IPL Auction 2023 ಕೊನೆಗೂ ಕನ್ನಡಿಗನ ಖರೀದಿಸಿದ ಆರ್‌ಸಿಬಿ!

By Suvarna NewsFirst Published Dec 23, 2022, 7:33 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೊನೆಗೂ ಒರ್ವ ಕನ್ನಡಿಗ ಸೇರಿಕೊಂಡಿದ್ದಾರೆ. ಮಿನಿ ಹರಾಜಿನಲ್ಲಿ  ಕರ್ನಾಟಕದ ಪ್ರಮುಖ ಆಟಗಾರರ ಖರೀದಿಗೆ ಆಸಕ್ತಿ ತೋರದ ಆರ್‌ಸಿಬಿ ಕೊನೆಗೂ ಯುವ ಪ್ರತಿಭಾನ್ವಿತ ಕ್ರಿಕೆಟಿಗನಿಗೆ ಮಣೆ ಹಾಕಿದೆ.

ಕೊಚ್ಚಿ(ಡಿ.23): ಐಪಿಎಲ್ 2023ಕ್ಕೆ ತಯಾರಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ ಅನ್ನೋ ಕೊರಗನ್ನು ತಂಡ ನೀಗಿಸಿದೆ. ಐಪಿಎಲ್ ಮನಿ ಹರಾಜಿನಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಸೇರಿದಂತೆ ಟೀಂ ಇಂಡಿಯಾಗೆ ಆಡಿದ ಪ್ರಮುಖ ಆಟಗಾರರನ್ನು ಖರೀದಿಸಲು ನಿರಾಸಕ್ತಿ ತೋರಿದ್ದ ಆರ್‌ಸಿಬಿ ಕೊನೆಗೆ ಪ್ರತಿಭಾನ್ವಿತ ಯುವ ಕ್ರಿಕೆಟಿಗ ಮನೋಜ್ ಭಂಡಾಜೆ ಮಣೆ ಹಾಕಿದೆ. ಸದ್ಯ ಆರ್‌ಸಿಬಿ ತಂಡದಲ್ಲಿರುವ ಏಕೈಕ ಕನ್ನಡಿಗ ಅನ್ನೋ ಹೆಗ್ಗಳಿಕೆಗೆ ಮನೋಜ್ ಭಂಡಾಜೆ ಪಾತ್ರರಾಗಿದ್ದಾರೆ. ಮನೋಜ್ ಭಂಡಾಜೆ ಮೂಲ ಬೆಲೆ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ತಂಡ ನಿರೀಕ್ಷಿತ ಮಟ್ಟದಲ್ಲಿ ಆಟಗಾರರ ಖರೀದಿಗೆ ಆಸಕ್ತಿ ತೋರಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ ಮನೋಜ್ ಭಂಡಾಜೆ ಖರೀದಿ ಮೂಲಕ  ಅಪ್ಪಟ ಕನ್ನಡ ಮಣ್ಣಿನ ಸೊಗಡಿನ ಆಟಗಾರನೊಬ್ಬ ತಂಡ ಸೇರಿಕೊಂಡ ಸಮಾಧಾನ ಇದೀಗ ಅಭಿಮಾನಿಗಳಿಗೆ ಆಗಿದೆ. ರಾಯಚೂರಿನ ಮನೋಜ್ ಭಂಡಾಜೆ ಆಲ್ರೌಂಡರ್ ಕ್ರಿಕೆಟಿಗನಾಗಿ ದೇಶಿ ಟೂರ್ನಿಗಳಲ್ಲಿ ಮಿಂಚಿದ್ದಾರೆ.

IPL Auction 2023 ನಾಮಕಾವಾಸ್ತೆಗೆ ಬಿಡ್ಡಿಂಗ್ ಮಾಡಿ ತೆಪ್ಪಗೆ ಕೂತ ಆರ್‌ಸಿಬಿ ಫುಲ್ ಟ್ರೋಲ್!

ಎಡಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಮೀಡಿಯಂ ಫಾಸ್ಟ್ ಬೌಲರ್ ಆಗಿರುವ ಮನೋಜ್ ಭಂಡಾಜೆ, 2019ರಲ್ಲಿ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಮೂಲಕ ದೇಶಿಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 

ಮನೋಜ್ ಭಂಡಾಜೆ ಬೆನ್ನಲ್ಲೇ ಮತ್ತೊರ್ವ ಯುವ ಕ್ರಿಕೆಟಿಗ, ಉತ್ತರಖಂಡದ ರಾಜನ್ ಕುಮಾರ್‌ಗೆ ಆರ್‌ಸಿಬಿ ಮಣೆ ಹಾಕಿದೆ. 20 ಲಕ್ಷ ರೂಪಾಯಿ ಮೂಲ ಬೆಲೆಯ ರಾಜನ್ ಕುಮಾರ್‌ಗೆ 70 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ಖರೀದಿಸಿದೆ. ಇನ್ನು ಅಲ್ರೌಂಡರ್ ಸೋನು ಯಾದವ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.

ಐಪಿಎಲ್ 2023 ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ವಿವರ

ವಿಲ್ ಜಾಕ್ಸ್, 3.2 ಕೋಟಿ ರೂಪಾಯಿ
ರೀಸ್ ಟಾಪ್ಲೆ, 1.90 ಕೋಟಿ ರೂಪಾಯಿ
ಹಿಮಾಂಶು ಶರ್ಮಾ, 20 ಲಕ್ಷ ರೂಪಾಯಿ
ಮನೋಜ್ ಭಂಡಾಜೆ, 20 ಲಕ್ಷ ರೂಪಾಯಿ
ರಾಜನ್ ಕುಮಾರ್, 70 ಲಕ್ಷ ರೂಪಾಯಿ
ಸೋನು ಯಾದವ್, 20 ಲಕ್ಷ ರೂಪಾಯಿ

ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ನಗುವಿಗೆ ಕ್ಲೀನ್ ಬೋಲ್ಡ್, ಹರಾಜಿನಲ್ಲಿ ವೈರಲ್ ವಿಡಿಯೋ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬಾಕಿ ಉಳಿದಿರುವುದು 2.55 ಕೋಟಿ ರೂಪಾಯಿ ಮಾತ್ರ. ಈ ಹಣದಲ್ಲಿ ಆಟಾಗರರ ಖರೀದಿ ಮಾಡಬೇಕಿದೆ. ಆರಂಭದಿಂದಲೂ ಬಹುಬೇಡಿಕೆಯ ಆಟಗಾರರ ಖರೀದಿಗೆ ಆರ್‌ಸಿಬಿ ಹಿಂದೇಟು ಹಾಕಿತ್ತು. ಹಣದ ಅಭಾವದಿಂದ ಆರ್‌ಸಿಬಿ ಐಪಿಎಲ್ ಹರಾಜಿನಲ್ಲಿ ಸುಮ್ಮನೆ ಕುಳಿತಿತ್ತು. ಇದರಿಂದ ಸಾಮಾಜಿಕ ಜಾಲತಾದಲ್ಲಿ ಟ್ರೋಲ್ ಆಯಿತು. 

click me!