
ಕೊಚ್ಚಿ(ಡಿ.23): ಈ ಬಾರಿಯ ಐಪಿಎಲ್ ಮಿನಿ ಹರಾಜು ಭಾರಿ ಸಂಚಲನ ಸೃಷ್ಟಿಸಿದೆ. ಈ ಹಿಂದಿನ ಎಲ್ಲಾ ಹರಾಜಿನ ದಾಖಲೆಗಳು ಪುಡಿ ಪುಡಿಯಾಗಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತದ ಬಿಡ್ಡಿಂಗ್ ಇದೇ ಮಿನಿ ಹರಾಜಿನಲ್ಲಿ ನಡೆದಿದೆ. ಎರಡನೇ ಗರಿಷ್ಠ ಮೊತ್ತದ ದಾಖಲೆಯೂ ಇದೇ ಹರಾಜಿನಲ್ಲಿ ಸೃಷ್ಟಿಯಾಗಿದೆ. ಈ ಮೂಲಕ ಈ ಬಾರಿಯ ಮಿನಿ ಹರಾಜು ಹಲವು ಕಾರಣಗಳಿಂದ ಸಂಚಲನ ಸೃಷ್ಟಿಸಿದೆ. ಮಿನಿ ಹರಾಜು ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಸ್ಯಾಮ್ ಕುರ್ರನ್ ಬರೋಬ್ಬರಿ 18.50 ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದರು. ಪಂಜಾಬ್ ಕಿಂಗ್ಸ್ 18.50 ಕೋಟಿ ರೂಪಾಯಿ ನೀಡಿ ಸ್ಯಾಮ್ ಕುರ್ರನ್ ಖರೀದಿಸಿತು.
2023ರ ಮಿನಿ ಹರಾಜಿಗೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲಾದ ಕೀರ್ತಿ ಸೌತ್ ಆಫ್ರಿಕಾದ ಕ್ರಿಸ್ ಮೊರಿಸ್ ಪಾಲಾಗಿತ್ತು. 2021ರಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದರು. ಇದೀ ಗರಿಷ್ಠ ಮೊತ್ತದ ಬಿಡ್ಡಿಂಗ್ ಆಗಿತ್ತು. ಆದರೆ ಈ ಬಾರಿ ಸ್ಯಾಮ್ ಕುರನ್ 18.50 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
IPL Auction 2023 ಕೊನೆಗೂ ಕನ್ನಡಿಗನ ಖರೀದಿಸಿದ ಆರ್‌ಸಿಬಿ!
ಇದರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ 17.50 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾದರು. ಇದು ಕೂಡ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತಕ್ಕೆ ಸೇಲ್ ಆದ ದಾಖಲೆಯಾಗಿದೆ. ಗ್ರೀನ್ ಖರೀದಿಗೆ ಹಲವು ಫ್ರಾಂಚೈಸಿಗಳು ಮುಗಿ ಬಿದ್ದಿತ್ತು. ಪಟ್ಟು ಬಿಡದ ಮುಂಬೈ ಇಂಡಿಯನ್ಸ್ ಕ್ಯಾಮರೂನ್ ಗ್ರೀನ್ ಖರೀದಿಸುವಲ್ಲಿ ಯಶಸ್ವಿಯಾಯಿತು.
ಐಪಿಎಲ್ ಹರಾಜು 2023ರಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಕ್ರಿಕೆಟಿಗರು
ಸ್ಯಾಮ್ ಕುರ್ರನ್: 18.50 ಕೋಟಿ ರೂಪಾಯಿ, ಪಂಜಾಬ್ ಕಿಂಗ್ಸ್ ತಂಡ ಖರೀದಿ
ಕ್ಯಾಮರೂನ್ ಗ್ರೀನ್: 17.50 ಕೋಟಿ ರೂಪಾಯಿ, ಮುಂಬೈ ಇಂಡಿಯನ್ಸ್ ತಂಡ ಖರೀದಿ
ಬೆನ್ ಸ್ಟೋಕ್ಸ್; 16.25 ಕೋಟಿ ರೂಪಾಯಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿ
ನಿಕೋಲಸ್ ಪೂರನ್: 16 ಕೋಟಿ ರೂಪಾಯಿ, ಲಖನೌ ಸೂಪರ್ ಜೈಂಟ್ಸ್ ತಂಡ ಖರೀದಿ
ಹ್ಯಾರಿ ಬ್ರೂಕ್: 13.25 ಕೋಟಿ ರೂಪಾಯಿ, ಸನ್‌ರೈಸರ್ಸ್ ಹೈದರಾಬಾದ್
ಮಯಾಂಕ್ ಅಗರ್ವಾಲ್; 8.25 ಕೋಟಿ ರೂಪಾಯಿ, ಸನ್‌ರೈಸರ್ಸ್ ಹೈದರಾಬಾದ್
ಶಿವಂ ಮಾವಿ; 6 ಕೋಟಿ ರೂಪಾಯಿ, ಗುಜರಾತ್ ಟೈಟಾನ್ಸ್
ಜೇಸನ್ ಹೋಲ್ಡರ್; 5.75 ಕೋಟಿ ರೂಪಾಯಿ, ರಾಜಸ್ಥಾನ ರಾಯಲ್ಸ್
ಮುಕೇಶ್ ಕುಮಾರ್; 5.5 ಕೋಟಿ ರೂಪಾಯಿ, ಡೆಲ್ಲಿ ಕ್ಯಾಪಿಟಲ್ಸ್
ಹೆನ್ರಿಚ್ ಕ್ಲಾಸೆನ್, 5.25 ಕೋಟಿ ರೂಪಾಯಿ, ಸನ್‌ರೈಸರ್ಸ್ ಹೈದರಾಬಾದ್
IPL Auction 2023 ಕನ್ನಡಿಗ ಮಯಾಂಕ್‌ಗೆ ಢಬಲ್ ಧಮಾಕ, 8.25 ಕೋಟಿ ಮೊತ್ತಕ್ಕೆ ಸನ್‌ರೈಸರ್ಸ್ ಪಾಲು!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.