ಮುಂಬರುವ ಟಿ20 ವಿಶ್ವ ಕಪ್‌ನಲ್ಲಿ ರೋಹಿತ್ ಶರ್ಮಾ ಪ್ರದರ್ಶನ, ಅವರ ಐಪಿಎಲ್ ಭವಿಷ್ಯವನ್ನು ನಿರ್ಧರಿಸಬಹುದು ಎಂದೂ ಹೇಳಲಾಗುತ್ತಿದೆ. ಇದೇ ವೇಳೆ ನಾಯಕತ್ವಕ್ಕೆ ತಮ್ಮನ್ನು ಪರಿಗಣಿಸದೆ ಇರುವುದಕ್ಕೆ ಜಸ್‌ಪ್ರೀತ್ ಬುಮ್ರಾ ಕೂಡ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನವದೆಹಲಿ: 2024ರ ಐಪಿಎಲ್ ಟೂರ್ನಿ ಮುಕ್ತಾಯಗೊಂಡ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯ ಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಾಯಕತ್ವ ಹಸ್ತಾಂತರ ವಿಷಯ ದಲ್ಲಿ ತಂಡದ ಮಾಲಿಕರು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ರೋಹಿತ್ ಅಸಮಾಧಾನ ಗೊಂಡಿದ್ದು, 2025ರ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನರೋಹಿತ್ ಬೇರೊಂದು ತಂಡ ಸೇರಬಹುದು ಎನ್ನಲಾಗುತ್ತಿದೆ.
ಮುಂಬರುವ ಟಿ20 ವಿಶ್ವ ಕಪ್‌ನಲ್ಲಿ ರೋಹಿತ್ ಶರ್ಮಾ ಪ್ರದರ್ಶನ, ಅವರ ಐಪಿಎಲ್ ಭವಿಷ್ಯವನ್ನು ನಿರ್ಧರಿಸಬಹುದು ಎಂದೂ ಹೇಳಲಾಗುತ್ತಿದೆ. ಇದೇ ವೇಳೆ ನಾಯಕತ್ವಕ್ಕೆ ತಮ್ಮನ್ನು ಪರಿಗಣಿಸದೆ ಇರುವುದಕ್ಕೆ ಜಸ್‌ಪ್ರೀತ್ ಬುಮ್ರಾ ಕೂಡ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
undefined
ಆರ್‌ಸಿಬಿಗೆ ಇಂದು ಮುಂಬೈ ಎದುರು ಮಾಡು ಇಲ್ಲವೇ ಮಡಿ ಪಂದ್ಯ!
ರೋಹಿತ್ ಶರ್ಮಾ ಅವರನ್ನು ಮುಂದಿನ ಸೀಸನ್ ಐಪಿಎಲ್‌ನಲ್ಲಿ ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಲಖನೌ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೆಚ್ಚು ಒಲವು ತೋರಿವೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರಾದ ಪಾರ್ಥ್ ಜಿಂದಾಲ್, ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ನೀಡಿದ ಕೊಡುಗೆಯನ್ನು ನಮ್ಮ ತಂಡದಲ್ಲಿ ಮಾಡಿದ್ದರೆ, ಡೆಲ್ಲಿ ಸ್ಟೇಡಿಯಂಗೆ ಅವರ ಹೆಸರನ್ನೇ ಇಡುತ್ತಿದ್ದೆವು ಎಂದು ಹೇಳಿದ್ದರು. ಇನ್ನೊಂದೆಡೆ ಲಖನೌ ಸೂಪರ್ ಜೈಂಟ್ಸ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡಾ, ರೋಹಿತ್ ಶರ್ಮಾ ಅವರನ್ನು ಮುಂದಿನ ಸೀಸನ್‌ನಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
IPL 2024 ರಾಜಸ್ಥಾನ ರಾಯಲ್‌ಗೆ ಮೊದಲ ಸೋಲಿನ ಶಾಕ್!
2011ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದಾಗಿ ಎರಡು ವರ್ಷಕ್ಕೆ ಅಂದರೆ 2013ರಲ್ಲಿ ಹಿಟ್‌ಮ್ಯಾನ್‌ಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಅಲ್ಲಿಯವರೆಗೆ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ಮುಂಬೈ ಇಂಡಿಯನ್ಸ್ ಆ ಬಳಿಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಐಪಿಎಲ್‌ನ ಯಶಸ್ವಿ ನಾಯಕರದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ರೋಹಿತ್ ಶರ್ಮಾ ಅವರನ್ನು 17ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಏಕಾಏಕಿ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕ ಪಟ್ಟವನ್ನು ಕಟ್ಟಲಾಗಿತ್ತು. ಇದು ರೋಹಿತ್ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುತ್ತಾರೋ ಅಥವಾ ಅದೇ ತಂಡದಲ್ಲಿ ಮುಂದುವರೆಯುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.