ಆರ್‌ಸಿಬಿ ಕ್ರಶ್ ಶ್ರೇಯಾಂಕ ಪಾಟೀಲ್‌ ವಿಚಿತ್ರ ಹವ್ಯಾಸ; ಸಂತಸವಾದ್ರೂ, ದುಃಖವಾದ್ರೂ ಪಕ್ಕದಲ್ಲಿರೋರನ್ನ ಕಚ್ಚಿಬಿಡ್ತಾಳೆ

By Sathish Kumar KH  |  First Published Mar 26, 2024, 8:29 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಶ್ ಶ್ರೇಯಾಂಕ ಪಾಟೀಲ್ ಅವರಿಗೆ ಸಂತಸವಾದರೂ, ದುಃಖವಾದ್ರೂ  ಪಕ್ಕದಲ್ಲಿರುವವರಿಗೆ ಪ್ರೀತಿಯಿಂದ ಕಚ್ಚುವ ಹವ್ಯಾಸ ಹೊಂದಿದ್ದಾರೆ ಎಂದು ತಾವೇ ಹೇಳಿಕೊಂಡಿದ್ದಾರೆ.


ಬೆಂಗಳೂರು (ಮಾ.26): ಜಗತ್ತಿನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ಲೀಗ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡ ಐಪಿಎಲ್-2024ರ ಟ್ರೋಫಿ ಗೆಲುವಿನ ರೂವಾರಿ ಶ್ರೇಯಾಂಕ ಪಾಟೀಲ್‌ಗೆ ವಿಚಿತ್ರ ಹವ್ಯಾಸವೊಂದಿದೆ. ಅದು ತನಗೆ ಯಾವುದೇ ಪ್ರೀತಿಯ ಕ್ಷಣವಾಗಲೀ ಅಥವಾ ದುಃಖದ ಕ್ಷಣವಾಗಲೀ ಬಂದರೆ ಪಕ್ಕದಲ್ಲಿರುವವರಿಗೆ ಕಚ್ಚುವ ಅಭ್ಯಾಸವಿದೆ ಅಂತೆ... ಈ ಬಗ್ಗೆ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ...

ಹೌದು, ಜಗತ್ತಿನಲ್ಲಿ ಒಂದು ಲೀಗ್‌ ತಂಡವು ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ ದಾಖಲೆ ನಮ್ಮ ಕರ್ನಾಟಕದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಹೊಂದಿದೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ ಆರ್‌ಸಿಬಿ ತಂಡವು ಕಳೆದ 16 ವರ್ಷಗಳಿಂದ ಒಂದು ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನೂ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಇನ್ನು ಪುರುಷರ ಆರ್‌ಸಿಬಿ ತಂಡ ಈವರೆಗೆ 3 ಬಾರಿ ಫೈನಲ್‌ಗೆ ಬಂದಿದ್ದರೂ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ಆದರೆ, ಆರ್‌ಸಿಬಿ ಮಹಿಳಾ ತಂಡವು ಕಳೆದ 2 ವರ್ಷಗಳಿಂದ ಐಪಿಎಲ್‌ ಆಡಲು ಆರಂಭಿಸಿದೆ. ಕೇವಲ 2ನೇ ವರ್ಷದಲ್ಲಿಯೇ ಆರ್‌ಸಿಬಿ ಮಹಿಳಾ ತಂಡವು ಐಪಿಎಲ್‌ ಟ್ರೋಫಿಯನ್ನು ಎತ್ತಿ ಹಿಡಿದು ಸಾಧನೆ ಮಾಡಿದೆ.

Latest Videos

undefined

ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ!

ಆರ್‌ಸಿಬಿ ಮಹಿಳಾ ತಂಡವು ಐಪಿಎಲ್-2024ರ ಟ್ರೋಫಿಯನ್ನು ಎತ್ತಿ ಹಿಡಿಯಲು ಪ್ರಮುಖ ಪಾತ್ರವಹಿಸಿದವರು ಕನ್ನಡತಿ ಶ್ರೇಯಾಂಕ ಪಾಟೀಲ್‌ ಕೂಡ ಒಬ್ಬರಾಗಿದ್ದಾರೆ. ಅವರೊಂದಿಗೆ ಎಲಿಸ್ ಪೆರ್ರಿ, ಸ್ಮೃತಿ ಮಂಧಾನ ಸೇರಿ ಹಲವರ ಪಾತ್ರವೂ ಸಾಕಷ್ಟಿದೆ. ಹೀಗಿರುವಾಗ, ಕನ್ನಡತಿ ಅದರಲ್ಲಿಯೂ ಖಡಕ್ ರೊಟ್ಟಿ, ಖಾರದ ಚೆಟ್ನಿ ತಿನ್ನುವ ಉತ್ತರ ಕರ್ನಾಟಕದ ಹುಡುಗಿ ಶ್ರೇಯಾಂಕ ಪಾಟೀಲ್‌ ಅತ್ಯಂತ ಹೆಚ್ಚು ಪ್ರಸಿದ್ಧಿ ಹೊಂದುತ್ತಾಳೆ. ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದ ಬಳಿಕ ಶ್ರೇಯಾಂಕ ಪಾಟೀಲ್ ಆರ್‌ಸಿಬಿ ಕ್ರಶ್‌ ಆಗಿದ್ದಾಳೆ.

ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ತಂಡದಲ್ಲಿ ಮಾಡಿದ ಬೌಲಿಂಗ್‌ ಕಮಾಲ್‌ನಿಂದಾಗಿ ಕೋಟ್ಯಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಶ್ರೇಯಾಂಕ ಅವರಿಗೆ ಸಂಬಂಧಪಟ್ಟ ಸಾವಿರಾರು ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿವೆ. ಇದನ್ನು ನೋಡಿ ಕೋಟ್ಯಂತರ ಜನರು ಹೆಮ್ಮೆ ಪಡುತ್ತಿದ್ದಾರೆ. ಇನ್ನು ಶ್ರೇಯಾಂಕ ಪಾಟೀಲ್‌ ಅವರ ಇನ್ನೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ತನಗೆ ಪ್ರೀತಿಯ ಕ್ಷಣಗಳು ಬಂದಾಗ ಹಾಗೂ ದುಃಖದ ಕ್ಷಣಗಳು ಬಂದಾಗ ಪಕ್ಕದಲ್ಲಿರುವವರ (ಪರಿಚಿತರು) ಕೈ, ಭುಜಕ್ಕೆ ಕಚ್ಚುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಂದರೆ, ಪ್ರೀತಿಯಿಂದ ಕಚ್ಚುವ ಹವ್ಯಾಸವನ್ನೂ ಹೊಂದಿದ್ದಾರೆ ಎಂದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

WPL ಕಪ್ ಮಾತ್ರವಲ್ಲ, ಬಹುತೇಕ ಎಲ್ಲಾ ಪ್ರಶಸ್ತಿ ಗೆದ್ದ ನಮ್ಮ ಆರ್‌ಸಿಬಿ..! ಅದರಲ್ಲೂ ರೆಕಾರ್ಡ್

ಸಮಾಜದಲ್ಲಿ ನಮ್ಮ ಜೊತೆಗಿರುವ ಕುಟುಂಬ ಸದಸ್ಯರು, ಸ್ನೇಹಿತರು, ಪ್ರೀತಿ ಪಾತ್ರರು ಅಥವಾ ಪರಿಚಿತರು ಕೂಡ ಇಂತಹ ಅಭ್ಯಾಸವನ್ನು ಹೊಂದಿರುತ್ತಾರೆ. ಉದಾಹರಣೆಗೆ ನಟಿ ರಕ್ಷಿತಾ ಪ್ರೇಮ್‌ ಅವರಿಗೂ ಇಂಥದ್ದೊಂದು ಅಭ್ಯಾಸವಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನ ತೀರ್ಪುಗಾರರಾಗಿರುವ ನಟಿ ಹಾಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಅವರು ತಮಗೆ ಸಂತಸವಾದಾಗ ಪಕ್ಕದಲ್ಲಿರುವ ತೀರ್ಪುಗಾರರ ಭುಜಕ್ಕೆ ಹೊಡೆಯುವ ಅಭ್ಯಾಸವಿದೆ. ಇದು ಕೆಟ್ಟ ಅಭ್ಯಾಸವಲ್ಲ. ತಮ್ಮ ಅತ್ಮೀಯರೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸಿವ ಮಾರ್ಗವೂ ಆಗಿದೆ.

click me!