ಈ ವರ್ಷದ ಜನವರಿಯಲ್ಲಿ ಅಚ್ಚರಿಯ ರೀತಿಯಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಬೇರ್ಪಟ್ಟಿದ್ದರು. ಇನ್ನು ಇದರ ಬೆನ್ನಲ್ಲೇ ಶೋಯೆಬ್ ಮಲಿಕ್, ಪಾಕಿಸ್ತಾನ ಮೂಲದ ಮಾಡೆಲ್ ಸನಾ ಜಾವೆದ್ ಅವರನ್ನು ಮದುವೆಯಾಗಿದ್ದರು.
ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತಾವೀಗ ಇನ್ನೂ ಹೊಸ ಪ್ರೀತಿಯನ್ನು ಹುಡುಕುತ್ತಿರುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನಾ ಪಡೆದ ಬಳಿಕ ಮೊದಲ ಬಾರಿಗೆ ಮೂಗುತಿ ಸುಂದರಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.
ಈ ವರ್ಷದ ಜನವರಿಯಲ್ಲಿ ಅಚ್ಚರಿಯ ರೀತಿಯಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಬೇರ್ಪಟ್ಟಿದ್ದರು. ಇನ್ನು ಇದರ ಬೆನ್ನಲ್ಲೇ ಶೋಯೆಬ್ ಮಲಿಕ್, ಪಾಕಿಸ್ತಾನ ಮೂಲದ ಮಾಡೆಲ್ ಸನಾ ಜಾವೆದ್ ಅವರನ್ನು ಮದುವೆಯಾಗಿದ್ದರು. ಇದೀಗ ಮುಂಬರುವ "ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ"ದಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕಾರ್ಯಕ್ರಮದ ಹೋಸ್ಟ್ ಕಪಿಲ್ ಶರ್ಮಾ, ಶಾರುಖ್ ಖಾನ್ ನಿಮ್ಮ ಜೀವನಾಧಾರಿತ ಸಿನಿಮಾದಲ್ಲಿ ಹೀರೋ ಆಗಲು ರೆಡಿ ಇದ್ದಾರೆ ಎಂದು ನೆನಪಿಸಿದ್ದಾರೆ. ಆಗ ಸಾನಿಯಾ ಮಿರ್ಜಾ, "ನಾನು ಇನ್ನಷ್ಟೇ ಪ್ರೀತಿ ಹುಡುಕಬೇಕು' ಎಂದು ಹೇಳಿದ್ದಾರೆ.
ಟಿ20 ಹಾಗೂ ಏಕದಿನ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಕ್ರಿಕೆಟಿಗರಿವರು..!
ಹೀಗಿದೆ ನೋಡಿ ಆ ವಿಡಿಯೋ:
ಇನ್ನು 2016ರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ಸಾನಿಯಾ ಮಿರ್ಜಾ ಬಯೋಪಿಕ್ 'ಏಸ್ ಅಗೇನ್ಸ್ಟ್ ಆಡ್ಸ್' ಟೈಟಲ್ ಬಿಡುಗಡೆ ಮಾಡಿದ್ದರು. ಆ ಬಳಿಕ ಮಾತನಾಡಿದ್ದ ಶಾರುಖ್ ಖಾನ್, "ಯಾವಾಗ ಸಾನಿಯಾ ಮಿರ್ಜಾ ಅವರ ಕುರಿತಾದ ಸಿನಿಮಾ ಆಗಲಿದೆಯೋ, ನನ್ನ ಪ್ರಕಾರ ನಾನಂತೂ ಅವರಿಂದ ಸ್ಪೂರ್ತಿಗೊಂಡಿದ್ದೇನೆ. ಅವರ ಈ ಜರ್ನಿ ಅದ್ಭುತವಾದದ್ದು. ನನಗೆ ಗೊತ್ತಿಲ್ಲ, ಒಂದು ವೇಳೆ ಒಪ್ಪಿದರೆ, ಅವರ ಲವ್ ಸ್ಟೋರಿಯಲ್ಲಿ ನಟಿಸಬೇಕು ಎನ್ನುವ ಆಸಕ್ತಿಯಿಂದೆ. ಆದರೆ ಖಂಡಿತವಾಗಿಯೂ ಅವರ ಸಿನಿಮಾಗೆ ನಾನು ಪ್ರಡ್ಯೂಸ್ ಮಾಡುತ್ತೇನೆ" ಎಂದು ಹೇಳಿದ್ದರು.
T20 World Cup 2024: ಲೋ ಸ್ಕೋರ್ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ!
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ 2010ರಲ್ಲಿ ಹೈದರಾಬಾದ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇನ್ನು ಈ ಜೋಡಿ 8 ವರ್ಷಗಳ ಬಳಿಕ 2018ರಲ್ಲಿ ಈ ಜೋಡಿ ಇಜಾನ್ ಮಿರ್ಜಾ ಮಲಿಕ್ ಎನ್ನುವ ಗಂಡು ಮಗುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದರು.