INDvBAN : ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್, ಭಾರತ ತಂಡದಲ್ಲಿ RCB ಕ್ರಿಕೆಟಿಗನಿಗೆ ಸ್ಥಾನ!

By Web Desk  |  First Published Nov 3, 2019, 6:32 PM IST

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಬಾಂಗ್ಲಾದೇಸ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿ ಸ್ಥಾನ ಪಡೆದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.


ನವದೆಹಲಿ(ನ.03): ದೆಹಲಿ ಮಾಲಿನ್ಯದ ಪರಿಣಾಮ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ನಡೆಯುವುದೇ ಅನುಮಾನವಾಗಿತ್ತು. ಆದರೆ ದಿಟ್ಟ ನಿರ್ಧಾರ ಮಾಡಿರುವ ಬಿಸಿಸಿಐ ಕೊನೆಗೂ ಪಂದ್ಯ ಆಯೋಜನೆ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

Tap to resize

Latest Videos

undefined

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ(ಮೊದಲು ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ) ನಡೆಯುತ್ತಿರುವ ಟಿ20 ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಶುಭಾರಂಭದ ನಿರೀಕ್ಷೆಯಲ್ಲಿದೆ. ಮುಂಬೈ  ಮೂಲದ ಸ್ಫೋಟಕ ಬ್ಯಾಟ್ಸ್‌ಮನ್ ಶಿವಂ ದುಬೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಶಕೀಬ್ ಅಲ್ ಹಸನ್ ನಿಷೇಧದಿಂದ ಬಾಂಗ್ಲಾದೇಶ ತಂಡ ಕೀ ಪ್ಲೇಯರ್ ಸೇವೆ ಕಳೆದುಕೊಂಡಿದೆ. ಇದು ಬಾಂಗ್ಲಾ ತಂಡಕ್ಕೆ ತೀವ್ರ ಹೊಡೆತ ನೀಡಲಿದೆ.

click me!