IPL Auction ಫ್ರಾಂಚೈಸಿಗಳ ನಿರಾಸಕ್ತಿ ನಡುವೆ 2.4 ಕೋಟಿಗೆ ಸೇಲ್ ಆದ ಕನ್ನಡಿಗ ಮನೀಶ್ ಪಾಂಡೆ!

By Suvarna NewsFirst Published Dec 23, 2022, 6:44 PM IST
Highlights

ಕನ್ನಡಿಗರ ಖರೀದಿಗೆ ಫ್ರಾಂಚೈಸಿ ನಿರಾಸಕ್ತಿ ತೋರುತ್ತಿರುವ ಬೆನ್ನಲ್ಲೇ ಕನ್ನಡಿಗ ಮನೀಶ್ ಪಾಂಡೆ 2.4 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.  

ಕೊಚ್ಚಿ(ಡಿ.23) ಐಪಿಎಲ್ ಹರಾಜಿನಲ್ಲಿ ಕನ್ನಡಿಗರ ಖರೀದಿಗೆ ಫ್ರಾಂಚೈಸಿಗಳು ನಿರಾಸಕ್ತಿ ತೋರಿದೆ. ರಾಜ್ಯಗಳಿಗೆ ಹೋಲಿಸಿದರೆ ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿದರೆ ಅತೀ ಹೆಚ್ಚು ಆಟಗಾರರು ಕರ್ನಾಟಕಿಂದ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಬೆರಳೆಣಿಕೆ ಆಟಗಾರರು ಮಾತ್ರ ಮಾರಾಟವಾಗಿದ್ದಾರೆ. ಮಯಾಂಕ್ ಅಗರ್ವಾಲ್ ಬಳಿಕ ಇದೀಗ ಮನೀಶ್ ಪಾಂಡೆ ಮಾರಾಟವಾಗಿದ್ದಾರೆ. ಮನೀಶ್ ಪಾಂಡೆ 2.4 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. 

ಕನ್ನಡಿಗರ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ನಿರಾಸಕ್ತಿ ತೋರಿತು. ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವ ಆರ್‌ಸಿಬಿ ಕೂಡ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಹಲವು ಯುವ ಪ್ರತಿಭಟೆಗಳು ಮಾರಾಟವಾಗಲಿಲ್ಲ. ಮಯಾಂಕ್ ಅಗರ್ವಾಲ್ ಬಳಿಕ ಕನ್ನಡಿಗ ಮನೀಶ್ ಪಾಂಡೆ ಖರೀದಿಗೆ ಫ್ರಾಂಚೈಸಿಗಳು ಆಸಕ್ತಿ ತೋರಿತು. ಇದರಿಂದ ಪಾಂಡೆ 2.4 ಕೋಟಿ ಮೊತ್ತಕ್ಕೆ ಸೇಲ್ ಆದರು.

ನಾಮಕಾವಾಸ್ತೆಗೆ ಬಿಡ್ಡಿಂಗ್ ಮಾಡಿ ತೆಪ್ಪಗೆ ಕೂತ RCB ಟ್ರೋಲ್‌...

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಆಟಗಾರರ ಪಟ್ಟಿ
ಮುಕೇಶ್ ಕುಮಾರ್(ವೇಗಿ) 5.5 ಕೋಟಿ ರೂಪಾಯಿ
ಮನೀಶ್ ಪಾಂಡೆ(ಬ್ಯಾಟ್ಸಮನ್) 2.4 ಕೋಟಿ ರೂಪಾಯಿ)
ಫಿಲ್ ಸಾಲ್ಟ್(ವಿಕೆಟ್ ಕೀಪರ್) 2 ಕೋಟಿ ರೂಪಾಯಿ
ಇಶಾಂತ್ ಶರ್ಮಾ(ವೇಗಿ) 50 ಲಕ್ಷ ರೂಪಾಯಿ

ಕಳೆದ ಐಪಿಎಲ್ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಮನೀಶ್ ಪಾಂಡೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಮನೀಶ್ ಪಾಂಡೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಆಡಿದ 6 ಪಂದ್ಯಗಳಲ್ಲಿ 88 ರನ್ ಸಿಡಿಸಿದ್ದರು. 38 ರನ್ ಗರಿಷ್ಠ ಸ್ಕೋರ್ ಆಗಿದೆ. ಐಪಿಎಲ್ ಟೂರ್ನಿಯಲ್ಲಿ ಒಟ್ಟು 150 ಪಂದ್ಯ ಆಡಿರುವ ಮನೀಶ್ ಪಾಂಡೆ 3648 ರನ್ ಸಿಡಿಸಿದ್ದಾರೆ. 121.52 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಪಾಂಡೆ 1 ಶತಕ ಹಾಗೂ 21 ಅರ್ಧಶತಕ ಸಿಡಿಸಿದ್ದಾರೆ.

ಪಾಂಡೆಗೂ ಮೊದಲು ಮಯಾಂಕ್ ಅಗರ್ವಾಲ್ ಖರೀದಿಗೆ ಫ್ರಾಂಚೈಸಿಗಳು ಮುಗಿಬಿದ್ದಿತ್ತು. ತೀವ್ರ ಪೈಪೋಟಿ ನಡುವೆ ಮಯಾಂಕ್ ಅಗರ್ವಾಲ್ 8.25 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ಪಾಲಾದರು.  

ಕರ್ನಾಟಕದ 16 ಆಟಗಾರರು
ಹರಾಜು ಪಟ್ಟಿಯಲ್ಲಿ ಕರ್ನಾಟಕ 16 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್‌, ಮನೀಶ್‌, ಕರುಣ್‌ ನಾಯರ್‌, ಸುಚಿತ್‌, ಶ್ರೇಯಸ್‌ ಜೊತೆ ಯುವ ತಾರೆಗಳಾದ ರೋಹನ್‌ ಪಾಟೀಲ್‌, ಚೇತನ್‌, ಮನೋಜ್‌, ಶರತ್‌, ವೈಶಾಕ್‌, ಲುವ್‌ನಿತ್‌, ವಿದ್ವತ್‌ ಕಾವೇರಪ್ಪ, ವೆಂಕಟೇಶ್‌, ಕೌಶಿಕ್‌, ಶುಭಾಂಗ್‌, ಸಂಜಿತ್‌ ಕೂಡಾ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಒಟ್ಟು 16 ಆಟಗಾರರ ಪೈಕಿ ಇಬ್ಬರು ಮಾತ್ರ ಮಾರಾಟವಾಗಿದ್ದಾರೆ. ಹಲವು ಆಟಗಾರರ ಅನ್‌ಸೋಲ್ಡ್ ಆಗಿದ್ದಾರೆ.ಕರ್ನಾಟಕದ 16 ಆಟಗಾರರು
ಹರಾಜು ಪಟ್ಟಿಯಲ್ಲಿ ಕರ್ನಾಟಕ 16 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಮಯಾಂಕ್‌, ಮನೀಶ್‌, ಕರುಣ್‌ ನಾಯರ್‌, ಸುಚಿತ್‌, ಶ್ರೇಯಸ್‌ ಜೊತೆ ಯುವ ತಾರೆಗಳಾದ ರೋಹನ್‌ ಪಾಟೀಲ್‌, ಚೇತನ್‌, ಮನೋಜ್‌, ಶರತ್‌, ವೈಶಾಕ್‌, ಲುವ್‌ನಿತ್‌, ವಿದ್ವತ್‌ ಕಾವೇರಪ್ಪ, ವೆಂಕಟೇಶ್‌, ಕೌಶಿಕ್‌, ಶುಭಾಂಗ್‌, ಸಂಜಿತ್‌ ಕೂಡಾ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಒಟ್ಟು 16 ಆಟಗಾರರ ಪೈಕಿ ಇಬ್ಬರು ಮಾತ್ರ ಮಾರಾಟವಾಗಿದ್ದಾರೆ. ಹಲವು ಆಟಗಾರರ ಅನ್‌ಸೋಲ್ಡ್ ಆಗಿದ್ದಾರೆ.

click me!