ಸಚಿನ್ ತೆಂಡುಲ್ಕರ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಜೀವಮಾನ ಶ್ರೇಷ್ಠ ಪ್ರಶಸ್ತಿ ಘೋಷಿಸಿದ ಬಿಸಿಸಿಐ!

Published : Jan 31, 2025, 05:32 PM IST
ಸಚಿನ್ ತೆಂಡುಲ್ಕರ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ; ಜೀವಮಾನ ಶ್ರೇಷ್ಠ ಪ್ರಶಸ್ತಿ ಘೋಷಿಸಿದ ಬಿಸಿಸಿಐ!

ಸಾರಾಂಶ

ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್‌ಗೆ ಬಿಸಿಸಿಐನಿಂದ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ಘೋಷಣೆಯಾಗಿದೆ. 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, ಟೆಸ್ಟ್‌ನಲ್ಲಿ 15,921 ಹಾಗೂ ಏಕದಿನದಲ್ಲಿ 18,426 ರನ್‌ಗಳ ದಾಖಲೆ ನಿರ್ಮಿಸಿದ ಸಚಿನ್, ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ರವಿಶಾಸ್ತ್ರಿ ಮತ್ತು ಫಾರೂಕ್ ಇಂಜಿನಿಯರ್ ನಂತರ ಈ ಪ್ರಶಸ್ತಿ ಪಡೆಯುತ್ತಿದ್ದಾರೆ.

ಬೆಂಗಳೂರು: ಕ್ರಿಕೆಟ್ ದಂತಕಥೆ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಾಧನೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಒಂದು ದಶಕದ ಬಳಿಕ ಬಿಸಿಸಿಐ ಕ್ರಿಕೆಟ್ ದೇವರು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್‌ಗೆ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಘೋಷಿಸಿದೆ. 

ಹೌದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಪ್ರತಿಷ್ಠಿತ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಿದೆ. ಶನಿವಾರ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸಚಿನ್‌ಗೆ ನೀಡಲಾಗುವುದು.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸೀಸ್‌ಗೆ ಬಿತ್ತು ಬಲವಾದ ಹೊಡೆತ; ಸ್ಟಾರ್ ಆಲ್ರೌಂಡರ್ ಟೂರ್ನಿಯಿಂದಲೇ ಔಟ್

ಸಚಿನ್ ತೆಂಡುಲ್ಕರ್‌ ಅವರ ಅದ್ಭುತ ಕ್ರಿಕೆಟ್ ಜೀವನದಲ್ಲಿ, ಭಾರತಕ್ಕಾಗಿ 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 200 ಟೆಸ್ಟ್ ಪಂದ್ಯಗಳು ಮತ್ತು 463 ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಗಳು ಸೇರಿವೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್‌ನಲ್ಲಿ 15,921 ರನ್‌ಗಳು ಮತ್ತು ಏಕದಿನ ಪಂದ್ಯಗಳಲ್ಲಿ 18,426 ರನ್‌ಗಳನ್ನು ಗಳಿಸಿದ್ದಾರೆ.

51 ವರ್ಷದ ಕ್ರಿಕೆಟ್ ದಿಗ್ಗಜನ ಸಾಧನೆಗಳು ಆಟದ ಮೇಲಿನ ಅವರ ಶ್ರದ್ಧೆ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಕೇವಲ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರೂ, ಅವರು ಕ್ರಿಕೆಟ್‌ ಮೇಲೆ ಅವರು ಬೀರಿದ ಪ್ರಭಾವ ಅಪಾರ. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಟೆಸ್ಟ್(200) ಹಾಗೂ ಅತಿಹೆಚ್ಚು ಏಕದಿನ ಪಂದ್ಯ(463)ಗಳನ್ನಾಡಿದ ದಾಖಲೆ ಇಂದಿಗೂ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ. ಇನ್ನು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ದ್ವಿಶತಕ ಬಾರಿಸಿದ ದಾಖಲೆ ಕೂಡಾ ಲಿಟ್ಲ್‌ ಮಾಸ್ಟರ್ ಹೆಸರಿನಲ್ಲಿದೆ.

ರಣಜಿ ಕಮ್‌ಬ್ಯಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಮುಖಭಂಗ; ಒಂದಂಕಿ ಮೊತ್ತಕ್ಕೆ ಔಟ್! ವಿಡಿಯೋ ವೈರಲ್

ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ಬಿಸಿಸಿಐನ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಪಡೆಯುವ ಸಚಿನ್, ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ವಿಕೆಟ್ ಕೀಪಿಂಗ್ ದಿಗ್ಗಜ ಫಾರೂಕ್ ಇಂಜಿನಿಯರ್ ಸೇರಿದಂತೆ ಪ್ರಸಿದ್ಧ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಇವರಿಬ್ಬರಿಗೂ 2023ರಲ್ಲಿ ಈ ಪ್ರಶಸ್ತಿ ನೀಡಲಾಗಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana