ನು ಮದುವೆ ಆಗ್ತಾರೆ ಎನ್ನುವ ಕುತೂಹಲ ತೆಂಡೂಲ್ಕರ್ ಅಭಿಮಾನಿಗಳಿಗಿದೆ. ಸಾರಾ ತೆಂಡೂಲ್ಕರ್ ಹೆಸರು ಅನೇಕ ಸ್ಟಾರ್ ಕ್ರಿಕೆಟರ್ ಜೊತೆ ಥಳುಕು ಹಾಕಿಕೊಂಡಿದೆ. ಮೊದಲು ಶುಬನಮ್ ಗಿಲ್ ಹೆಸರು ಕೇಳಿ ಬಂದಿತ್ತು. ಆ ನಂತ್ರ ಸಿಂಧತ್ ಚತುರ್ವೇದಿ ಜೊತೆ ಕೇಳಿ ಬಂದಿತ್ತು.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ