ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ನೋಡಬೇಕೆಂಬ ಹಂಬಲ ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲಿ ಇದೆ. ಆದರೆ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿ ಐದೂವರೆ ವರ್ಷಗಳೇ ಉರುಳಿವೆ. ಸಚಿನ್ ನೆನಪಲ್ಲಿ ಕ್ರಿಕೆಟ್ ಪಂದ್ಯ ನೋಡಲು ಹೋದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಕಾರಣ ಸಚಿನ್ ಬ್ಯಾಟ್ ಹಿಡಿದು ಕ್ರೀಸ್‌ಗೆ ಆಗಮಿಸಿದ್ದರು. ಇಷ್ಟೇ ಅಲ್ಲ ಮೊದಲ ಎಸೆತವನ್ನು ಬೌಂಡರಿಗಟ್ಟಿ ಮತ್ತೆ ಖದರ್ ತೋರಿದ್ದರು.
ಮೆಲ್ಬರ್ನ್(ಫೆ.09): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕ್ರಿಕೆಟ್‌ಗೆ ವಿದಾಯ ಹೇಳಿ ಸರಿ ಸುಮಾರು 6 ವರ್ಷಗಳೇ ಉರುಳಿ ಹೋಗಿವೆ. ಸಚಿನ್ ನಿವೃತ್ತಿ ಹೇಳಿದರೂ ಟೀಂ ಇಂಡಿಯಾದ ಪ್ರತಿ ಪಂದ್ಯದಲ್ಲಿ ಸಚಿನ್ ಸಚಿನ್ ಕೂಗು ಇದ್ದೇ ಇರುತ್ತೆ. ಈಗಲೂ ಸಚಿನ್ ಆಟವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಸಚಿನ್ ತೆಂಡುಲ್ಕರ್ ನಿವೃತ್ತಿಯಿಂದ ಹೊರಬಂದು ಮತ್ತೆ ಬ್ಯಾಟಿಂಗ್ ಮಾಡಿದರೆ ಹೇಗೆ? ಇದು ಕನಸಲ್ಲ, ನನಸು. ಸಚಿನ್ ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಿದ್ದಾರೆ.
Sachin is off the mark with a boundary!https://t.co/HgP8Vhnk9s pic.twitter.com/4ZJNQoQ1iQ
— cricket.com.au (@cricketcomau)undefined
ಇದನ್ನೂ ಓದಿ: ಬುಶ್ ಫೈರ್ ಪಂದ್ಯ: ಗಿಲ್ಲಿ ಎದುರು ಪಾಂಟಿಂಗ್ ಪಡೆಗೆ ರೋಚಕ ಜಯ
ಆಸ್ಟ್ರೇಲಿಯಾದ ಕಾಡ್ಗಿಚ್ಚು ಪರಿಹಾರಕ್ಕೆ ಆಯೋಜಿಸಿದ ಪಂದ್ಯದ ಬ್ರೇಕ್ ವೇಳೆ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮಾಡೋ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಎಲ್ಲಿಸ್ ಪೆರ್ರಿ ಎಸೆತ ಮೊದಲ ಎಸೆತವನ್ನು ಬೌಂಡರಿ ಸಿಡಿಸಿದರು. ಈ ಮೂಲಕ ಹಳೇ ಗತ ವೈಭವ ನೆನಪಿಸಿದರು. ಇದೀಗ ಸಚಿನ್ ಬೌಂಡರಿ ವಿಡೀಯೋ ವೈರಲ್ ಆಗಿದೆ.
ಇದನ್ನೂ ಓದಿ: ಟಿ20: ಆಸ್ಪ್ರೇಲಿಯಾ ವಿರುದ್ಧ ಗೆದ್ದ ಭಾರತ.
ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗರ ಪಂದ್ಯ ಆಯೋಜಿಸಿತ್ತು. ರಿಕಿ ಪಾಂಟಿಂಗ್ ನೇತೃತ್ವದ ತಂಡಕ್ಕೆ ಸಚಿನ್ ಕೋಚ್ ಆಗಿದ್ದರು. ಈ ಪಂದ್ಯಕ್ಕೂ ಮುನ್ನ ಆಸೀಸ್ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಚಿನ್ ಬಳಿ ಮನವಿ ಮಾಡಿದ್ದರು. ತಾವು ನಿವೃತ್ತಿಯಿಂದ ಹೊರಬಂದು ಒಂದು ಓವರ್ ಬ್ಯಾಟಿಂಗ್ ಮಾಡಿದರೆ ಅದಕ್ಕಿಂತ ಹೆಚ್ಚು ಖುಷಿ ಮತ್ತೊಂದಿಲ್ಲ. ಪಾಂಟಿಂಗ್ ತಂಡಕ್ಕೆ ಕೋಚ್ ಆಗೋ ಮೂಲಕ ಬುಶ್ ಫೈರ್ ಪಂದ್ಯಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಧನ್ಯವಾದ ಎಂದು ಪೆರ್ರಿಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್, ಉತ್ತಮ ಮನವಿ ಪೆರ್ರಿ. ನಾನೂ ಕೂಡ ಒಂದು ಓವರ್ ಬ್ಯಾಟಿಂಗ್ ಮಾಡಲು ಇಚ್ಚಿಸುತ್ತೇನೆ. ಭುಜದ ನೋವಿರುವ ಕಾರಣ ವೈದ್ಯರು ಬ್ಯಾಟಿಂಗ್ ಮಾಡದಂತೆ ಸೂಚಿಸಿದ್ದರೆ. ಆದರೆ ವೈದ್ಯರ ಸಲಹೆ ದಿಕ್ಕರಿಸಿ ನಾನು ಆಡಲು ಇಚ್ಚಿಸುತ್ತೇನೆ ಎಂದುಸಚಿನ್ ಟ್ವೀಟ್ ಮಾಡಿದ್ದರು.
Sounds great Ellyse. I would love to go out there & bat an over (much against the advice of my doctor due to my shoulder injury).
Hope we can generate enough money for this cause, & to get me out there in the middle.
You can get involved & donate now on https://t.co/IObcYarxKr https://t.co/gl3IVirCBY
ಬುಶ್‌ಫೈರ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ತಂಡ ನಿಗದಿತ 10 ಓವರ್‌ಗೆ 5 ವಿಕೆಟ್ ಕಳೆದುಕೊಂಡು 104ರನ್ ಸಿಡಿಸಿತ್ತು. ಈ ಗುರಿ ಬೆನ್ನಟ್ಟಿದ ಗಿಲ್ ಕ್ರಿಸ್ಟ್ ತಂಡ ಕೇವಲ 1 ರನ್‌ಗಳಿಂದ ವಿರೋಚಿತ ಸೋಲು ಕಂಡಿದೆ.