ಕೊಹ್ಲಿ ದಾಖಲೆ ಮುರಿದು ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ!

By Web Desk  |  First Published Nov 3, 2019, 7:24 PM IST

ಬಾಂಗ್ಲಾದೇಶ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರಾಸೆ ಅನುಭವಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಕಾತರದಲ್ಲಿದ್ದ ರೋಹಿತ್ ಒಂದಂಕಿಗೆ ಪೆವಿಲಿಯನ್ ಸೇರಿದ್ದಾರೆ. ಆದರೆ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
 


ನವದೆಹಲಿ(ನ.03): ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಕೇವಲ 9 ರನ್ ಸಿಡಿಸಿ ಔಟಾಗಿದ್ದಾರೆ. ರೋಹಿತ್ ಬಹುಬೇಗನೆ ವಿಕೆಟ್ ಕೈಚೆಲ್ಲಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೆ 9 ರನ್ ಸಿಡಿಸೋ ಮೂಲಕ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

ಇದನ್ನೂ ಓದಿ: ಅದೇ ಸ್ಟೈಲ್, ಅದೇ ಸಿಕ್ಸರ್; ಈತ ಟೀಂ ಇಂಡಿಯಾದ ಜ್ಯೂ.ಯುವರಾಜ್ ಸಿಂಗ್!

Latest Videos

undefined

ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 91 ಇನ್ನಿಂಗ್ಸ್‌ಗಳಲ್ಲಿ 2452 ರನ್ ಸಿಡಿಸಿದ್ದಾರೆ. ಈ ಮೂಲಕ 67 ಇನಿಂಗ್ಸ್‌ಗಳಲ್ಲಿ 2450 ರನ್ ಸಿಡಿಸಿ ಗರಿಷ್ಠ ಟಿ20 ರನ್ ಸರದಾರ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ. ಸದ್ಯ ರೋಹಿತ್ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಇದನ್ನೂ ಓದಿ:INDvBAN ದೆಹಲಿ ಟಿ20: ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್, RCB ಕ್ರಿಕೆಟಿಗನಿಗೆ ಸ್ಥಾನ!

ಈ ಪಂದ್ಯದಲ್ಲಿ ರೋಹಿತ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ರೋಹಿತ್ ಶರ್ಮಾ ಪಾಲಿಗೆ 99ನೇ ಟಿ20 ಪಂದ್ಯ. ಈ ಮೂಲಕ ಭಾರತದ ಪರ ಗರಿಷ್ಠ ಟಿ20 ಪಂದ್ಯ ಆಡಿದ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ರೋಹಿತ್ ದಾಖಲೆಯಿಂದ ಮೊದಲ ಸ್ಥಾನದಲ್ಲಿದ್ದ ಎಂ.ಎಸ್.ಧೋನಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತದ ಗರಿಷ್ಠ ಟಿ20 ಆಡಿದ ಕ್ರಿಕೆಟಿಗರು
99 ರೋಹಿತ್ ಶರ್ಮಾ
98 ಎಂ.ಎಸ್.ಧೋನಿ
78 ಸುರೇಶ್ ರೈನಾ
72 ವಿರಾಟ್ ಕೊಹ್ಲಿ
58 ಯುವರಾಜ್ ಸಿಂಗ್

click me!